
ರಾಜ್ಯದಲ್ಲಿ ನಾಥ ಆಪರೇಷನ್, ಏನಿದು ಬಾಂಬೆ ಸಿಎಂ ಏಕನಾಥ್ ಶಿಂದೆ ಮಾತಿನ ಮರ್ಮ…?
ಮಹಾರಾಷ್ಟ್ರದಲ್ಲಿ ನಡೆದಂತಹ “ನಾಥ ಆಪರೇಷನ್” ರಾಜ್ಯದಲ್ಲೂ ನಡೆಯಲಿದ್ದು ರಾಜ್ಯ ಕಾಂಗ್ರೆಸ್ ಸರ್ಕಾರ ಪತನ ಆಗಲಿದೆ ಎಂಬ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂದೆ ಅವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿದೆ…!
ಶಿಂದೆ ಹೇಳಿಕೆಗೆ ಕೆಂಡಾಮಂಡಲ ಆಗಿರುವ ರಾಜ್ಯ ಕಾಂಗ್ರೆಸ್ ನಾಯಕರು ಯಾವುದೇ ಕಾರಣಕ್ಕೂ ಇಲ್ಲಿ ಆಪರೇಷನ್ ಕಮಲ ನಡೆಯುವುದಿಲ್ಲ, ಸರ್ಕಾರ ಬೀಳಿಸಲು ಇದು ಮಹಾರಾಷ್ಟ್ರ ಅಲ್ಲ ಎಂದು ಹೇಳಿದ್ದಾರೆ…!!
ಇದಕ್ಕೆ ತಿರುಗೇಟು ನೀಡಿರುವ ರಾಜ್ಯ ಬಿಜೆಪಿ ಸರ್ಕಾರವನ್ನು ನಾವು ಉರುಳಿಸಬೇಕಿಲ್ಲ, ಒಳಜಗಳದಿಂದಾಗಿ ಅದುವೇ ಬಿದ್ದು ಹೋಗಲಿದೆ ಎಂದಿದ್ದಾರೆ…!*
ಏಕನಾಥ್ ಶಿಂದೆ ಹೇಳಿದ್ದೇನು…?
ನಾನು ಮೊನ್ನೆಯಷ್ಟೇ ಕರ್ನಾಟಕಕ್ಕೆ ಹೋಗಿದ್ದೆ, ಆಗ ಅಲ್ಲಿಯವರು ಇಲ್ಲೂ ನಾವು ನಾಥ ಆಪರೇಷನ್ ಮಾಡೋದಿದೆ ಎಂದರು.
ನಾನು ಹಾಗೆಂದರೇನು ಎಂದು ಕೇಳಿದೆ, ಅದಕ್ಕೆ ಅವರು ಮಹಾರಾಷ್ಟ್ರದಲ್ಲಿ ನಿಮ್ಮನ್ನು ಹೇಗೆ ಸಿಎಂ ಮಾಡಲಾಯಿತೋ ಅದುವೇ ನಾಥ ಆಪರೇಷನ್, ಅಂತಹ ಸಮಯ ಬಂದಾಗ ನಿಮ್ಮ ಸಲಹೆ ಬೇಕಾಗಬಹುದು ಎಂದರು.
ಅದಕ್ಕೆ ನಾನು ಆ ಸಮಯದಲ್ಲಿ ಖಂಡಿತ ಬರುತ್ತೇನೆ ಎಂದು ಹೇಳಿದ್ದೇನೆ, ಅವರ ಮಾತು ಕೇಳಿ ತಿಳಿಯಿತು – ಮಹಾರಾಷ್ಟ್ರದಲ್ಲಿ ಏನು ನಡೆಯಿತೋ ಅದು ಲೋಕಸಭಾ ಚುನಾವಣೆ ಬಳಿಕ ಕರ್ನಾಟಕದಲ್ಲೂ ನಡೆಯಲಿದೆ ಎಂದು ಮಹಾರಾಷ್ಟ್ರದ ಸಭೆಯೊಂದರಲ್ಲಿ ಏಕನಾಥ್ ಶಿಂದೆ ಹೇಳಿದ್ದರು…!
ಲೋಕಸಭಾ ಚುನಾವಣೆ ಬಳಿಕ ಶಿಂದೆ ಸರ್ಕಾರ ಇರುವುದೇ ಸಂಶಯ – ಡಿ ಕೆ ಶಿವಕುಮಾರ್
ಲೋಕಸಭಾ ಚುನಾವಣೆ ಮುಗಿದ ಬಳಿಕ ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂದೆ ಸರ್ಕಾರ ಇರುವುದೇ ಅನುಮಾನ, ಎನ್ ಸಿ ಪಿ ಮತ್ತು ಶಿವಸೇನೆ ಬಿಟ್ಟು ಹೋದವರು ಚುನಾವಣೆಯ ಬಳಿಕ ಮರಳಿ ಗುಡಿ ಸೇರುತ್ತಾರೆ, ನೋಡುತ್ತಿರಿ, ಅಲ್ಲಿ ಮತ್ತೆ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ಬರಲಿದೆ ಎಂದರು…!
ಬಿಜೆಪಿಯವರು ಹಗಲುಗನಸು ಕಾಣುತ್ತಿದ್ದಾರೆ – ಸಿ ಎಂ ಸಿದ್ಧರಾಮಯ್ಯ
ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕರು ಆಪರೇಷನ್ ಕಮಲದ ಪ್ರಯತ್ನ ಮಾಡಿ ವಿಫಲರಾಗಿದ್ದಾರೆ.ಬಿಜೆಪಿಯದ್ದು ಹಗಲುಗನಸು, ನಮ್ಮ ಶಾಸಕರು ಮಾರಾಟಕ್ಕಿಲ್ಲ, ಮಹಾರಾಷ್ಟ್ರದಲ್ಲಿ ನಡೆದಂತೆ ಕರ್ನಾಟಕದಲ್ಲಿ ಮಾಡಲು ಸಾಧ್ಯವಿಲ್ಲ, ಏಕೆಂದರೆ ಅವರ ಎನ್ ಡಿ ಎ ಈ ಬಾರಿ ಕೇಂದ್ರದಲ್ಲಿ ಸೋಲಲಿದೆ ಎಂದಿದ್ದಾರೆ…!
ಸರ್ಕಾರ ಪತನವಾದರೆ ನಾವು ಹೊಣೆಯಲ್ಲ – ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಿರೋಧ ಪಕ್ಷವಾಗಿ ನಮ್ಮ ಕೆಲಸವನ್ನು ಮುಂದುವರೆಸುತ್ತೇವೆ, ಸರ್ಕಾರ ಕೆಡವೋ ಕೆಲಸ ನಾವು ಮಾಡಲ್ಲ, ಒಳಜಗಳದಿಂದಾಗಿ ಸರ್ಕಾರ ಬಿದ್ದರೆ ನಾವು ಹೊಣೆಯಲ್ಲ ಎಂದು ವಿಜಯೇಂದ್ರ ಹೇಳಿದ್ದಾರೆ…!
ಜೆಡಿಎಸ್ ನ 15 ಕ್ಕೂ ಹೆಚ್ಚು ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ – ಎಂಬಿ ಪಾಟೀಲ್*ರಾಜ್ಯದಲ್ಲಿ ನಾವು 136 ಶಾಸಕರಿದ್ದೇವೆ, ಪಕ್ಷಾಂತರ ನಿಷೇಧ ಕಾಯ್ದೆಯಿಂದ ಪಾರಾಗಲು ಕನಿಷ್ಠ 89 ಶಾಸಕರು ಬಿಜೆಪಿಗೆ ಹೋಗಬೇಕು, ಆದರೆ ನಮ್ಮ ಶಾಸಕರು ದಡ್ಡರಲ್ಲ, ಬದಲಿಗೆ ಬಿಜೆಪಿ ಜೆಡಿಎಸ್ ನ 20 ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಬರುವವರಿದ್ದಾರೆ ಎಂದು ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ…!