
ಇಂಡಿಯಾ ಮೈತ್ರಿಕೂಟಕ್ಕೆ ಭಾರಿ ಹೊಡೆತ ಬೀಳುವ ಸಾಧ್ಯತೆ
ಉತ್ತರ ಪ್ರದೇಶದ 6 ಸಂಸದರು ವಿವಿಧ ಪ್ರಕರಣಗಳಲ್ಲಿ ನ್ಯಾಯಾಲಯಗಳಲ್ಲಿ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದ್ದು, ಇದರಿಂದ ಲೋಕಸಭಾ ಸದಸ್ಯತ್ವ ಕಳೆದುಕೊಳ್ಳುವ ಭೀತಿಗೆ ಸಿಲುಕಿದ್ದಾರೆ.
ಉತ್ತರಪ್ರದೇಶದಲ್ಲಿ ಬಿಜೆಪಿಯ ವಿರುದ್ಧ INDI ಮೈತ್ರಿ ಕೂಟ ದೊಡ್ಡ ಗೆಲುವನ್ನು ಸಾಧಿಸಿತ್ತು ಆದರೆ ಇದೀಗ INDI ಮೈತ್ರಿಕೂಟದ ಆರು ಸಂಸದರು ಹಲವಾರು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.
ಪ್ರಜಾಪ್ರತಿನಿಧಿ ಕಾಯಿದೆ 1951 ರ ಪ್ರಕಾರ, ಚುನಾಯಿತ ಪ್ರತಿನಿಧಿಯು ಅಪರಾಧಿಯೆಂದು ಸಾಬೀತಾದರೆ ಮತ್ತು ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಜೈಲು ಶಿಕ್ಷೆಗೆ ಗುರಿಯಾದರೆ ಅನರ್ಹಗೊಳಿಸಲಾಗುತ್ತದೆ.
ನ್ಯಾಯಾಲಯದಲ್ಲಿ ಆರು ಸಂಸದರು ದೋಷಿ ಎಂದು ಸಾಬೀತಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ,
ಒಬ್ಬ ಸಂಸದನಿಗೆ ಎರಡು ವರ್ಷ ಶಿಕ್ಷೆ ಆಗಬಹುದು ಇದರಿಂದ ಲೋಕಸಭಾ ಸದಸ್ಯತ್ವ ಅಮಾನತ್ತು ಕೊಳ್ಳಬಹುದು ಅಕಸ್ಮಾತ್ ಅಮಾನತುಗೊಂಡರೆ ಇಂಡಿಯಾ ಮೈತ್ರಿಕೂಟಕ್ಕೆ ಇದು ದೊಡ್ಡ ಹೊಡೆತ ಕೊಡಬಹುದು.
ಚಂದೌಲಿ ಲೋಕಸಭಾ ಕ್ಷೇತ್ರದಿಂದ ಮಾಜಿ ಸಚಿವ ಮಹೇಂದ್ರ ನಾಥ್ ಪಾಂಡೆ ಅವರನ್ನು ಸೋಲಿಸಿದ ಎಸ ಪಿ ಅಭ್ಯರ್ಥಿ ವೀರೇಂದ್ರ ಸಿಂಗ್ , ಅವರ ಮೇಲೆಯೂ ಅಪರಾಧ ಪ್ರಕರಣಗಳು ಇವೆ.
ಅಫ್ಜಲ್ ಅನ್ಸಾರಿ ಗಾಜಿಯಾಪುರ ಕ್ಷೇತ್ರದ ಸಂಸದ ಈಗಾಗಲೇ ಕ್ರಿಮಿನಲ್ ಪ್ರಕರಣದಲ್ಲಿ 4 ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದಾರೆ. ಆದರೆ ಅಲಹಾಬಾದ್ ಹೈಕೋರ್ಟ್ ಶಿಕ್ಷೆಗೆ ತಡೆಯಾಜ್ಞೆ ನೀಡಿದ್ದರಿಂದ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದರು. ಈ ಪ್ರಕರಣ ಜುಲೈನಲ್ಲಿ ಮತ್ತೆ ವಿಚಾರಣೆಗೆ ಬರಲಿದೆ. ಅಲಹಾಬಾದ್ ಹೈಕೋರ್ಟ್ ಒಂದು ವೇಳೆ ಶಿಕ್ಷೆಯನ್ನು ಎತ್ತಿ ಹಿಡಿದರೆ, ಇವರ ಲೋಕಸಭಾ ಸದಸ್ಯತ್ವ ಅವನತ್ತುಗೊಳ್ಳುತ್ತದೆ.
ಇನ್ನು ಧರ್ಮೇಂದ್ರ ಯಾದವ್ ಅಜಂಗಢ ಕ್ಷೇತ್ರದಿಂದ ಗೆದ್ದಿರುವ ಅವರ ವಿರುದ್ಧವೂ ನಾಲ್ಕು ಪ್ರಕರಣಗಳು ಇದೇ ಎನ್ನಲಾಗುತ್ತಿದೆ ಮತ್ತು ಅವರು ಎರಡು ವರ್ಷಗಳಿಗಿಂತ ಜಾಸ್ತಿ ಶಿಕ್ಷೆಗೆ ಒಳಗಾದರೆ ಅವರ ಲೋಕಸಭಾ ಸದಸ್ಯತ್ವ ಕೂಡ ರದ್ದಾಗಬಹುದು.
ಜೌನ್ಪುರ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಬಾಬು ಸಿಂಗ್ ಕುಶ್ವಾಹಾ ಹತ್ತು ವರ್ಷಗಳಿಂದ ರಾಜಕೀಯ ವನವಾಸವನ್ನು ಅನುಭವಿಸಿದ್ದರು.
ಮಾಯಾವತಿ ಸರಕಾರದಲ್ಲಿ ಇವರು ಸಚಿವರಾಗಿದ್ದಾಗ ನಡೆದ NRHM ಹಗರಣಕ್ಕೆ ಸಂಬಂಧಿಸಿದ ಹಲವಾರು ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಅವರ ವಿರುದ್ಧ ದಾಖಲಾಗಿರುವ 25 ಪ್ರಕರಣಗಳ ಪೈಕಿ ಎಂಟು ಪ್ರಕರಣಗಳಲ್ಲಿ ಆರೋಪ ಸಾಬೀತಾಗುವ ಸಾಧ್ಯತೆ ಇದೆ.
ಇನ್ನು ಮೇನಕಾ ಗಾಂಧಿಯವರನ್ನು ಸೋಲಿಸಿ ಸುಲ್ತಾನ್ಪುರ ಕ್ಷೇತ್ರದಲ್ಲಿ ಗೆದ್ದಿರುವ ರಾಂಭುವಲ್ ನಿಶಾದ್ ಅವರ ವಿರುದ್ಧ ದರೋಡೆಕೋರರ ಕಾಯ್ದೆಯಡಿ ಎಂಟು ಪ್ರಕರಣಗಳು ದಾಖಲಾಗಿವೆ.
ಇನ್ನು ಕಾಂಗ್ರೆಸ್ ಸಂಸದ ಸಹರಾನ್ಪುರ ಕ್ಷೇತ್ರದಿಂದ ಗೆದ್ದಿರುವ ಇಮ್ರಾನ್ ಮಸೂದ್ ವಿರುದ್ಧ ಎಂಟು ಪ್ರಕರಣಗಳು ದಾಖಲಾಗಿವೆ. ಜಾರಿ ನಿರ್ದೇಶನಾಲಯ ದಿಂದ ಹಣ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣಗಳು ಸೇರಿವೆ. ಅವರ ವಿರುದ್ಧ ಎರಡು ಪ್ರಕರಣಗಳಿವೆ ಆರೋಪ ಸಾಬೀತ ಆಗುವ ಸಾಧ್ಯತೆ ಕೂಡ ಇದೆ.
ಚಂದ್ರಶೇಖರ್ ಆಜಾದ್ ನಗೀನಾ ಮೀಸಲು ಕ್ಷೇತ್ರದಲ್ಲಿ ಗೆದ್ದಿರುವ ಆಜಾದ್ ಸಮಾಜ ಪಕ್ಷದ ಅಭ್ಯರ್ಥಿ ವಿರುದ್ಧ 30 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಯಾವುದಾದರೂ ಒಂದು ಪ್ರಕರಣದಲ್ಲಿ ಎರಡು ವರ್ಷಕ್ಕಿಂತ ಹೆಚ್ಚು ಶಿಕ್ಷೆಯಾದರೆ, ಅವರ ಲೋಕಸಭಾ ಸದಸ್ಯತ್ವ ರದ್ದಾಗುತ್ತದೆ.
ಈ ಎಲ್ಲಾ ಲೋಕಸಭಾ ಸದಸ್ಯರ ಮೇಲೆ ಇರುವ ಆರೋಪಗಳು ಪ್ರಕರಣಗಳು ಸಾಬೀತಾದರೆ ಎರಡು ವರ್ಷಗಳಿಗಿಂತ ಹೆಚ್ಚಿಗೆ ಶಿಕ್ಷೆ ಆದರೆ ಅವರ ಲೋಕಸಭಾ ಸದಸ್ಯತ್ವ ಅಮಾನತುಗೊಳ್ಳುತ್ತದೆ ಇದರಿಂದ ಇಂಡಿಯಾ ಮೈತ್ರಿಕೂಟಕ್ಕೆ ದೊಡ್ಡ ಮಟ್ಟದಲ್ಲಿ ಹಿನ್ನಡೆಯಾಗುತ್ತದೆ.