
ಆಂಧ್ರಪ್ರದೇಶದಲ್ಲಿ ಸಿಎಂ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈ ಎಸ್ ಆರ್ ಸರ್ಕಾರಕ್ಕೆ ಈ ಬಾರಿ ಹೀನಾಯ ಸೋಲು…!
ಜಗನ್ ಪಕ್ಷ 51 ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲೋದು ಕಷ್ಟ…!!
ತೆಲಂಗಾಣದಲ್ಲಿ ಬಿಜೆಪಿ ಅತೀ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಗೆಲ್ಲುತ್ತೆ…!
ದೇಶದಾದ್ಯಂತ ಬಿಜೆಪಿಗೆ 300 ಕ್ಕೂ ಅಧಿಕ ಸ್ಥಾನ…!!
ಬಿಜೆಪಿ 200 ಸೀಟುಗಳನ್ನು ಸಹ ಗೆಲ್ಲಲ್ಲ ಎನ್ನುವವರು, 100 ಸೀಟುಗಳನ್ನು ಬಿಜೆಪಿ ಎಲ್ಲಿ ಕಳೆದುಕೊಳ್ಳುತ್ತೆ ಎಂದು ಹೇಳಬೇಕು…!
ಲೋಕಸಭಾ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಯಾರು ಸೋಲುತ್ತಾರೆ ಎಂಬ ಚರ್ಚೆ ಜೋರಾಗಿರುವ ಈ ಸಂದರ್ಭದಲ್ಲಿ ಖ್ಯಾತ ಚುನಾವಣಾ ವಿಶ್ಲೇಷಕ ಪ್ರಶಾಂತ್ ಕಿಶೋರ್ ತನ್ನದೇ ಆದ ವಿಶ್ಲೇಷಣೆ ಮಾಡಿದ್ದು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದು ಬಿಜೆಪಿ ಮೈತ್ರಿಕೂಟವೇ ಎಂದು ಹೇಳಿದ್ದಾರೆ…!
ದೇಶದಲ್ಲಿ ಈ ಚುನಾವಣೆಯಲ್ಲೂ ಬಿಜೆಪಿ 300 ಸೀಟುಗಳ ಗೆಲುವನ್ನು Maintain ಮಾಡಲಿದ್ದು, ಉತ್ತರ ಮತ್ತು ಪಶ್ಚಿಮ ಭಾಗದಲ್ಲಿ ಬಿಜೆಪಿ ಸ್ಥಾನಗಳಿಗೆ ಹೆಚ್ಚಿನ ಹಾನಿಯಾಗಲ್ಲ ಅಂತ ಹೇಳಿದ್ದಾರೆ…!
ಇನ್ನು ದಕ್ಷಿಣ ಮತ್ತು ಪೂರ್ವ ಭಾಗದಲ್ಲಿ ನೋಡೊದಾದ್ರೆ ಬಿಜೆಪಿ ವೋಟ್ ಶೇರ್ ಮತ್ತು ಗೆಲ್ಲುವ ಸ್ಥಾನಗಳು ಕೂಡ ಹೆಚ್ಚಾಗಲಿವೆ…!!
ಅಲ್ಲದೆ ಬಿಜೆಪಿಯ ಪ್ರಸ್ತುತ 300 ಸ್ಥಾನಗಳಲ್ಲಿ ಯಾವುದೇ ದೊಡ್ಡ ಹೆಚ್ಚು ಕಡಿಮೆ ಆಗುತ್ತೆ ಅಂತ ನನಗೆ ಕಾಣೋದಿಲ್ಲ ಅಂದಿದ್ದಾರೆ…!
ಅಲ್ಲದೆ ಬಿಜೆಪಿ 200 ಸ್ಥಾನಗಳಿಗೆ ಕುಸಿಯುತ್ತೆ ಅಂತ ಹೇಳುವರರು ಬಿಜೆಪಿ 100 ಸ್ಥಾನಗಳನ್ನ ಎಲ್ಲಿ ಕಳೆದು ಕೊಳ್ಳುತ್ತೆ ಅಂತ ಅವ್ರೇ ಹೇಳಬೇಕು ಅಂದಿದ್ದಾರೆ…!!
ಈ ಮೂಲಕ ಕಿಶೋರ್ ಬಿಜೆಪಿ ಈ ಬಾರಿಯು ಹೆಚ್ಚು ಕಡಿಮೆ 300ಸ್ಥಾನಗಳನ್ನ ಗೆದ್ದು ಅಧಿಕಾರಕ್ಕೇರಲಿದೆ ಅಂತ ಭವಿಷ್ಯ ನುಡಿದಿದ್ದಾರೆ…!
ಇನ್ನು ಆಂಧ್ರಪ್ರದೇಶ ರಾಜಕೀಯ ಪರಿಸ್ಥಿತಿ ಕುರಿತು ಮಾತನಾಡಿದ ಅವರು ಆಡಳಿತಾರೂಢ ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈ ಎಸ್ ಆರ್ ಕಾಂಗ್ರೆಸ್ ಹೀನಾಯವಾಗಿ ಸೋಲು ಅನುಭವಿಸಲಿದೆ ಎಂದಿದ್ದಾರೆ…!!
ಇನ್ನು ತೆಲಂಗಾಣದಲ್ಲಿ ಅತೀ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಹೇಳಿದ್ದಾರೆ…!