
ಬೆಂಗಳೂರು – ನಾಲ್ಕು ವರ್ಷಗಳಲ್ಲಿ ನನ್ನ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ 135 ಸ್ಥಾನಗಳನ್ನು ಪಡೆದು ಅಧಿಕಾರಕ್ಕೆ ಬಂದಿದೆ…!
ನಾಲ್ಕು ವೋಟ್ ಹಾಕಿಸದೇ ಬಂದು ಇಲ್ಲಿ ಸ್ಥಾನಮಾನ ಕೇಳುತ್ತೀರಾ? ಮೊದಲು ನಿಮ್ಮ ಬೂತ್ನಲ್ಲಿ ಪಕ್ಷ ಸಂಘಟನೆ ಮಾಡಿ, ಬೂತ್ ಮಟ್ಟದಲ್ಲಿ ಲೀಡ್ ಕೊಡಿಸಿ ನಂತರ ಬಂದು ನಾಯಕತ್ವ ಕೇಳಿ, ಇಲ್ಲದೆ ಹೋದರೆ ನಾಯಕತ್ವ ಕೊಡಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ MLC ಟಿಕೆಟ್ ಆಕಾಂಕ್ಷಿಗಳಿಗೆ ಕ್ಲಾಸ್ ತೆಗೆದುಕೊಂಡರು…!!
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಒಂದು ವರ್ಷ ಪೂರೈಕೆ ಆದ ಹಿನ್ನೆಲೆಯಲ್ಲಿ ಕೆಪಿಸಿಸಿ ಘಟಕದಿಂದ ಏರ್ಪಡಿಸಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿ ಕೆ ಶಿವಕುಮಾರ್, ನಾಲ್ಕು ವೋಟ್ ಹಾಕಿಸದೇ ಬಂದು ಇಲ್ಲಿ ಸ್ಥಾನಮಾನ ಕೇಳಿದರೆ ಹೇಗೆ…? ಬಿಳಿ ಜುಬ್ಬಾ, ಬಿಳಿ ಕಾರು ತೆಗೆದುಕೊಂಡು ಬಂದು ಸ್ಥಾನಮಾನಗಳನ್ನು ಕೇಳುವುದಲ್ಲ, ಮೊದಲು ಪಕ್ಷ ಸಂಘಟನೆಯನ್ನು ಮಾಡಿ, ಇಲ್ಲದಿದ್ದರೆ ಜಾಗ ಖಾಲಿ ಮಾಡಿ, ನಾವು ಹೊಸ ನಾಯಕತ್ವವನ್ನು ಬೆಳೆಸುತ್ತೇವೆ ಎಂದು ಹೇಳಿದರು…!
ನಾನು ಸದ್ಯ KPCC ಅಧ್ಯಕ್ಷನಾಗಿದ್ದೇನೆ, ಇನ್ನೂ ಎಷ್ಟು ದಿನ ಈ ಸ್ಥಾನದಲ್ಲಿ ಇರುತ್ತೇನೋ, ಇಲ್ಲವೋ ಅನ್ನುವುದು ಗೊತ್ತಿಲ್ಲ, ನಮ್ಮ ಪಕ್ಷದ ನಾಯಕತ್ವ ಬುನಾದಿ ಗಟ್ಟಿ ಮಾಡಬೇಕು, ಇದಕ್ಕಾಗಿ ಬೂತ್ ಮಟ್ಟದಲ್ಲಿ ಸಂಘಟನೆ ಗಟ್ಟಿ ಮಾಡಬೇಕು ಎಂದು ಪಕ್ಷದ ಮುಖಂಡರಿಗೆ ಕಿವಿಮಾತು ಹೇಳಿದರು…!!