
ಬೆಂಗಳೂರು : ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ನ ಗ್ಯಾರಂಟಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು, ಮತದಾರ ಕಾಂಗ್ರೆಸ್ನ ಗ್ಯಾರಂಟಿಗೆ ಮತ ಹಾಕುತ್ತಾನೆ ಅನ್ನುವ ಒಂದು ದೊಡ್ಡ ಭರವಸೆ ಕಾಂಗ್ರೆಸ್ ಇಟ್ಟಿತ್ತು ಆದರೆ ಲೋಕಸಭಾ ಚುನಾವಣೆಯ ಫಲಿತಾಂಶ ಬಂದ ನಂತರ ಕಾಂಗ್ರೆಸಿಗೆ ನಿರಾಸೆಯಾಗಿದೆ.
ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ 19 ಸ್ಥಾನ ಪಡೆದುಕೊಂಡರೆ ಆಡಳಿತರೂಢ ಪಕ್ಷ ಕಾಂಗ್ರೆಸ್ 9 ಸ್ಥಾನಗಳನ್ನು ಪಡೆದುಕೊಂಡಿದೆ 20 ಕ್ಷೇತ್ರಗಳಲ್ಲಿ ಗೆಲುತ್ತೇವೆ ಎನ್ನುವ ನಂಬಿಕೆ ಕಾಂಗ್ರೆಸ್ ಇಟ್ಟಿತ್ತು ಆದರೆ ಮತದಾರ ಗ್ಯಾರಂಟಿಯ ಕೈ ಬಿಟ್ಟನ ಎನ್ನುವ ಪ್ರಶ್ನೆ ಕಾಂಗ್ರೆಸ್ ಗೆ ಕಾಡುತ್ತಿದೆ.
ಅಭಿವೃದ್ಧಿ ಕಾರ್ಯಗಳನ್ನು ಬದಿಗಿಟ್ಟು , ಗ್ಯಾರಂಟಿಗಳಿಗೆ ದೊಡ್ಡ ಮಟ್ಟದಲ್ಲಿ ಒತ್ತು ಕೊಟ್ಟಿತ್ತು ಕಾಂಗ್ರೆಸ್. ಗ್ಯಾರಂಟಿ ಯೋಜನೆಗಳನ್ನು ಮರುಪರಿಶೀಲಿಸಬೇಕು ಎಂಬ ವಾದವನ್ನು ಕೆಲವು ಕಾಂಗ್ರೆಸ್ ಶಾಸಕರು ವ್ಯಕ್ತಮಾಡುತ್ತಿದ್ದಾರೆ ಎನ್ನಲಾಗಿದೆ.
ಸಿಎಂ ಸಿದ್ದರಾಮಯ್ಯ ಅವರ ಮುಂದೆಯೂ ಕೆಲವು ಶಾಸಕರು ಅನೌಪಚಾರಿಕವಾಗಿ ಈ ವಿಚಾರವನ್ನು ಪ್ರಸ್ತಾಪಿಸಿದ್ದು, ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ನಿರೀಕ್ಷಿತ ಪ್ರಮಾಣದ ಗೆಲುವು ಸಿಕ್ಕಿಲ್ಲವಾದ ಕಾರಣ ಗ್ಯಾರಂಟಿಗಳು ಜನರ ಮನಸ್ಸು ಗೆದ್ದಿಲ್ಲ. ಹಾಗಾಗಿ, ಈ ಯೋಜನೆಗಳಿಗೆ ಸಾವಿರಾರು ಕೋಟಿ ವ್ಯಯಿಸುವ ಬದಲು ಅಭಿವೃದ್ಧಿ ಯೋಜನೆಗಳಿಗೆ ಬಳಸಬಹುದು ಎಂಬ ಅಭಿಪ್ರಾಯ ನೀಡಿದ್ದಾರೆ.
ಆದರೆ, ಶಾಸಕರ ಈ ಅಭಿಪ್ರಾಯವನ್ನು ಸಿಎಂ ಸಿದ್ದರಾಮಯ್ಯ , ಸರಕಾರದ ಫ್ಲಾಗ್ಶಿಫ್ ಕಾರ್ಯಕ್ರಮಗಳಾದ ಎಲ್ಲ ಗ್ಯಾರಂಟಿಗಳು ಮುಂದುವರಿಯುತ್ತವೆ ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
5 ಗ್ಯಾರಂಟಿ ಯೋಜನೆಗಳ ಲಾಭ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಆಗದ ಕುರಿತಂತೆ ಗುರುವಾರ ಉಡುಪಿಯಲ್ಲಿ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ. ಜಿ ಪರಮೇಶ್ವರ್, “ಲೋಕಸಭಾ ಚುನಾವಣೆಯಲ್ಲಿ ಬಹಳಷ್ಟು ಕಡೆ ನಾವು ಸೋತಿದ್ದೇವೆ. ಯಾಕೆ ಸೋತಿದ್ದೇವೆ ಮತ್ತು ಎಲ್ಲಿ ಎಡವಿದ್ದೇವೆ ಎಂಬುದೂ ಚರ್ಚೆಯಾಗಬೇಕಿದೆ.
ಜನಸಾಮಾನ್ಯರ ಅನುಕೂಲಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೆವು. ಎಲ್ಲ ಗ್ಯಾರಂಟಿಗಳು ಅನುಷ್ಠಾನಗೊಂಡಿದ್ದು, ಜನಕ್ಕೆ ತಲುಪಿವೆ. ಆದರೆ, ಅದರಿಂದ ರಾಜಕೀಯವಾಗಿ ಲಾಭದ ನಿರೀಕ್ಷೆ ಈಡೇರಿಲ್ಲ. ಈ ಕುರಿತು ಸಿಎಂ, ಡಿಸಿಎಂ ಜತೆ ಚರ್ಚೆ ಮಾಡಿದ್ದೇನೆ. ಹಿರಿಯರು ಮತ್ತು ಅನುಭವಿಗಳ ಸಮಿತಿಯೊಂದನ್ನು ರಚಿಸಿ ವಿಶ್ಲೇಷಣೆ ಮಾಡಲು ತೀರ್ಮಾನಿಸಲಾಗಿದೆ,” ಎಂದು ಹೇಳಿದ್ದಾರೆ.
ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ಸಿಗೆ ನಿರೀಕ್ಷಿತ ಸೀಟು ಬರದಿದ್ದರೂ ಕಾಂಗ್ರೆಸ್ ಮತ ಗಳಿಕೆ ಭಾರೀ ಏರಿಕೆಯಾಗಿದೆ .
2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಶೇ. 51.38ರಷ್ಟು ಮತಗಳು ಪಡೆದರೆ. ಕಾಂಗ್ರೆಸ್ ಶೇ. 31.88 ಹಾಗೂ ಜೆಡಿಎಸ್ ಶೇ. 9.67ರಷ್ಟು ಮತ ಪಡೆದಿತ್ತು.
ಆದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಮತಗಳು ಹೆಚ್ಚಾಗಿದೆ ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಮತ ಗಳಿಕೆ ಶೇ. 45.43ಕ್ಕೆ ಏರಿಕೆಯಾಗಿದೆ. ಬಿಜೆಪಿ ಮತ ಗಳಿಕೆ ಶೇ. 46.06ಕ್ಕೆ ಹಾಗೂ ಜೆಡಿಎಸ್ ಮತ ಗಳಿಕೆ ಶೇ. 5.60ಗೆ ಕುಸಿದಿದೆ.
ಈ ಬಾರಿ ಕಾಂಗ್ರೆಸ್ ನ ಗ್ಯಾರಂಟಿ ಸ್ವಲ್ಪ ಮಟ್ಟದಲ್ಲಿ ವರ್ಕೌಟ್ ಆಗಿದೆ ಎಂದು ಕಾಂಗ್ರೆಸ್ನ ಮೂಲಗಳು ಹೇಳುತ್ತಿದೆ, ಆದರೆ ಕಾಂಗ್ರೆಸ್ ನ ಕೆಲವು ನಾಯಕರು ಗ್ಯಾರಂಟಿ ಇಲ್ಲ ರಾಜಕೀಯವಾಗಿ ಅಷ್ಟರ ಮಟ್ಟಿಗೆ ಲಾಭ ಸಿಗಲಿಲ್ಲ ಎಂದು ಹೇಳುತ್ತಿದ್ದಾರೆ.