
ಹೌದು, ಕೇರಳದಲ್ಲಿ ಬಿಜೆಪಿ ನಿಧಾನವಾಗಿ ಅರಳುತ್ತಿದೆ ಎಂದರೆ ತಪ್ಪಾಗಲಾರದು…!ಒಂದು ಕಾಲದಲ್ಲಿ ಪಕ್ಷದ ಬಾವುಟವನ್ನು ಹಿಡಿಯಲು 10 ಕಾರ್ಯಕರ್ತರು ಸಹ ಬಿಜೆಪಿ ಬಳಿ ಇರಲಿಲ್ಲ…!!
ಬಿಜೆಪಿ ಎಂದರೆ ಸಾಕು ಅಟ್ಟಾಡಿಸಿ ಹೊಡೆಯುವ , ಉಸಿರೆತ್ತಲು ಬಿಡದ ರಾಜಕೀಯ ಕ್ರೌರ್ಯದ, ದಬ್ಬಾಳಿಕೆಯ ದಿನಗಳು ಒಂದು ಕಾಲದಲ್ಲಿ ಕೇರಳದಲ್ಲಿತ್ತು…!
ಈಗ ಸಾವಿರಾರು ಕಾರ್ಯಕರ್ತರು ತಮ್ಮನ್ನು ತಾವು ಅರ್ಪಿಸಿಕೊಂಡು ಪಕ್ಷ ಸಂಘಟನೆ ನಡೆಸಿದ ಪರಿಣಾಮವಾಗಿ ಮೊಟ್ಟ ಮೊದಲ ಬಾರಿಗೆ ಕೇರಳದ ತ್ರಿಶೂರ್ ನಲ್ಲಿ ಬಿಜೆಪಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ತನ್ನ ಮೊದಲ ಖಾತೆಯನ್ನು ಓಪನ್ ಮಾಡಿದೆ…!!
ತ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸುರೇಶ್ ಗೋಪಿ 4 ಲಕ್ಷದ 12 ಸಾವಿರ ಮತಗಳನ್ನು ಪಡೆಯುವ ಮೂಲಕ ಕಮ್ಯುನಿಸ್ಟ್ ಪಕ್ಷವನ್ನು 74 ಸಾವಿರದ 686 ಮತಗಳ ಅಂತರದಿಂದ ಸೋಲಿಸಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಕೇರಳದಲ್ಲಿ ಕಮಲದ ಬಾವುಟವನ್ನು ಹಾರಿಸಿದ್ದಾರೆ…!
ಅಷ್ಟೇ ಯಾಕೆ ಕೇರಳದ ತಿರುವನಂತಪುರಂ, ಅತ್ತಿಂಗಲ್, ಆಲಪುಳ, ಹಾಗೂ ಪತ್ತಣಂತಿಟ್ಟ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದೆ…!!
ತಿರುವನಂತಪುರಂ ನಿಂದ ಬಿಜೆಪಿಯ ರಾಜೀವ್ ಚಂದ್ರಶೇಖರ್ 16 ಸಾವಿರ ಮತಗಳ ಅಲ್ಪ ಅಂತರದಿಂದ ಸೋಲನ್ನು ಅನುಭವಿಸಿದರೆ, ಅತ್ತಿಂಗಲ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ವಿ ಮುರಳೀಧರನ್ 17 ಸಾವಿರ ಮತಗಳ ಅಲ್ಪ ಅಂತರದಿಂದ ಸೋಲನ್ನು ಅನುಭವಿಸಿದ್ದಾರೆ…!ಇನ್ನು ನಮ್ಮ ನೆರೆಯ ಕಾಸರಗೋಡು ಜಿಲ್ಲೆಯಲ್ಲಿ ಬಿಜೆಪಿ ಈ ಬಾರಿ ಮೊಟ್ಟ ಮೊದಲ ಬಾರಿಗೆ 2 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದಿದೆ…!!
ಇನ್ನು ಆಲಪುಳದಲ್ಲಿ ಬಿಜೆಪಿ ಫಯರ್ ಬ್ರ್ಯಾಂಡ್ ಶೋಭಾ ಸುರೇಂದ್ರನ್ 2 ಲಕ್ಷದ 99 ಸಾವಿರ ಮತಗಳನ್ನು ಪಡೆದರೆ, ಪತ್ತಣಂತಿಟ್ಟ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅನಿಲ್ ಕೆ ಆಂಟನಿ 2 ಲಕ್ಷದ 34 ಸಾವಿರ ಮತಗಳನ್ನು ಪಡೆದಿದ್ದಾರೆ…!
ಲೋಕಸಭಾ ಫಲಿತಾಂಶದ ಟ್ರೆಂಡ್ ಗಳ ಪ್ರಕಾರ ಕೇರಳದಲ್ಲಿ ಬಿಜೆಪಿ 11 ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ ಹಾಗೂ 9 ವಿಧಾನಸಭಾ ಕ್ಷೇತ್ರಗಳಲ್ಲಿ ಎರಡನೇ ಸ್ಥಾನ ಗಳಿಸಿದೆ…!!ಇತರ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ 35 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದಿದೆ…!2019 ರಲ್ಲಿ ಶೇಕಡಾ 13 ರಷ್ಟಿದ್ದ ತನ್ನ ಮತಗಳಿಕೆ ಪ್ರಮಾಣವನ್ನು 2024 ಕ್ಕೆ ಶೇಕಡಾ 20 ಕ್ಕೆ ಹೆಚ್ಚಿಸಿಕೊಂಡಿದೆ…!!