
ನವದೆಹಲಿ: ಈ ಬಾರಿ ಕೇಂದ್ರದಲ್ಲಿ ಬಿಜೆಪಿ ಸ್ವಂತ ಬಹುಮತದಿಂದ ಅಧಿಕಾರಕ್ಕೆ ಬರದೇ ಇದ್ದರೂ ಮಿತ್ರ ಪಕ್ಷಗಳ ಜೊತೆ ಸೇರಿ ಮತ್ತೆ ಅಧಿಕಾರ ಹಿಡಿದಿದೆ . ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮೊದಲ ಸಂಪುಟ ಸಭೆಯಲ್ಲಿ ಸಚಿವರಿಗೆ ಖಾತೆ ವಿತರಿಸಿದ್ದು, ಹಿಂದಿನ ಸರಕಾರದಂತೆ ಅಮಿತ್ ಶಾ ಗೃಹ ಖಾತೆ. ನಿತಿನ್ ಗಡ್ಕರಿಗೆ ರಸ್ತೆ ಸಾರಿಗೆ, ರಾಜನಾಥ್ ಸಿಂಗ್ ಅವರಿಗೆ ರಕ್ಷಣಾ ಖಾತೆ, ನಿರ್ಮಲಾ ಸೀತಾರಾಮನ್ ಅವರಿಗೆ ಹಣಕಾಸು, ಎಸ್ ಜೈಶಂಕರ್ ಅವರಿಗೆ ವಿದೇಶಾಂಗ ಸಚಿವಾಲಯ ಮುಂದುವರಿದಿದೆ.
ಹಿಂದಿನ ಸರಕಾರದಲ್ಲಿ ಈ 5 ಸಚಿವರು ಬಿಜೆಪಿಗೆ ಒಂದು ದೊಡ್ಡ ಶಕ್ತಿಯನ್ನು ತುಂಬಿದ್ದರು ಈ ಬಾರಿ ಈ ಐದು ಸಚಿವರಿಗೆ ಮೊದಲಿನ ಖಾತೆ ಮುಂದುವರಿಸಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಚಿವ ಸಂಪುಟ ಬಲಗೊಳಿಸಿದ್ದಾರೆ.
ಮನೋಹರ್ ಲಾಲ್ ಖಟ್ಟರ್ ಅವರು ವಸತಿ ಮತ್ತು ನಗರ ವ್ಯವಹಾರಗಳ ಖಾತೆಯೊಂದಿಗೆ ವಿದ್ಯುತ್ ಸಚಿವಾಲಯವನ್ನು ಪಡೆದಿದ್ದಾರೆ. ಜಿತ್ತನ್ ರಾಮ್ ಮಾಂಝಿ ಅವರಿಗೆ ಸಣ್ಣ ಮತ್ತು ಮಧ್ಯಮ ಉದ್ಯಮಗಳು, ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಕೃಷಿ ಖಾತೆ, ಅಶ್ವಿನಿ ವೈಷ್ಣವ್ ಅವರಿಗೆ ರೈಲ್ವೆ ಮತ್ತೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಶಿವರಾಜ್ ಸಿಂಗ್ ಚೌಹಾಣ್ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯ .
ಸಚಿವರು – ಖಾತೆಗಳು
ಎಚ್.ಡಿ.ಕುಮಾರಸ್ವಾಮಿ – ದೊಡ್ಡ ಕೈಗಾರಿಕೆಗಳು, ಸಾರ್ವಜನಿಕ ಉದ್ದಿಮೆಗಳು, ಉಕ್ಕು
ಪ್ರಲ್ಹಾದ್ ಜೋಶಿ- ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ
ಗಜೇಂದ್ರ ಸಿಂಗ್ ಶೇಖಾವತ್ – ಸಂಸ್ಕೃತಿ ಮತ್ತು ಪ್ರವಾಸೋದ್ಯಮ
ಸಿಆರ್ ಪಾಟೀಲ್ – ಜಲಶಕ್ತಿ ಸಚಿವ
ಚಿರಾಗ್ ಪಾಸ್ವಾನ್ – ಯುವ ವ್ಯವಹಾರ ಮತ್ತು ಕ್ರೀಡಾ ಸಚಿವ
ಜಗತ್ ಪ್ರಕಾಶ್ ನಡ್ಡಾ -ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಸರ್ಬಾನಂದ್ ಸೋನೋವಾಲ್ – ಬಂದರುಗಳು, ಹಡಗು ಮತ್ತು ಜಲಮಾರ್ಗಗಳು
ಕಿಂಜರಾಪು ರಾಮ್ ಮೋಹನ್ ನಾಯ್ಡು – ನಾಗರಿಕ ವಿಮಾನಯಾನ
ಭೂಪೇಂದರ್ ಯಾದವ್ -ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ
ಅನ್ನಪೂರ್ಣ ದೇವಿ – ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ಪಿಯೂಷ್ ಗೋಯಲ್ -ವಾಣಿಜ್ಯ ಮತ್ತು ಉದ್ಯಮ
ಹರ್ದೀಪ್ ಸಿಂಗ್ ಪುರಿ – ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ
ಮನ್ಸುಖ್ ಮಾಂಡವಿಯಾ – ಕಾರ್ಮಿಕ ಮತ್ತು ಉದ್ಯೋಗ
ಕಿರಣ್ ರಿಜಿಜು – ಸಂಸದೀಯ ವ್ಯವಹಾರಗಳ ಸಚಿವ
ಗಿರಿರಾಜ್ ಸಿಂಗ್ – ಜವಳಿ ಖಾತೆ
ಜ್ಯೋತಿರಾದಿತ್ಯ ಸಿಂಧಿಯಾ – ಟೆಲಿಕಾಂ
ಲಲನ್ ಸಿಂಗ್ – ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ
ಜುಯಲ್ ಓರಮ್ – ಬುಡಕಟ್ಟು ವ್ಯವಹಾರಗಳು
ನಿತ್ಯ ಧ್ವನಿ ವಾಟ್ಸಪ್ ಚಾನೆಲ್ ಗೆ ಜಾಯಿನ್ ಆಗಿ ಕ್ಷಣ ಕ್ಷಣದ ಸುದ್ದಿ ಹಾಗೂ ಮಾಹಿತಿಯನ್ನು ಪಡೆಯಿರಿ
https://whatsapp.com/channel/0029VacA9FQFXUuaJfV7ay2Y