
ಒಡಿಶಾದಲ್ಲಿ ಕೇಸರಿ ಸೇನೆಗೆ ಮತ್ತೊಂದು ದೊಡ್ಡ ತಲೆನೋವು ಶುರುವಾಗಿದೆ. 24 ವರ್ಷಗಳ ನವೀನ್ ಪಟ್ನಾಯಕ್ ಅವರ ಆಡಳಿತವನ್ನು ಪತನ ಮಾಡಿ ಅಧಿಕಾರದ ಚುಕ್ಕಣೆ ಹಿಡಿದಿರುವ ಬಿಜೆಪಿ ತನ್ನ ಮೊದಲ ಮುಖ್ಯಮಂತ್ರಿ ಆಗಿ ಮೋಹನ್ ಚರಣ್ ಮಾಝಿ ಆಯ್ಕೆ ಮಾಡಲಾಗಿದೆ, ಇಂದು ಅವರು ಒಡಿಶಾದ ಬಿಜೆಪಿಯ ಮೊದಲ ಮುಖ್ಯಮಂತ್ರಿ ಆಗಿ ಪದಗ್ರಹಣ ಮಾಡಲಿದ್ದಾರೆ,
ಆದರೆ ಇದೀಗ ಬಿಜೆಪಿಗೆ ಬಂದು ಸಂಕಟ ಎದುರಾಗಿದೆ ಮುಖ್ಯಮಂತ್ರಿ ಅಧಿಕೃತ ಸರಕಾರಿ ನಿವಾಸಕ್ಕಾಗಿ ಹುಡುಕಾಟ ನಡೆಸುತ್ತಿದೆ, ಎರಡು ದಶಕಗಳಿಗೂ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿದ್ದ ನವೀನ್ ಪಟ್ನಾಯಕ್ ತಮ್ಮ ಮನೆಯನ್ನೇ ಸಿಎಂ ಕಚೇರಿಯನ್ನಾಗಿ ಮಾಡಿಕೊಂಡಿದ್ದರಿಂದ ಬಿಜೆಪಿಗೆ ಹೊಸ ಮನೆ ಹುಡುಕುವಂತಾಗಿದೆ.
2000 ರ ಇಸವಿಯ ಚುನಾವಣೆಯಲ್ಲಿ, ಬಿಜೆಡಿ ಮುಖ್ಯಸ್ಥ ನವೀನ್ ಪಟ್ನಾಯಕ್ ಒಡಿಶಾದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಸರಕಾರದಿಂದ ಅವರಿಗೆ ನೀಡಿದ ಮುಖ್ಯಮಂತ್ರಿ ನಿವಾಸಕ್ಕೆ ಅವರು ಹೋಗದೆ ತಮ್ಮ ಮನೆಯನ್ನೇ ಕಚೇರಿಯನ್ನಾಗಿ ಮಾಡಿ ಕಾರ್ಯಗಳನ್ನು ಕೆಲಸಗಳನ್ನು ಮಾಡುತ್ತಿದ್ದರು ಪಟ್ನಾಯಕ್ ಅವರ ಈ ನಿರ್ಧಾರವನ್ನು ಆಗ ಹೆಚ್ಚು ಪ್ರಶಂಸೆಗೆ ಒಳಗಾಗಿತ್ತು
2000ನೇ ಸವಿಯಿಂದ 2024ರ ವಿಧಾನಸಭಾ ಚುನಾವಣೆಯವರೆಗೂ ತಮ್ಮ ಸ್ವಂತ ಮನೆಯಿಂದಲೇ ಕರ್ತವ್ಯ ನಿರ್ವಹಿಸಿದ್ದರು. ಇತರೆ ಆಡಳಿತ ವಿಭಾಗಗಳೂ ಇಲ್ಲಿಂದಲೇ ಕೆಲಸ ಮಾಡುತ್ತಿದ್ದವು. ನವೀನ್ ಪಟ್ನಾಯಕ್ ಅವರ ತಂದೆ ಮತ್ತು ಮಾಜಿ ಮುಖ್ಯಮಂತ್ರಿ ಬಿಜು ಪಟ್ನಾಯಕ್ ಅವರು ನವೀನ್ ನಿವಾಸ್ ಎಂಬ ಭವ್ಯ ಭವನವನ್ನು ನಿರ್ಮಿಸಿದ್ದರು.
ನವೀನ್ ಪಟ್ನಾಯಕ್ ಕಳೆದ 24 ವರ್ಷಗಳಿಂದ ಈ ಭವನದಿಂದಲೇ ರಾಜ್ಯವನ್ನು ಆಳುತ್ತಿದ್ದರು. ಅತಿ ಹೆಚ್ಚು ಅವಧಿಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಕೀರ್ತಿಯು ಕೂಡ ನವೀನ್ ಪಟ್ನಾಯಕ್ ಅವರಿಗೆ ಸಲ್ಲುತ್ತದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನವೀನ್ ಪಟ್ನಾಯಕ್ ಅವರ BJD ಪಕ್ಷವನ್ನು ಸೋಲಿಸಿ ಬಿಜೆಪಿ ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬಂದಿದೆ.
ರಾಜ್ಯದಲ್ಲಿ ಮೊದಲ ಬಾರಿಗೆ ಸರ್ಕಾರ ರಚಿಸಲು ಕಸರತ್ತು ನಡೆಸುತ್ತಿರುವ ಬಿಜೆಪಿ ಇಂದು ನೂತನ ಸಿಎಂ ಆಗಿ ಮೋಹನ್ ಚರಣ್ ಮಾಝಿ ಪ್ರಮಾಣ ವಚನ ಸ್ವೀಕಾರಕ್ಕೆ ಸಿದ್ಧತೆ ನಡೆಸಿದೆ. ಈ ಕಾರ್ಯಕ್ರಮಕ್ಕೆ ಪ್ರಧಾನಿ ಮೋದಿ ಕೂಡ ಭಾಗವಹಿಸಲಿದ್ದಾರೆ