
ಪ್ರಧಾನಿ ಮೋದಿ ಅವರ ಬಳಿ ವಿರೋಧ ಪಕ್ಷಗಳು ಕೇಳುವ ಬಹುಮುಖ್ಯ ಪ್ರಶ್ನೆ ಏನೆಂದರೆ ಮೋದಿ ಈವರೆಗೆ ಒಂದೇ ಒಂದು ಪ್ರೆಸ್ ಮೀಟ್ ಎದುರಿಸಿಲ್ಲ ಎನ್ನೋದು…!
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಇಂಡಿಯಾ ಟುಡೆಗೆ ಒಂದು ಇಂಟರ್ವ್ಯೂ ಕೊಟ್ಟಿದ್ರು…!!
ಆ ಸಂದರ್ಶನದಲ್ಲಿ ಪ್ರಧಾನಿ ಮೋದಿಗೆ ಪತ್ರಕರ್ತರು ಇದೇ ಪ್ರಶ್ನೆಯನ್ನು ಕೇಳಿದ್ದಾರೆ…!
ಇದಕ್ಕೆ ಉತ್ತರಿಸಿದ ಮೋದಿ, ‘ಮಾಧ್ಯಮಗಳು ಈಗ ಬದಲಾಗಿವೆ, ಮಾಧ್ಯಮಗಳು ಮೊದಲಿನಂತೆ ತಟಸ್ಥವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಪತ್ರಕರ್ತರು ಈಗ ತಮ್ಮದೇ ಆದ ಸಿದ್ಧಾಂತವನ್ನು ಪ್ರಚಾರ ಮಾಡುತ್ತಾರೆ, ಆ ಹಾದಿಯಲ್ಲಿ ಹೋಗಲು ನಾನು ಬಯಸುವುದಿಲ್ಲ ಎಂದು ಹೇಳಿದರು…!!
ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಮಯಕ್ಕೆ ಹೋಲಿಸಿದರೆ, ಈಗ ಅಷ್ಟು ಪ್ರೆಸ್ಮೀಟ್ಗಳನ್ನು ನೀವು ನಡೆಸೋದಿಲ್ಲ. ತೀರಾ ಕಡಿಮೆ ಸಂದರ್ಶನಗಳನ್ನು ನೀಡುತ್ತೀರಿ ಎಂದು ಕೇಳಿದ ಪ್ರಶ್ನೆಗೆ, ಇಂದು ಮಾಧ್ಯಮಗಳನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ. ಆ ಹಾದಿಯಲ್ಲಿ ಹೋಗಲು ನಾನು ಬಯಸುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು…!
ನಾನು ಕಠಿಣ ಪರಿಶ್ರಮ ಪಡಬೇಕು. ಪ್ರತಿ ಬಡವನ ಮನೆಗೂ ನಾನು ಹೋಗಬೇಕು. ಅದರ ಬದಲು ನಾನು ವಿಜ್ಞಾನ ಭವನದಲ್ಲಿದದು, ರಿಬ್ಬನ್ಗಳನ್ನೂ ಕೂಡ ಕಟ್ ಮಾಡಬಹುದು. ಆದರೆ, ಇದನ್ನು ನಾನು ಮಾಡೋದಿಲ್ಲ. ನಾನು ಜಾರ್ಖಂಡ್ನ ಚಿಕ್ಕ ಜಿಲ್ಲೆಯೊಂದಕ್ಕೂ ಹೋಗುತ್ತೇನೆ ಹಾಗೂ ಸಣ್ಣ ಯೋಜನೆಯ ಕುರಿತಾಗಿ ಕೆಲಸ ಮಾಡುತ್ತೇನೆ ಎಂದು ಪ್ರಧಾನಿ ಹೇಳಿದ್ದಾರೆ…!!