
ನವದೆಹಲಿ: ಸರ್ವತಾಂತ್ರಿಕ ಚುನಾವಣೆ ಮುಗಿದು NDA ಮೈತ್ರಿಕೂಟ ಬಹುಮತದೊಂದಿಗೆ ಅಧಿಕಾರ ಹಿಡಿದಿದೆ ಮೂರನೇ ಅವಧಿಗೆ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಅಧಿಕಾರವನ್ನು ವಹಿಸಿಕೊಂಡಿದ್ದಾರೆ..!
ಆದರೆ ಈ ಬಾರಿ 2014, 2019ರ ರೀತಿ ಬಿಜೆಪಿ ತನ್ನ ಸ್ವಂತ ಬಲದಿಂದ ಅಧಿಕಾರಕ್ಕೆ ಬಂದಿಲ್ಲ ಬಹುಮತಕ್ಕೆ ಬೇಕಾಗಿರೋದು 272. ಆದರೆ ಬಿಜೆಪಿ ಬಳಿ ಇರುವುದು 240 ಸಂಸದರ ಬಲ, ಹಾಗಾಗಿ ಈ ಬಾರಿ ಬಿಜೆಪಿ ತನ್ನ ಮಿತ್ರ ಪಕ್ಷಗಳ ಜೊತೆ ಸೇರಿ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿದೆ..!
ಮಿತ್ರ ಪಕ್ಷಗಳಿಗೆ ಕೊಟ್ಟ ಮಾತಿನಂತೆ ಬಿಜೆಪಿ ಯಶಸ್ವಿಯಾಗಿ ಸಂಪುಟ ರಚನೆ ಮಾಡಿದೆ, ಆದರೆ ಈಗ ಬಿಜೆಪಿಗೆ ತಲೆನೋವು ಆಗಿರೋದು ಲೋಕಸಭಾ ಸ್ಪೀಕರ್ ಆಯ್ಕೆ ಯಾರಾಗಬೇಕು ಅನ್ನೋದು..!
ಮೂಲಗಳಿಂದ ಬಂದ ಮಾಹಿತಿ ಪ್ರಕಾರ ಮೈತ್ರಿ ಸರ್ಕಾರದಲ್ಲಿ ಲೋಕಸಭೆಯ ಸ್ಪೀಕರ್ ಸ್ಥಾನವನ್ನು ಬಿಜೆಪಿ ಉಳಿಸಿಕೊಳ್ಳುವ ಸಾಧ್ಯತೆಯಿದೆ. ಹಿಂದಿನ ಸರ್ಕಾರದಲ್ಲಿ ಲೋಕಸಭಾಧ್ಯಕ್ಷರಾಗಿದ್ದ ಓಂ ಬಿರ್ಲಾ ಅವರೇ ಇನ್ನೊಂದು ಅವಧಿಗೆ ಮುಂದುವರಿಯಬಹುದು ಎಂದು ಪಕ್ಷದ ಮೂಲಗಳು ಹೇಳುತ್ತಿವೆ. ಲೋಕಸಭಾದ್ಯಕ್ಷರು ಯಾರಾಗಬೇಕು ಎಂಬುದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಧರಿಸಲಿದ್ದು, ಬಿಜೆಪಿಯ ಮಿತ್ರಪಕ್ಷಗಳು ಕೂಡ ಅದಕ್ಕೆ ಒಪ್ಪಿಗೆ ಸೂಚಿಸಬಹುದು ಎಂದು ಮೂಲಗಳು ಹೇಳುತ್ತವೆ.
ಆದರೆ ಮೈತ್ರಿ ಪಕ್ಷಗಳಿಗೆ ಉಪಸಭಾಪತಿ ಹುದ್ದೆಯನ್ನು ಬಿಜೆಪಿ ನೀಡುವ ಭರವಸೆ ಕೊಟ್ಟಿದೆ. ಬಿಜೆಪಿ ತನ್ನ ಮಿತ್ರ ಪಕ್ಷವಾಗಿರುವ TDP (ತೆಲುಗು ದೇಶಂ ಪಕ್ಷ) ಗೆ ಉಪ ಸಭಾಪತಿ ಸ್ಥಾನವನ್ನು ಬಿಟ್ಟು ಕೊಡಲಿದೆ ಎಂದು ಹೇಳಲಾಗುತ್ತಿದೆ.
ಆದರೆ NDA ಮೈತ್ರಿಕೂಟದಲ್ಲಿ ಲೋಕಸಭಾ ಸ್ಪೀಕರ್ ಗೆ ಕೆಲವು ಹೆಸರುಗಳು ಕೇಳಿ ಬರುತ್ತಿದೆ ಆಂಧ್ರಪ್ರದೇಶದ ಬಿಜೆಪಿಯ ರಾಜ್ಯ ಅಧ್ಯಕ್ಷ ಡಿ ಪುರಂದೇಶ್ವರಿ, ಮಾಜಿ ಕೇಂದ್ರ ಸಚಿವರಾಗಿದ್ದ ರಾಧಾ ಮೋಹನ್ ಸಿಂಗ್, ಇಲ್ಲವಾದಲ್ಲಿ ಪ್ರಸ್ತುತ ಸ್ಪೀಕರ್ ಆಗಿರುವ ಓಂ ಬಿರ್ಲಾ ಅವರೇ ಮುಂದುವರಿಯುವ ಸಾಧ್ಯತೆಯಿದೆ ಎಂದು ಬಿಜೆಪಿ ನಾಯಕರೊಬ್ಬರು ಹೇಳುತ್ತಾರೆ.
ಇದೇ ಜೂನ್ 24 ರಿಂದ ಪ್ರಾರಂಭವಾಗುವ 18 ನೇ ಲೋಕಸಭೆಯ ಮೊದಲ ಅಧಿವೇಶನಕ್ಕೆ ಮುಂಚಿತವಾಗಿ, ಸ್ಪೀಕರ್ ಆಯ್ಕೆಯ ಬಗ್ಗೆ ಒಮ್ಮತಕ್ಕೆ ಬರಲು ಎನ್ಡಿಎ ಮಿತ್ರಪಕ್ಷಗಳ ನಿರ್ಣಾಯಕ ಸಭೆಯು ಈ ವಾರ ನಡೆಯಲಿದೆ. ಈ ಸಭೆಯಲ್ಲಿ ಮಿತ್ರಪಕ್ಷಗಳಿಗೆ ಒಪ್ಪಿಗೆಯಾಗುವ ಸ್ಪೀಕರ್ ಆಯ್ಕೆ ಮಾಡುವುದು ಬಿಜೆಪಿ ಉದ್ದೇಶ. ಮಿತ್ರಪಕ್ಷಗಳೊಂದಿಗಿನ ಸಭೆಯಯಲ್ಲಿ ನಿರ್ಣಯವಾಗಲಿದೆ ಎಂದು ಬಿಜೆಪಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.
ಜೂನ್ 26 ರಂದು ಪ್ರಧಾನ ಮಂತ್ರಿಯಿಂದ ಹೆಸರಿನ ಅಂತಿಮ ಘೋಷಣೆಯಾಗಲಿದೆ. ಇದೇ ದಿನ ಲೋಕಸಭಾಧ್ಯಕ್ಷರ ಹುದ್ದೆಗೆ ಚುನಾವಣೆ ದಿನಾಂಕ ನಿಗದಿಯಾಗಲಿದೆ. ಇದು ಒಕ್ಕೂಟದ ಕಾರ್ಯತಂತ್ರದ ಒಗ್ಗಟ್ಟನ್ನು ಪ್ರತಿಬಿಂಬಿಸುತ್ತದೆ ಎನ್ನುತ್ತಾರೆ ಬಿಜೆಪಿ ನಾಯಕರು.
ಜೂನ್ 26 ರೊಳಗೆ ಸ್ಪೀಕರ್ ಆಯ್ಕೆಗೆ ಸರಿಯಾದ ಕ್ರಮವನ್ನು ರೂಪಿಸಲು ಜೂನ್ 20 ರಂದು ಎನ್ಡಿಎ ಮಿತ್ರಪಕ್ಷಗಳ ಸಭೆ ನಡೆಯಬಹುದು ಎಂದು ಮೂಲಗಳು ತಿಳಿಸಿವೆ.