ಉಡುಪಿ (ಕುಂದಾಪುರ) – ಇಲ್ಲಿಯ ಕಮಲಶಿಲೆ ದೇವಸ್ಥಾನದ ಗೋ ಶಾಲೆಯಲ್ಲಿ ದನವನ್ನು ಕಳವು ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ವ್ಯಕ್ತಿಗಳನ್ನು ಪೋಲಿಸರು ಬಂಧಿಸಿದ್ದಾರೆ…!
ದೇಗುಲದ ಸೆಕ್ಯುರಿಟಿ ಗಾರ್ಡ್ ರಾಜು ನೀಡಿದ ದೂರಿನ ಅನ್ವಯ ಶಂಕರ ನಾರಾಯಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು…!!
ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದ ಪೋಲಿಸರು ಕೊನೆಗೂ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ…!
ವಾಜಿದ್ ಜೆ (26) ಮತ್ತು ಫೈಜಲ್ (40) ಬಂಧಿತರು…!!
ಬಂಧಿತ ಆರೋಪಿಗಳಿಂದ ಕ್ರತ್ಯಕ್ಕೆ ಬಳಸಿದ ಹುಂಡೈ ಕ್ರೆಟಾ ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ…!
ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗಳಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ ಆದೇಶ ಹೊರಡಿಸಿದೆ…!!