
ನವದೆಹಲಿ : 2024 ರ ಲೋಕಸಭಾ ಚುನಾವಣೆ ಫಲಿತಾಂಶದಷ್ಟೇ,ತೀವ್ರ ಕುತೂಹಲ ಕೆರಳಿಸಿರುವ ಲೋಕಸಭಾ ಸ್ಪೀಕರ್ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಎನ್ ಡಿಎ ಕೂಟದಿಂದ ಓಂ ಬಿರ್ಲಾ ಮತ್ತು INDIA ಕೂಟದಿಂದ ಕೋಡಿಕುನ್ನಿಲ್ ಸುರೇಶ್ ಸ್ಪರ್ಧಿಸುತ್ತಿದ್ದಾರೆ.
ಸರಕಾರ ವಿಪಕ್ಷಗಳಿಗೆ ಉಪಸಭಾಪತಿ ಸ್ಥಾನ ಬಿಟ್ಟು ಕೊಡುವ ನಿರೀಕ್ಷೆಯಲ್ಲಿ ಇಲ್ಲದ ಕಾರಣ ವಿಪಕ್ಷಗಳು ಅಭ್ಯರ್ಥಿಯನ್ನ ಕಣಕ್ಕಿಳಿಸಿದೆ.
ಇಂದು ಬೆಳಿಗ್ಗೆ 11 ಗಂಟೆಗೆ ಸರಿಯಾಗಿ ಸ್ಪೀಕರ್ ಆಯ್ಕೆಗೆ ಚುನಾವಣೆ ನಡೆಯಲಿದೆ,
ಕ್ರಾಸ್ ವೋಟಿಂಗ್ ನಿರೀಕ್ಷೆಯಲ್ಲಿದ್ದ ಪ್ರತಿಪಕ್ಷದ ಅಭ್ಯರ್ಥಿ ಕೆ ಸುರೇಶ್ ಗೆಲುವು ಸಾಧಿಸಲಿದ್ದಾರೆ ಎಂದು ಇಂಡಿಯಾ ಮೈತ್ರಿಕೂಟ ವಿಶ್ವಾಸ ವ್ಯಕ್ತಪಡಿಸುತ್ತಿದೆ.
ಆದರೆ NDA ಸಂಖ್ಯೆ ಬಲ ಹೆಚ್ಚಿರುವ ಕಾರಣ ಎಂಡಿಎ ಅಭ್ಯರ್ಥಿ ಓಂ ಬಿರ್ಲಾ ಮತ್ತೊಮ್ಮೆ ಸ್ಪೀಕರ್ ಆಗಿ ಆಯ್ಕೆ ಆಗಲಿ ಎಂದು ಬಿಜೆಪಿ ಹೇಳುತಿದೆ.
ಇಂಡಿಯಾ ಕೂಟಕ್ಕೆ ಶಾಕ್ ಕೊಟ್ಟ TMC
ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ. ಬುಧವಾರ ಸ್ಪೀಕರ್ ಹುದ್ದೆಗೆ ಚುನಾವಣೆ ನಡೆಯಲಿದ್ದು, ಇಂಡಿಯಾ ಬ್ಲಾಕ್ನ ಅಭ್ಯರ್ಥಿಯಾಗಿ ಕೆ. ಸುರೇಶ್ ಅವರನ್ನು ಆಯ್ಕೆ ಮಾಡುವ ಮುನ್ನ ತಮ್ಮ ಬಳಿ ಸಮಾಲೋಚನೆಯನ್ನೇ ನಡೆಸಿಲ್ಲ ಎಂದು ಟಿಎಂಸಿ ಆರೋಪಿಸಿದೆ. ಕಾಂಗ್ರೆಸ್ ಸಂಸದ ಕೆ. ಸುರೇಶ್ ಅವರನ್ನು ಇಂಡಿಯಾ ಬ್ಲಾಕ್ನ ಜಂಟಿ ನಾಮನಿರ್ದೇಶಿತ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಪ್ರತಿಪಕ್ಷಗಳ ನಿರ್ಧಾರದ ಬಗ್ಗೆ ನಮ್ಮ ಪಕ್ಷದ ನಾಯಕರ ಬಳಿ ಸಮಾಲೋಚನೆ ನಡೆಸಿಲ್ಲ. ದುರದೃಷ್ಟವಶಾತ್ ಇದು ಏಕಪಕ್ಷೀಯ ನಿರ್ಧಾರವಾಗಿದೆ ಎಂದು ಟಿಎಂಸಿ ಹೇಳಿದೆ.
NDA ಅಭ್ಯರ್ಥಿ ಓಂ ಬಿರ್ಲಾಗೆ ವೈಸಿಪಿ ಬೆಂಬಲ ಘೋಷಿಸಿದೆ.
YSRPC NDA ಮೈತ್ರಿಕೂಟ ಸೇರದಿದ್ದರೂ ಈ ಹಿಂದೆ NDA ಗೆ ಬೆಂಬಲ ನೀಡಿತ್ತು ಇನ್ನು ವೈಎಸ್ಆರ್ಪಿ ಆಗಾಗ್ಗೆ ಸಂಸತ್ತಿನಲ್ಲಿ ವಿಶೇಷವಾಗಿ ರಾಜ್ಯಸಭೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದು, ಸಂಖ್ಯಾಬಲದ ಕೊರತೆಯಿದ್ದಾಗ ಕಾನೂನುಗಳನ್ನು ಅಂಗೀಕರಿಸಲು ನೆರವಾಗಿದೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ತೆಗೆದುಕೊಂಡಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಅಂಗೀಕಾರ ಮತ್ತು ಜಮ್ಮು ಮತ್ತು 370 ನೇ ವಿಧಿಯನ್ನು ರದ್ದುಪಡಿಸುವುದನ್ನು ರೆಡ್ಡಿ ಬೆಂಬಲಿಸಿದ್ದರು.
ಓಂ ಬಿರ್ಲಾ ಮತ್ತು ಬಿಜೆಪಿ ಈಗಾಗಲೇ ಗೆಲುವನ್ನು ಖಚಿತಪಡಿಸಿಕೊಳ್ಳಲು ಸಂಖ್ಯಾಬಲ ಹೊಂದಿದ್ದು, ಆದಾಗ್ಯೂ ಜಗನ್ ಬಿಜೆಪಿ ಕಡೆಗೆ ಒಲವು ತೋರಿದೆ.
ಇನ್ನೂ ಪಕ್ಷಗಳ ಸಂಖ್ಯೆ ಬಲ ನೋಡೋದಾದರೆ ಬಿಜೆಪಿ 240 ಮಿತ್ರ ಪಕ್ಷಗಳು 53 + YSRCP
ಇಂಡಿಯಾ ಮೈತ್ರಿಕೂಟ 231.