
ಬೆಂಗಳೂರು : ಮಳೆಗಾಲ ಶುರುವಾಗುತ್ತಿದ್ದಂತೆ ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಕೂಡ ದಿನ ದಿನಕ್ಕೆ ಏರುತಿದೆ
ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿದ್ದು ಆತಂಕ ಹೆಚ್ಚಾಗಿದೆ. ನಗರದಲ್ಲಿ ಕಳೆದ ಆರು ತಿಂಗಳಲ್ಲಿ 2,447 ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದು, ಕಳೆದ ಮೂರು ವಾರಗಳಲ್ಲಿ ಡೆಂಗ್ಯೂ ಪ್ರಕರಣಗಳು 1,036ಕ್ಕೆ ತಲುಪಿದೆ.
ಬೆಂಗಳೂರು, ಚಿಕ್ಕಮಗಳೂರು, ಮೈಸೂರು, ಹಾವೇರಿ, ಶಿವಮೊಗ್ಗ, ಚಿತ್ರದುರ್ಗ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣಗಳು ಕಾಣಿಸಿಕೊಂಡಿದ್ದು, ಬಿಬಿಎಂಪಿ ವ್ಯಾಪ್ತಿಯಲ್ಲಿ ಬರೋಬ್ಬರಿ 1230 ಪ್ರಕರಣಗಳು ವರದಿಯಾಗಿರೋ ಬಗ್ಗೆ ಮಾಹಿತಿ ನೀಡಿದರು.
ಸರ್ಕಾರ ಡೆಂಗ್ಯೂ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ನಿಯಂತ್ರಣಕ್ಕೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಅಗತ್ಯ ಚಿಕಿತ್ಸಾ ಸೌಲಭ್ಯಗಳು, ಔಷಧಿಗಳು ಲಭ್ಯವಿರುವುದನ್ನು ಖಾತರಿಪಡಿಸಲು ಸೂಚಿಸಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.
ಆಶಾ ಕಾರ್ಯಕರ್ತೆಯರು, ನರ್ಸಿಂಗ್ ವಿದ್ಯಾರ್ಥಿಗಳು, ಎನ್.ಎಸ್.ಎಸ್. ವಿದ್ಯಾರ್ಥಿಗಳು ಮತ್ತಿತರ ಸ್ವಯಂ ಸೇವಕರ ನೆರವಿನೊಂದಿಗೆ ಮನೆ ಮನೆ ಸಮೀಕ್ಷೆ ನಡೆಸಿ ಅರಿವು ಮೂಡಿಸಲು ಸೂಚಿಸಬೇಕು. ಪ್ರತಿ ಶುಕ್ರವಾರ source reduction activity (ರೋಗ ಹರಡುವ ಮೂಲ ಪತ್ತೆ ಮತ್ತು ನಾಶ) ವಿಶೇಷ ಅಭಿಯಾನ ಮಾಡಬೇಕು. ಪ್ರತಿ ವಾರ ಬಿಬಿಎಂಪಿ, ನಗರಾಭಿವೃದ್ಧಿ ಮತ್ತು ಆರೋಗ್ಯ ಇಲಾಖೆಯವರು ಜಂಟಿಯಾಗಿ ಡೆಂಘಿ ನಿಯಂತ್ರಣ ಕುರಿತು ಪರಿಶೀಲನೆ ನಡೆಸಬೇಕು ಎಂದು ಸಿಎಂ ಸೂಚನೆ ನೀಡಿದರು.
ಹುಬ್ಬಳ್ಳಿ-ಧಾರವಾಡದಲ್ಲೂ ಡೆಂಗ್ಯೂ ಹಾವಳಿ ಜೋರಾಗಿದೆ. ಧಾರವಾಡ ನಗರದಲ್ಲಿ 64 ಜನರಲ್ಲಿ ಸೋಂಕು ಪತ್ತೆಯಾದ್ರೆ, ಹುಬ್ಬಳ್ಳಿಯಲ್ಲಿ 11 ಜನರಲ್ಲಿ ಸೋಂಕು ಪತ್ತೆಯಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ಬಾರಿ ಸೋಂಕು ಪೀಡಿತರ ಸಂಖ್ಯೆ ಹೆಚ್ಚಳ ಆಗ್ತಿದ್ಯಂತೆ. ಈ ಬಗ್ಗೆ ಮಾಹಿತಿ ನೀಡಿದ ಪಾಲಿಕೆ ಆಯುಕ್ತರು, ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ. ಶಾಲಾ, ಕಾಲೇಜು, ವಿವಿಧ ಬಡಾವಣೆಗಳಲ್ಲಿ ಜಾಗೃತಿ ಮೂಡಿಸ್ತಿದೇವೆ ಎಂದರು.
ಡೆಂಗ್ಯೂ ಜ್ವರದ ಲಕ್ಷಣಗಳೇನು?
- ತಲೆನೋವು
- ಜಂಟಿ, ಸ್ನಾಯು ಅಥವಾ ಮೂಳೆ ಅಸ್ವಸ್ಥತೆ
- ವಾಕರಿಕೆ
- ವಾಂತಿ
- ಕಣ್ಣುಗಳ ಹಿಂಭಾಗ ನೋವು ಉಂಟು ಮಾಡುತ್ತದೆ
- ವಿಸ್ತರಿಸಿದ ಗ್ರಂಥಿಗಳು
- ಮೊಡವೆ
ಡೆಂಗ್ಯೂ ಸೋಂಕು ತೀವ್ರವಾದರೆ ಈ ಲಕ್ಷಣ ಗೋಚರ
- ಭಯಾನಕ ಹೊಟ್ಟೆ ನೋವು
- ನಿರಂತರ ವಾಂತಿ
- ಮೂಗು ಅಥವಾ ಒಸಡುಗಳಿಂದ ರಕ್ತಸ್ರಾವ
- ನಿಮ್ಮ ಮಲ, ಮೂತ್ರ ಅಥವಾ ವಾಂತಿಯಲ್ಲಿ ರಕ್ತಸ್ರಾವ
- ಮೂಗೇಟುಗಳನ್ನು ಹೋಲುವ ಚರ್ಮದ ಅಡಿಯಲ್ಲಿ ರಕ್ತಸ್ರಾವ
- ಕಷ್ಟ ಮತ್ತು ತ್ವರಿತ ಉಸಿರಾಟ
- ಆಯಾಸ
- ಕಿರಿಕಿರಿ ಮತ್ತು ಚಡಪಡಿಕೆ
ಡೆಂಗ್ಯೂ ಸೋಂಕು ಎಷ್ಟು ದಿನಗಳವರೆಗೂ ಇರುವುದು?
ಡೆಂಗ್ಯೂ ಸೋಂಕು ಸಾಮಾನ್ಯವಾಗಿ 2 ರಿಂದ 7 ದಿನಗಳವರೆಗೂ ಇರುತ್ತದೆ. ಸೋಂಕು ತಗುಲಿರುವ ಸೊಳ್ಳೆಯು ಕಚ್ಚಿದ 2 ರಿಂದ 4 ವಾರಗಳಿಂದ ಜ್ವರ ಪ್ರಾರಂಭ ಆಗುತ್ತದೆ.
ಡೆಂಗ್ಯೂ ರೋಗವನ್ನು ತಡೆಯುವುದು ಹೇಗೆ?
- ಪರದೆಯಿಲ್ಲದ ಕಿಟಕಿಗಳು ಮತ್ತು ಬಾಗಿಲುಗಳನ್ನು ಮುಚ್ಚುವುದು
- ಮಕ್ಕಳು ಹೊರಗಡೆ ಇರುವಾಗಲೆಲ್ಲಾ ಉದ್ದನೆಯ ತೋಳುಗಳು ಮತ್ತು ಪ್ಯಾಂಟ್ಗಳನ್ನು ಧರಿಸಬೇಕು
- ರಾತ್ರಿ ವೇಳೆಯಲ್ಲಿ ಸೊಳ್ಳೆ ಪರದೆಯಿಂದ ಅವರ ಹಾಸಿಗೆಗಳನ್ನು ಮುಚ್ಚಬೇಕು
- ರೋಗ ನಿರೋಧಕಗಳನ್ನು ನೀಡುವಂತೆ ಸೂಚನೆ
- ಸೊಳ್ಳೆಗಳಿಗೆ ಗೂಡು ಕಟ್ಟಲು ಸ್ಥಳ ಒದಗಿಸುವುದನ್ನು ತಪ್ಪಿಸಬೇಕು
- ಕಂಟೇನರ್ಗಳು ಮತ್ತು ಬಳಸಿದ ಟೈರ್ಗಳಂತಹ ವಸ್ತುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು, ಏಕೆಂದರೆ ಇಂಥ ಪ್ರದೇಶದಲ್ಲಿಯೇ ಸೊಳ್ಳೆಗಳು ಮೊಟ್ಟೆಯನ್ನು ಇಡುತ್ತವೆ