
ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿಯವರ ಸರಕಾರದ ಮಸೂದೆಗಳು ದೇಶ ಮತ್ತು ಆಂಧ್ರಪ್ರದೇಶದ ಹಿತಕ್ಕಾಗಿದ್ದರೆ ಬಿಜೆಪಿಯನ್ನು ನಾವು ಸದಾ ಬೆಂಬಲಿಸುತ್ತೇವೆ ಎಂದು ವೈಎಸ್ಆರ್ ಕಾಂಗ್ರೆಸ್ ಘೋಷಿಸಿದೆ.
ನಮ್ಮ ನಿರ್ಧಾರದಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ” ಎಂದು ವೈಎಸ್ಆರ್ಸಿ ಸ್ಪಷ್ಟಪಡಿಸಿದೆ. 11 ಸಂಸದರ ಬಲವನ್ನು ವೈಎಸ್ಆರ್ ಕಾಂಗ್ರೆಸ್ ರಾಜ್ಯಸಭೆಯಲ್ಲಿ ಹೊಂದಿದೆ ಮತ್ತು ಬಿಜೆಪಿ, ಕಾಂಗ್ರೆಸ್ ಮತ್ತು ಟಿಎಂಸಿ ನಂತರ ರಾಜ್ಯಸಭೆಯಲ್ಲಿ ಇದು ನಾಲ್ಕನೇ ದೊಡ್ಡ ಪಕ್ಷವಾಗಿದೆ.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಾವು ಸೋತಿದ್ದೇವೆ ಅಂತ ನಮ್ಮನ್ನು ಮರೆಯಬಾರದು ಹಾಗೂ ನಮ್ಮ ಪಕ್ಷವನ್ನು ಮರೆಯಬಾರದು ಟಿಡಿಪಿ ಲೋಕಸಭೆಯಲ್ಲಿ 16 ಸದಸ್ಯರನ್ನು ಹೊಂದಿದ್ದರೂ, ನಾವು ರಾಜ್ಯಸಭೆಯಲ್ಲಿ11 ಸಂಸದರು ಹಾಗೂ ಲೋಕಸಭೆಯಲ್ಲಿ 4 ಸಂಸದರನ್ನು ಹಾಗೂ ಒಟ್ಟಾರೆ 15 ಸಂಸದರನ್ನು ಹೊಂದಿರುವ ಪ್ರಬಲ ಪಕ್ಷವಾಗಿದ್ದು, ನಾವು ಸಂಸತ್ತಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದೇವೆ ಎಂದು ಜಗನ್ ಶುಕ್ರವಾರ ಹೇಳಿದ್ದಾರೆ,
ಈ ಚುನಾವಣೆಯಲ್ಲಿ YSRCP 40% ಮತಗಳನ್ನು ಪಡೆದಿದೆ. ಹಿಂದಿನ ಚುನಾವಣೆಗೆ ಹೋಲಿಸಿದರೆ ಶೇ.10ರಷ್ಟು ಮತಗಳ ಕುಸಿತವಾಗಿದೆ. ಮುಂಬರುವ ದಿನಗಳಲ್ಲಿ, ಈ 10% ಮತದಾರರು ಟಿಡಿಪಿಗಿಂತ ವೈಎಸ್ಆರ್ಸಿಪಿ ಏಕೆ ಉತ್ತಮ ಎಂದು ಗುರುತಿಸುತ್ತಾರೆ. YSRCP ಎದುರಿಸುತ್ತಿರುವ ತೊಂದರೆಗಳು ಮತ್ತು ಸವಾಲುಗಳು ತಾತ್ಕಾಲಿಕ. ಜನರು ಖಂಡಿತವಾಗಿಯೂ ವೈಎಸ್ಆರ್ಸಿಪಿ ಮತ್ತು ಟಿಡಿಪಿ ಆಡಳಿತವನ್ನು ಹೋಲಿಸುತ್ತಾರೆ. YSRCP ಖಂಡಿತವಾಗಿಯೂ ಮತ್ತೆ ಅಧಿಕಾರಕ್ಕೆ ಬರುತ್ತದೆ, ಎಂದು ಹೇಳಿದರು.