
2024ರ ಲೋಕಸಭಾ ಚುನಾವಣೆ ಏಳು ಹಂತಗಳಲ್ಲಿ ದೇಶದಲ್ಲಿ ನಡೆದಿತ್ತು ಈ ಬಾರಿ ಮತದಾರರ ಒಲವು ಯಾರ ಕಡೆ ಅನ್ನೋದು ಜೂನ್ ನಾಲ್ಕರಂದು ತಿಳಿಯಲಿದೆ ಆದರೆ ನಿನ್ನ ಸಂಜೆ ಬಿಡುಗಡೆಯಾದ ಚುನಾವಣೋತ್ತರ ಸಮೀಕ್ಷೆ ಈ ಬಾರಿ ಬಿಜೆಪಿ ಮೈತ್ರಿಕೂಟ ಜಯಭೇರಿ ಬಾರಿಸಲಿದೆ ಎಂದು ಹೇಳುತ್ತಿದೆ.
ಚುನಾವಣೋತ್ತರ ಸಮೀಕ್ಷೆ ಹೊರ ಬಿದ್ದ ನಂತರ,
ಚುನಾವಣೋತ್ತರ ಸಮೀಕ್ಷೆ ನಿಜವಾದರೆ ಮತ್ತೆ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾದರೆ ನಾನು ತಲೆಬೋಳಿಸಿಕೊಳ್ಳುತ್ತೇನೆ ಎಂದು ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸೋಮನಾಥ್ ಭಾರ್ತಿ ಹೇಳಿದ್ದಾರೆ.
ಎಕ್ಸಿಟ್ ಪೋಲ್ಗಳು ಸುಳ್ಳು ಇದು ಸರಿಯಾದ ಫಲಿತಾಂಶ ಅಲ್ಲ
ಜೂನ್ 4ರಂದು ನಿಜವಾದ ಫಲಿತಾಂಶ ಹೊರಬೀಳಲಿದೆ ಎಂದು
ಸೋಮನಾಥ್ ಭಾರ್ತಿ ಹೇಳಿದ್ದಾರೆ.
ಪ್ರಧಾನಿ ಮೋದಿಯವರು ಈ ಬಾರಿ ಪ್ರಧಾನಿಯಾದರೆ ನಾನು ನನ್ನ ತಲೆ ಬೋಳಿಸಿಕೊಳ್ಳುತ್ತೇನೆ. ನನ್ನ ಈ ಮಾತನ್ನು ನೆನಪಿನಲ್ಲಿಟ್ಟುಕೊಳ್ಳಿ. ಜೂನ್ 4 ರಂದು ಎಲ್ಲಾ ಫಲಿತಾಂಶ ತಲೆಕೆಳಕಾಗುತ್ತದೆ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದಿಲ್ಲ ಎಂದರು.
ದೆಹಲಿಯ ಏಳು ಲೋಕಸಭಾ ಕ್ಷೇತ್ರಗಳಲ್ಲಿಯೂ ಇಂಡಿಯಾ ಮೈತ್ರಿಕೂಟ ಗೆಲ್ಲಲಿದೆ. ಪ್ರಧಾನಿ ಮೋದಿಯ ಭಯದಿಂದಾಗಿ ಎಕ್ಸಿಟ್ ಪೋಲ್ಗಳು NDA ಮೈತ್ರಿಕೂಟಕ್ಕೆ ಹೆಚ್ಚಿನ ಸ್ಥಾನಗಳನ್ನು ಕೊಟ್ಟಿದೆ. ನಿಜವಾದ ಫಲಿತಾಂಶ ಜೂನ್ ನಾಲ್ಕರಂದು ಬರಲಿದೆ ನಿಜವಾದ ಫಲಿತಾಂಶ ಬರುವವರೆಗೂ ನಾವೆಲ್ಲರೂ ಕಾಯಬೇಕು.
ಈ ಬಾರಿ ಮತದಾರ ಬಿಜೆಪಿ ವಿರುದ್ಧ ಭಾರಿ ಮತ ಹಾಕಿದ್ದಾರೆ ಎಂದು ಹೇಳಿದರು.
Exit Polls: ಎಕ್ಸಿಟ್ ಪೋಲ್ ಮಾಧ್ಯಮ ಚರ್ಚೆಗಳಿಗೆ ನಮ್ಮ ಪ್ರತಿನಿಧಿಗಳನ್ನು ಒತ್ತಾರರನ್ನು ಕಳಿಸುವುದಿಲ್ಲ ಎಂದು ಇಂಡಿಯಾ ಮೈತ್ರಿಕೂಟ ಮೊದಲು ಹೇಳಿದ್ದು ನಂತರ ಉಲ್ಟಾ ಹೊಡೆದಿದೆ.
ಎಕ್ಸಿಟ್ ಪೋಲಿನ ಮಾಧ್ಯಮ ಚರ್ಚೆಗಳಿಗೆ ನಮ್ಮ ಪ್ರತಿನಿಧಿಗಳನ್ನು ಕಳಿಸುವುದಿಲ್ಲ ಎಂದು ಇಂಡಿಯಾ ಮೈತ್ರಿಕೂಟ ಮೊದಲು ಹೇಳಿದ್ದು ನಂತರ ಎಕ್ಸಿಟ್ ಪೋಲ್ ಹೊರ ಬೀಳುತ್ತಿದ್ದಂತೆ ಸಭೆ ನಡೆಸಿ ನಮ್ಮ ಪ್ರತಿನಿಧಿಗಳನ್ನು ಕಳಿಸುತ್ತೇವೆ ಎಂದು ಹೇಳಿದ್ದಾರೆ.
2014 ಮತ್ತು 2019 ರಲ್ಲಿ ದೆಹಲಿಯ ಎಲ್ಲಾ ಏಳು ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು.
ಈ ಬಾರಿ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಒಟ್ಟಾಗಿ ಚುನಾವಣೆ ಎದುರಿಸಿದ್ದವು. ಎಎಪಿ 4 ಕ್ಷೇತ್ರದಲ್ಲಿ ಮತ್ತು ಕಾಂಗ್ರೆಸ್ ಮೂರು ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ.
ಇಂಡಿಯಾ ಟಿವಿ-ಸಿಎನ್ಎಕ್ಸ್ ಎಕ್ಸಿಟ್ ಪೋಲ್ ಫಲಿತಾಂಶಗಳ ಪ್ರಕಾರ, ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಮೈತ್ರಿ ವಿಫಲವಾಗಿದೆ. ಬಿಜೆಪಿ ಇಲ್ಲಿ ಎಲ್ಲಾ ಏಳು ಸ್ಥಾನಗಳನ್ನು ಗೆಲ್ಲಬಹುದು. ಮತ್ತೊಂದೆಡೆ, ಇಂಡಿಯಾ ಟುಡೇ – ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೋಲ್ ಪ್ರಕಾರ, ಬಿಜೆಪಿ ಈ ಬಾರಿ ದೆಹಲಿಯಲ್ಲಿ ಒಂದು ಸ್ಥಾನವನ್ನು ಕಳೆದುಕೊಳ್ಳಬಹುದು. ದೆಹಲಿಯಲ್ಲಿ ಬಿಜೆಪಿ 54% ಮತಗಳನ್ನು ಗಳಿಸಬಹುದು ಎಂದು ಎಕ್ಸಿಟ್ ಪೋಲ್ ಅಂದಾಜಿಸಿದೆ ಮತ್ತು ವಿರೋಧ ಪಕ್ಷದ ಮೈತ್ರಿ 44% ಮತಗಳನ್ನು ಪಡೆಯುತ್ತದೆ.