
ನವದೆಹಲಿ: ಪಿಟಿಐ ಸುದ್ದಿ ಸಂಸ್ಥೆಯ ಸಂದರ್ಶನದಲ್ಲಿ ಮಾತನಾಡುತ್ತಾ ಮೋದಿ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹಾಗೆ ಕೆಲವು ಗೊಂದಲಮಯ ಪ್ರಶ್ನೆಗೂ ಕೂಡ ಉತ್ತರ ನೀಡಿದ್ದಾರೆ.
ಸಂದರ್ಶನದಲ್ಲಿ ಮಾತನಾಡುತ್ತಮೋದಿ ತಮ್ಮ ತಾಯಿಯ ಅಬೂತಪೂರ್ವ ಸೇವೆಗಳ ಬಗ್ಗೆ ಮತ್ತೆ ತಮ್ಮ ಮಗ 13 ವರ್ಷಗಳ ಕಾಲ ಒಂದು ರಾಜ್ಯದ ಮುಖ್ಯಮಂತ್ರಿ ಆಗಿದ್ದು ಮತ್ತೆ 10 ವರ್ಷ ದೇಶದ ಪ್ರಧಾನಿಯಾಗಿ ಕೆಲಸ ಮಾಡಿದರು. ಆದರೆ 100 ವರ್ಷ ತುಂಬಿದ ಅವರ ತಾಯಿ ತನ್ನ ಕೊನೆಯ ದಿನಗಳನ್ನು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆಯುತ್ತಾರೆ. ವಿಭಿನ್ನವಾಗಿದೆ’ ನನ್ನ ಜೀವನ ಎಂದು ಪ್ರಧಾನಿ ಮೋದಿ ಅವರು ಹೇಳಿದರು.
ಈ ಬಾರಿಯ ಚುನಾವಣೆ ಸೇರಿ 2029 ಚುನಾವಣೆಯಲ್ಲೂ ಪ್ರಧಾನಿಯಾಗಿ ಮುಂದುವರಿಯಬೇಕೆಂದು ಅಂದುಕೊಂಡಿದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಸಿದ ಅವರು,
ನನ್ನ ದೇಶ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ‘2047ರ ವೇಳೆಗೆ ಪರಿವರ್ತಿಸುವುದು ನನ್ನ ಧೈಯವಾಗಿದೆ. ಅದಕ್ಕಾಗಿ ನಾನು ನನ್ನ ಪ್ರಯತ್ನವನ್ನು ಮಾಡುತ್ತಿದ್ದೇನೆ ಇನ್ನು ಹೆಚ್ಚಾಗಿ ಮಾಡುವ. ಗುರಿ ಇಟ್ಟಿದ್ದೇನೆ ಹಾಗೆ ಗುರಿ ಮುಟ್ಟುವುದಕ್ಕೆ ಏನು ಬೇಕು ಆ ಪ್ರಯತ್ನವನ್ನು ನಾನು ಮಾಡುತ್ತಿದ್ದೇನೆ. ನಾನು ಸೇವಕನಾಗಿ ಮಾಡುತ್ತೇನೆ ದೇಶದ ಮುಂದಿನ ಪ್ರಧಾನಿ ಯಾರಾಗಬೇಕೆಂದು ಜನ ನಿರ್ಧರಿಸುತ್ತಾರೆ’ ಎಂದರು.
ಚುನಾವಣೆಯಲ್ಲಿ ಬಿಜೆಪಿ ಪಕ್ಷವು ತಮ್ಮ ಹೆಸರನ್ನು ಬ್ರಾಂಡ್ ಆಗಿ ಉಪಯೋಗಿಸಿಕೊಳ್ಳುತ್ತಿದೆ ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಬ್ರಾಂಡ್ ಎಂದರೇನು ಅದು ಹೇಗೆ ಕೆಲಸ ಮಾಡುತ್ತದೆ ಎಂದು ನನಗೆ ತಿಳಿದಿಲ್ಲ. ದೇಶದ ಜನರು ಮೋದಿ ಜೀವನ ಮತ್ತು ಅವರ ಕಾರ್ಯಗಳನ್ನು ಗಮನಿಸುತ್ತಾರೆ ಅಷ್ಟೇ’ ಎಂದು ಹೇಳಿದರು
ಬಿಜೆಪಿ ಪಕ್ಷದ ‘ಬ್ರಾಂಡ್ ಮೋದಿ’ ಕುರಿತು ಮಾತನಾಡಿದ ಅವರು, 20 ವರ್ಷಕ್ಕೂ ಅಧಿಕ ಸಾರ್ವಜನಿಕ ಜೀವನದಲ್ಲಿ ಗಳಿಸಿದ ಜನರ ನಂಬಿಕೆಯ ವಿಶ್ವಾಸ ಫಲಿತಾಂಶ ಇದಾಗಿದ್ದು, ಸಮಾಜವನ್ನು ಸುಧಾರಿಸಲು ನಾನು ಪಟ್ಟ ಶ್ರಮವನ್ನ ಸಮಾಜ ಹಾಕು, ಜನರ ನೋಡಿದ್ದಾರೆ ಅದಕ್ಕಾಗಿ ಜನರು ನನ್ನನ್ನು ಗುರುತಿಸುತ್ತಿದ್ದಾರೆ ಹಾಗೂ ಮೆಚ್ಚಿಕೊಂಡಿದ್ದಾರೆ ಎಂದು ಹೇಳಿದರು.
ಚುನಾವಣಾ ಪ್ರಚಾರದ ಬಗ್ಗೆ ಮಾತನಾಡಿದ ಅವರು, ‘ಉರಿ ಬಿಸಿಲಿನಲ್ಲಿಯೂ ಬಿಸಿಲನ್ನ ಲಕ್ಕಿಸದೆ ಜನರು ನನ್ನ ರೋಡ್ ಶೋ, ರ್ಯಾಲಿ ಅಲ್ಲಿ ಭಾಗವಹಿಸುತ್ತಿದ್ದಾರೆ. ಮಕ್ಕಳು, ಹಿರಿಯರು ಸೇರಿ ಎಲ್ಲ ವಯಸ್ಸಿನವರು ನನ್ನನ್ನು ನೋಡಲು, ನನ್ನ ಭಾಷಣವನ್ನು ಕೇಳಲು ಬರುತ್ತಾರೆ’ ಎಂದು ಹೇಳಿದರು.