*ಪ್ರಧಾನಿ ನರೇಂದ್ರ ಮೋದಿಯವರನ್ನು ಸಂಪರ್ಕಿಸುವುದು ಹೇಗೆ…? ಇಲ್ಲಿದೆ ಮಾಹಿತಿ…!*
ಒಂದು ದೇಶವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತ ಪ್ರಧಾನಿ ದೇಶದ ಪ್ರತಿಯೊಬ್ಬ ಪ್ರಜೆಗೂ ಲಭ್ಯವಿರ ಬೇಕಾಗುತ್ತದೆ…!
ಪ್ರಜಾ ಸೇವೆಗೆ ಅಂಕಿತವಾದ ಮೇಲೆ ಹಗಲು ರಾತ್ರಿ ಎನ್ನದೆ ದುಡಿಯಬೇಕಾಗುತ್ತದೆ…!!
ಇದೇ ಕಾರಣಕ್ಕಾಗಿ ದೇಶದ ಯಾವುದೇ ಸರ್ಕಾರಿ ಕಚೇರಿಗಿಂತಲೂ ಪ್ರಧಾನ ಮಂತ್ರಿ ಕಾರ್ಯಾಲಯ ಅತಿಹೆಚ್ಚು ಚಟುವಟಿಕೆಯಿಂದ ಕೂಡಿರುತ್ತದೆ…!
ಇಂತಹ ಪ್ರಧಾನ ಮಂತ್ರಿಗಳ ಕಾರ್ಯಾಲಯವನ್ನು ಹಾಗೂ ಪ್ರಧಾನಿಗಳನ್ನು ಸಂಪರ್ಕಿಸುವುದು ಹೇಗೆ ಎಂಬುದು ದೇಶದ ಪ್ರತಿಯೊಬ್ಬ ಪ್ರಜೆಯೂ ತಿಳಿದಿರಲೇ ಬೇಕು…!!
ಪ್ರಧಾನಿ ಕಾರ್ಯಾಲವಯವನ್ನು ಸಾರ್ವಜನಿಕರು ಸಂಪರ್ಕಿಸಲು ಹಲವು ಮಾರ್ಗಗಳಿದ್ದು, ಪತ್ರ ಮತ್ತು ಫ್ಯಾಕ್ಸ್, ಇ-ಮೇಲ್, ಫೇಸ್ ಬುಕ್, ಟ್ವಿಟ್ಟರ್, ವೆಬ್ ಸೈಟ್, ಮೊಬೈಲ್ ಸಂಖ್ಯೆ ಮೂಲಕ ದೇಶದ ಪ್ರತಿಯೊಬ್ಬ ನಾಗರೀಕನೂ ಪ್ರಧಾನ ಮಂತ್ರಿಗಳನ್ನು ಹಾಗೂ ಪ್ರಧಾನಿ ಕಾರ್ಯಾಲಯವನ್ನು ಸಂಪರ್ಕಿಸಬಹುದಾಗಿದೆ…!
ತನ್ನ ಸಮಸ್ಯೆ ಹೇಳಿ ಆ ಸಮಸ್ಯೆಯನ್ನು ಬಗೆ ಹರಿಸಿಕೊಳ್ಳಬೇಕಾದ್ದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯ ಹಾಗೂ ಹಕ್ಕು…!ಇದೇ ಕಾರಣಕ್ಕಾಗಿ ಪ್ರಧಾನ ಮಂತ್ರಿ ಕಾರ್ಯಾಲಯ ಪರಿಣಾಮಕಾರಿಯಾಗಿ ದೇಶದ ಪ್ರತಿಯೊಬ್ಬ ಪ್ರಜೆಯನ್ನೂ ತಲುಪುವ ನಿಟ್ಟಿನಲ್ಲಿ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆ…!!
ನೀವು ನರೇಂದ್ರ ಮೋದಿ ಅಥವಾ ಪ್ರಧಾನಿ ಕಚೇರಿಯನ್ನು (ಪಿಎಂಒ) ಸಂಪರ್ಕಿಸಲು ಬಯಸುತ್ತೀರಾ…?, ಹಾಗಾದರೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ…!
1) ನೇರ ಸಂವಹನಕ್ಕಾಗಿ, ನೀವು 011-23386447 ಗೆ ಫೋನ್ ಮೂಲಕ ಪ್ರಧಾನಿ ಕಛೇರಿಯನ್ನು ಸಂಪರ್ಕಿಸಬಹುದು…!!
ಈ ಸಂಖ್ಯೆಯು ನಿಮ್ಮನ್ನು ಪ್ರಧಾನ ಮಂತ್ರಿಗಳ ಕಾರ್ಯಾಲಯದಲ್ಲಿ ಸಂವಹನಗಳನ್ನು ನಿರ್ವಹಿಸುವ ಜಂಟಿ ಕಾರ್ಯದರ್ಶಿ ಶ್ರೀ ರೋಹಿತ್ ಯಾದವ್ ಅವರೊಂದಿಗೆ ಸಂಪರ್ಕಿಸುತ್ತದೆ…!
ಯಾವುದೇ ಅಧಿಕೃತ ವಿಚಾರಣೆಗಳು, ನೇಮಕಾತಿಗಳು ಅಥವಾ ಪ್ರಧಾನ ಮಂತ್ರಿ ಕಚೇರಿಯಿಂದ ಗಮನ ಅಗತ್ಯವಿರುವ ವಿಷಯಗಳಿಗೆ, ಈ ಸಂಪರ್ಕ ಸಂಖ್ಯೆಯನ್ನು ಬಳಸುವುದರಿಂದ ಸೂಕ್ತ ಮಾರ್ಗಗಳಿಗೆ ನೇರ ಪ್ರವೇಶವನ್ನು ಖಚಿತಪಡಿಸುತ್ತದೆ…!
ನೀವು ನಾಗರಿಕರಾಗಿರಲಿ, ಪತ್ರಕರ್ತರಾಗಿರಲಿ ಅಥವಾ ಸರ್ಕಾರಿ ಅಧಿಕಾರಿಯಾಗಿರಲಿ, ಈ ವಿವರಗಳನ್ನು ಕೈಯಲ್ಲಿ ಇಟ್ಟುಕೊಳ್ಳುವುದು ಪಿಎಂಒ ಅನ್ನು ತಲುಪುವ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ…!!
2) ಪತ್ರ ಪತ್ರದ ಮೂಲಕ ಪ್ರಧಾನ ಮಂತ್ರಿಗಳಿಗೆ ಹಾಗೂ ಪ್ರಧಾನಿ ಕಾರ್ಯಾಲಯವನ್ನು ಸಂಪರ್ಕಿಸ ಬಯಸುವವರು ಪ್ರಧಾನ ಮಂತ್ರಿಗಳ ಕಚೇರಿ ಹಾಗೂ ನಿವಾಸದ ವಿಳಾಸಕ್ಕೆ ಪತ್ರ ಬರೆಯಬಹುದಾಗಿದೆ…!
ಅಲ್ಲಿನ ಅಧಿಕಾರಿಗಳು ಪತ್ರದ ಪ್ರಾಮುಖ್ಯತೆಗೆ ಅನುಗುಣವಾಗಿ ಅವುಗಳನ್ನು ವಿಲೇವಾರಿ ಮಾಡುತ್ತಾರೆ…!!
ತೀರಾ ಪ್ರಮುಖ ಮತ್ತು ವಿಶೇಷ ಪತ್ರವಾಗಿದ್ದರೆ ಖುದ್ದು ಪ್ರಧಾನ ಮಂತ್ರಿಗಳಿಗೆ ತಲುಪಿಸುತ್ತಾರೆ. ಇಲ್ಲವಾದರೇ ತಾವೇ ಪತ್ರದಲ್ಲಿ ಸಮಸ್ಯೆ ಪರಿಷ್ಕರಿಸಲು ಪ್ರಯತ್ನಿಸುತ್ತಾರೆ…!
3) ಪ್ರಧಾನಿ ಕಚೇರಿ ವಿಳಾಸಪ್ರಧಾನಿ ಕಾರ್ಯಾಲಯಸೌತ್ ಬ್ಲಾಕ್, ರೈಸೀನಾ ಹಿಲ್ನವದೆಹಲಿ -110011ಭಾರತಕಚೇರಿ ದೂರವಾಣಿ ಸಂಖ್ಯೆ +91-11-230123124)
ಫ್ಯಾಕ್ಸ್ಫ್ಯಾಕ್ಸ್ ಮೂಲಕ ದೂರು – ದುಮ್ಮಾನ ನೀಡಬಯಸುವವರು ಪ್ರಧಾನಿ ಕಾರ್ಯಾಲಯದ ಫ್ಯಾಕ್ಸ್ ನಂಬರ್ +91-11-23019545, 23016857ಕ್ಕೆ ಫ್ಯಾಕ್ಸ್ ಮಾಡಬಹುದು…!
5) ಇ-ಮೇಲ್ಇನ್ನು ಇ-ಮೇಲ್ ಮೂಲಕ ಪ್ರಧಾನಮಂತ್ರಿಗಳನ್ನು ಸಂಪರ್ಕಿಸಿ ದೂರು ಹೇಳ ಬಯಸುವವರು ಅವರ ಜಿಮೇಲ್ ಖಾತೆ narendramodi1234@gmail.com ಮೂಲಕ ಸಂಪರ್ಕಿಸಬಹುದಾಗಿದೆ…!
6) ಸಾಮಾಜಿಕ ಜಾಲತಾಣಗಳುಇನ್ನು ಪ್ರಧಾನಮಂತ್ರಿಗಳು ಸಾಮಾಜಿಕ ಜಾಲತಾಣಗಳ ಮುಖಾಂತರವಾಗಿಯೂ ಸಾರ್ವಜನಿಕರಿಗೆ ಲಭ್ಯವಿದ್ದು, ಪ್ರಧಾನಿಗಳ ಫೇಸ್ ಬುಕ್ ಖಾತೆ ಸರ್ಕಾರಿ ಅಧಿಕೃತ ಫೇಸ್ ಬುಕ್ ಖಾತೆ http://facebook.com/pmoindia ಮತ್ತು ವೈಯುಕ್ತಿಕ ಫೇಸ್ ಬುಕ್ ಖಾತೆ https://www.facebook.com/narendramodi ಮೂಲಕ ಸಂಪರ್ಕಿಸಬಹುದು…!ಇನ್ನು ಟ್ವಿಟರ್ ಮುಖಾಂತರ ಸಂಪರ್ಕಿಸ ಬಯಸುವವರು, ಸರ್ಕಾರಿ ಅಧಿಕೃತ ಟ್ವಿಟರ್ ಖಾತೆ https://twitter.com/PMOIndia ಮತ್ತು ವೈಯುಕ್ತಿಕ ಟ್ವಿಟರ್ ಖಾತೆ https://twitter.com/Narendramodi ಮೂಲಕ ಅವರನ್ನು ಸಂಪರ್ಕಿಸಬಹುದಾಗಿದೆ…!!