
ನವದೆಹಲಿ – ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ವಾಗ್ದಾಳಿ ನಡೆಸಿದ್ದಾರೆ…!
ದೆಹಲಿ ಅಬಕಾರಿ ಹಗರಣ ಪ್ರಕರಣದಲ್ಲಿ ಜೂನ್ ಒಂದರ ತನಕ ಷರತ್ತುಗಳ ಮೇಲೆ ಮಧ್ಯಂತರ ಜಾಮಿಯನ ಮೇಲೆ 50 ದಿನಗಳ ನಂತರ ಜೈಲಿನಿಂದ ಹೊರಬಂದ ನಂತರ ಚುನಾವಣೆ ಪ್ರಚಾರದಲ್ಲಿ ಬ್ಯುಸಿ ಇರುವ ಅರವಿಂದ್ ಕೇಜ್ರಿವಾಲ್.
ಇದೀಗ ಬ್ರಷ್ಟಾಚಾರ ಮಾಡಿದ ಅರವಿಂದ್ ಕೇಜ್ರಿವಾಲ್ ಗೆ ಮತ ನೀಡಬೇಡಿ ಎಂದು ಅಣ್ಣಾ ಹಜಾರೆ ಕರೆ ಕೊಟ್ಟಿದ್ದಾರೆ
ಭ್ರಷ್ಟಾಚಾರ ನಡೆಸಿದ ವ್ಯಕ್ತಿಗೆ ಯಾರೂ ಮತ ನೀಡದಂತೆ ಅವರು ಜನತೆಗೆ ಕರೆ ನೀಡಿದ್ದಾರೆ…!!
ಸೋಮವಾರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಹಿರಂಗವಾಗಿಯೇ ಕೇಜ್ರಿವಾಲ್ ಅವರನ್ನು ಟೀಕಿಸಿದರು…!
ಕೇಜ್ರಿವಾಲ್ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಆರೋಪಿಸಿದ ಹಜಾರೆ, ಅಂತಹ ವ್ಯಕ್ತಿಗಳನ್ನು ಮರು ಆಯ್ಕೆ ಮಾಡಬಾರದು. ಶುದ್ಧ ವ್ಯಕ್ತಿಗಳಿಗೆ ಮಾತ್ರ ನಿಮ್ಮ ಮತ ನೀಡಿ ಎಂದು ಕಿವಿಮಾತು ಹೇಳಿದರು…!!
ಮತದಾರರು ಸರಿಯಾದ ಅಭ್ಯರ್ಥಿಯನ್ನು ಎಚ್ಚರಿಕೆಯಿಂದ ಆಯ್ಕೆ ಮಾಡಬೇಕು. ರಾಷ್ಟ್ರದ ಅಧಿಕಾರವು ಅನರ್ಹರ ಕೈಗೆ ಬೀಳಬಾರದು. ಪ್ರಾಮಾಣಿಕತೆಯ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕು. ಮತದಾರರ ಕೈಯಲ್ಲಿ ರಾಷ್ಟ್ರದ ಭವಿಷ್ಯದ ಕೀಲಿಕೈ ಇದೆ. ಭ್ರಷ್ಟಾಚಾರದ ಆರೋಪ ಹೊತ್ತಿರುವ ಹಾಗೂ ಜಾರಿ ನಿರ್ದೇಶನಾಲಯ (ಇಡಿ) ತನಿಖೆ ಎದುರಿಸುತ್ತಿರುವ ರಾಜಕಾರಣಿಗಳಿಗೆ ನಿಮ್ಮ ಮತ ನೀಡಬೇಡಿ ಎಂದು ಅಣ್ಣಾ ಹಜಾರೆ ಆಗ್ರಹಿಸಿದರು…!