
ಮಂತ್ರಾಲಯ ಎಂದಾಕ್ಷಣ ನೆನಪಾಗುವುದು ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠ ರಾಘವೇಂದ್ರ ಎಂದು ನೆನೆದಾಗ ಕಷ್ಟ ದುಃಖಗಳನ್ನು ಕ್ಷಣಮಾತ್ರದಲ್ಲಿ ದೂರ ಮಾಡುವ ಕಲಿಯುಗದ ಕಾಮಧೇನು.
ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ರತಾಯಚ| ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ|| ಈ ಶ್ಲೋಕವನ್ನ ಪ್ರತಿದಿನ ಕೋಟ್ಯಂತರ ಭಕ್ತರು ಜಪಿಸಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಆರಾಧನೆಯನ್ನು ಮಾಡುತ್ತಾರೆ.
ಮಂತ್ರಾಲಯವು ಸನಾತನ ಹಿಂದೂ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಸ್ಥಳವಾಗಿದ್ದು, ಇಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿ ಅವರ ಬೃಂದಾವನ ಮೂಲ ಬೃಂದಾವನಂ ಇದೆ. ಪ್ರತಿದಿನ ಸಹಸ್ರಾರು ಭಕ್ತರು ರಾಯರ ಮಠಕ್ಕೆ ಭೇಟಿ ನೀಡಿ ರಾಯರ ಮೂಲ ಬೃಂದಾವನದ ದರುಶನವನ್ನು ಪಡೆಯುತ್ತಾರೆ.
ಮಂತ್ರಾಲಯವು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಿಂದ 74 ಕಿ.ಮೀ ಮತ್ತು ಹೈದರಾಬಾದ್ ನಿಂದ 250 ಕಿ.ಮೀ ದೂರದಲ್ಲಿರುವ ಪವಿತ್ರ ಪಟ್ಟಣವಾಗಿದೆ. ಇದು ಕರ್ನಾಟಕದ ಗಡಿಯ ಭಾಗದಲ್ಲಿದೆ ಮತ್ತು ತುಂಗಭದ್ರಾ ನದಿಯ ದಡದಲ್ಲಿದೆ.
ಮಂತ್ರಾಲಯಕ್ಕೆ ತರಳಲು ಅನೇಕ ಸಾರಿಗೆ ವ್ಯವಸ್ಥೆಗಳು ಕೂಡ ಇವೆ ಹಾಗೆ ರೈಲ್ವೆ ವ್ಯವಸ್ಥೆಗಳು ಕೂಡ ಇದೆ ಇವತ್ತಿನ ಈ ಲೇಖನದಲ್ಲಿ ನಾವು ರಾಜ್ಯ ರಾಜಧಾನಿ ಬೆಂಗಳೂರಿನಿಂದ ಮಂತ್ರಾಲಯಕ್ಕೆ ತೆರಳುವ ರೈಲುಗಳ ಮಾಹಿತಿಯನ್ನು ತಿಳಿದುಕೊಳ್ಳೋಣ .
ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೋಗುವ 1ನೇ ರೈಲು:
ಮಂತ್ರಾಲಯ ರಾಯರ ಮಠಕ್ಕೆ ಮಂತ್ರಾಲಯ ರೈಲ್ವೆ ಸ್ಟೇಷನ್ ತುಂಬಾ ಹತ್ತಿರವಾದ ರೈಲ್ವೇ ಸ್ಟೇಷನ್ ಆಗಿದೆ. ಮಂತ್ರಾಲಯ ರೈಲ್ವೆ ಸ್ಟೇಷನ್ನಿಂದ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠವು 15 ಕಿಮೀ ದೂರದಲ್ಲಿದೆ. ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೊರಡುವ ಮೊದಲನೇ ರೈಲು 11014. ಇದು ಕೆಎಸ್ಆರ್ ಬೆಂಗಳೂರಿನಿಂದ ಸಂಜೆ 4 ಗಂಟೆಗೆ ಹೊರಡುತ್ತದೆ. ರಾತ್ರಿ 11.14ಕ್ಕೆ ಮಂತ್ರಾಲಯ ತಲುಪುತ್ತದೆ.
ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೋಗುವ 2ನೇ ರೈಲು
ಬೆಂಗಳೂರಿನ ಯಶ್ವಂತಪು ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ YPR BIDR EXP 16577. ಈ ರೈಲು ಯಶವಂತಪುರ ರೈಲು ನಿಲ್ದಾಣದಿಂದ ರಾತ್ರಿ 11.15ಕ್ಕೆ ಹೊರಟು. ಬೆಳಿಗ್ಗೆ 7.39ಕ್ಕೆ ಮಂತ್ರಾಲಯ ತಲುಪುತ್ತದೆ. ಈ ರೈಲು ವಾರದಲ್ಲಿ ಶನಿವಾರ ಮಾತ್ರ ಇರುತ್ತದೆ.
ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೋಗುವ 3ನೇ ರೈಲು
ವಂದೇ ಭಾರತ್ ರೈಲು ವೇಗ ಹಾಗೂ ಆರಾಮದಾಯಕವಾಗಿ ಪ್ರಯಾಣ ಮಾಡಲು ವಂದೇ ಭಾರತ್ ರೈಲು ಕೂಡ ಇದೆ ಬೆಂಗಳೂರಿನಿಂದ. ರೈಲು ಸಂಖ್ಯೆ KLBG VANDeBHARAT 22232. ವಂದೇ ಭಾರತ್ ರೈಲು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಮಧ್ಯಾಹ್ನ 2.40 ಗಂಟೆಗೆ ಹೊರಡುತ್ತದೆ. ರಾತ್ರಿ 8:18ಕ್ಕೆ ಮಂತ್ರಾಯಲವನ್ನು ತಲುಪುತ್ತದೆ ಇದರ ಪ್ರಯಾಣದ ದರ ಕೊಂಚ ಹೆಚ್ಚಿಗೆ ಇರುತ್ತದೆ.
ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೋಗುವ 4ನೇ ರೈಲು
ಬೆಂಗಳೂರು ಯಶವಂತಪುರ ರೈಲ್ವೆ ನಿಲ್ದಾಣದಿಂದ ತರಳುವ ರೈಲು ಸಂಖ್ಯೆ HAS SUR EXP 11312 . ಈ ರೈಲು ಬೆಂಗಳೂರಿನ ಯಶವಂತಪುರ ರೈಲು ನಿಲ್ದಾಣದಿಂದ ರಾತ್ರಿ 8:50ಕ್ಕೆ ಹೊರಡುತ್ತದೆ ಬೆಳಿಗ್ಗೆ 2:34ಕ್ಕೆ ಮಂತ್ರಾಲಯ ತಲುಪುತ್ತದೆ.
ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೋಗುವ 5ನೇ ರೈಲು
ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ನಿಂದ ರಾತ್ರಿ 8:40 ಕ್ಕೆ ಹೊರಡುತ್ತದೆ. ಬೆಳಗ್ಗೆ 3:49ಕ್ಕೆ ಮಂತ್ರಾಲಯ ತಲುಪುತ್ತದೆ. ಈ ರೈಲು ಸಂಖ್ಯೆ UDYAN EXP 11302.
ಮುಂದಿನ ದಿನಗಳಲ್ಲಿ ಭಾರತೀಯ ರೈಲ್ವೆ ಇಲಾಖೆ ರಾಜ್ಯದ ಎಲ್ಲಾ ಭಾಗಗಳಿಂದ ಮಂತ್ರಾಲಯಕ್ಕೆ ತೆರಳುವ ರೈಲುಗಳ ಸಂಖ್ಯೆ ಹೆಚ್ಚಿಸಲಿದೆ.