
ಬೆಂಗಳೂರು : ಕೆಲವು ದಿನಗಳ ಹಿಂದೆ ಅಷ್ಟೇ ಗೋಬಿಮಂಚೂರಿ ಕಬಾಬ್ ತಯಾರು ಮಾಡಲು ಬಳಸುವ ಕೆಲವು ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಇದೆ ಎಂದು ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅವುಗಳನ್ನು ನಿಷೇಧ ಮಾಡಿತ್ತು, ಈಗ ಪಾನಿಪುರಿ ಪ್ರಿಯರಿಗೆ ಇಲಾಖೆ ಶಾಕ್ ಕೊಟ್ಟಿದೆ.
ಬೆಂಗಳೂರಿನ 49 ಪ್ರದೇಶಗಳಿಂದ ಸಂಗ್ರಹಿಸಿದ ಸ್ಯಾಂಪಲ್ಸ್ ಗಳಲ್ಲಿ ಕ್ಯಾನ್ಸರ್ ಕಾರಕ ಅಂಶಗಳು ಪತ್ತೆಯಾಗಿದೆ. ಪಾನಿಪೂರಿ ತಯಾರಿಕೆ ಪದಾರ್ಥಗಳಲ್ಲಿ ಕ್ಯಾನ್ಸರ್ ಕಾರಕ ಇರೋದು ಖಚಿತವಾಗಿದ್ದ, ಈ ಹಿನ್ನೆಲೆಯಲ್ಲಿ ಶೀಘ್ರದಲ್ಲೇ ಪಾನಿಪೂರಿಗೆ ಬಳಸುವ ಕ್ಯಾನ್ಸರ್ ಕಾರಕ ಅಂಶಗಳು ಬ್ಯಾನ್ ಮಾಡಲು ನಿರ್ಧಾರ ಮಾಡಲಾಗಿದೆಯಂತೆ.
ಈ ಕುರಿತಂತೆ ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತ ಶ್ರೀನಿವಾಸ್ ಮಾಹಿತಿ ಹಂಚಿಕೊಂಡಿದ್ದಾರೆ. ಪಾನಿಪೂರಿಗೆ ಬಳಸುವ ಐದು ಸಾಸ್, ಮೀಟಾ ಖಾರದಲ್ಲಿ ಐದು ಬಗೆಯ ರಾಸಾಯನಿಕ ಅಂಶಗಳು ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಸ್ನೇಹಿತರೆ ಕರ್ನಾಟಕ ರಾಜ್ಯ ಸರಕಾರ ಈ ಹಿಂದೆ ಗೋಬಿ ಮಂಚೂರಿ ಹಾಗೂ ಕಬಾಬ್ ಗೆ ಬಳಸುವ ಕಲರ್ ಗಳನ್ನು ಬ್ಯಾನ್ ಮಾಡಿ ತುಂಬಾ ಒಳ್ಳೆಯ ಕೆಲಸ ಮಾಡಿತ್ತು, ಈಗ ಪಾನಿಪುರಿ ಅಲ್ಲಿ ಅನೇಕ ರೀತಿಯ ರಾಸಾಯನಿಕಗಳನ್ನ ಬಳಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ, ಸಂಪೂರ್ಣವಾಗಿ ಪರೀಕ್ಷಿಸಿ ಇಲಾಖೆ ಪಾನಿಪುರಿ ಬ್ಯಾನ್ ಮಾಡುವ ಸಾಧ್ಯತೆಗಳು ಕೂಡ ಇದೆ.
ವಿಶ್ವದಲ್ಲಿ ಸಾವಿರಾರು ಜನರ ಜೀವವನ್ನ ತೆಗೆಯುತ್ತಿರುವ ಕ್ಯಾನ್ಸರ್ ನಂತಹ ಮಾರಕ ರೋಗ ಇಡೀ ವಿಶ್ವವನ್ನು ವ್ಯಾಪಿಸಿಕೊಂಡಿದೆ ನಾನಾ ರೂಪದಲ್ಲಿ ಜನರನ್ನ ಈ ಕ್ಯಾನ್ಸರ್ ರೋಗ ಕಾಡುತ್ತಿದೆ ಇನ್ನು ಸರಕಾರಗಳು ಹಾಗೂ ಸಂಘ ಸಂಸ್ಥೆಗಳು ಜಾಗ್ರತೆ ಮೂಡಿಸುವ ಕೆಲಸಗಳು ಮಾಡುತ್ತಿದೆ ಆದರೆ ನಾವು ನಿತ್ಯ ಸೇವಿಸುವ ಆಹಾರ ಪದಾರ್ಥಗಳಲ್ಲಿಯೇ ಕ್ಯಾನ್ಸರ್ ಕಾರಕ ಅಂಶಗಳಿರೋದು ಆಘಾತಕಾರಿ ವಿಷಯ,
ಕೆಲವು ವರ್ಷಗಳ ಹಿಂದೆ ಸುಮಾರು 28 ರಿಂದ 30 ವರ್ಷದ ಯುವಕ ದಿನನಿತ್ಯ ಜಿಮ್ಮಿಗೆ ಹೋಗಿ ದೇಹ ದಂಡಿಸುತ್ತಿದ್ದ ಯುವಕನಿಗೆ ಯಾವ ದ್ವರಾಭ್ಯಾಸಗಳು ಕೂಡ ಇರಲಿಲ್ಲ ದೇಹ ಗಟ್ಟಿಮುಟ್ಟಾಗಿ ಇತ್ತು ಆದರೆ ಅಂತಹ ವ್ಯಕ್ತಿಗೆ ಎರಡು ಕಿಡ್ನಿ ಫೇಲ್ವರ್ ಆಯ್ತು ನಂತರ ಡಾಕ್ಟರಿಗೆ ಒಂದು ಅನುಮಾನ ಬಂತು ಈ ವ್ಯಕ್ತಿ ಯಾವ ಆಹಾರ ಸೇವಿಸುತ್ತಾನೆ ಎಂದು ತಕ್ಷಣ ಅವರು ಆ ವ್ಯಕ್ತಿಯನ್ನು ವಿಚಾರಣೆ ಮಾಡುತ್ತಾರೆ. ನೀವು ಯಾವ ಆಹಾರಗಳನ್ನು ಸೇವಿಸುತ್ತೀರಾ ದಿನನಿತ್ಯ ಎಂದು ಅದಕ್ಕೆ ಯುವಕ ಉತ್ತರ ಕೊಡುತ್ತಾನೆ ನಾನು ಪ್ರತಿನಿತ್ಯ ಸಂಜೆ ಜಿಮ್ ಮಾಡಲು ತೆರಳುವಾಗ ಮಸಾಲಾಪುರಿ ಪ್ಯಾಡ್ ರೈಸ್ ಹಾಗೂ ಚೈನೀಸ್ ಫಾಸ್ಟ್ ಫುಡ್ ಗಳನ್ನು ಸೇವಿಸುತ್ತಿದ್ದೇನೆ ಇಂದು ಯುವಕ ಹೇಳುತ್ತಾನೆ.
ನೋಡಿ ಸ್ನೇಹಿತರೆ ನಾವು ದಿನನಿತ್ಯ ಸೇವಿಸುವ ಆಹಾರ ಪದಾರ್ಥಗಳಲ್ಲಿ ಎಷ್ಟೊಂದು ಕ್ಯಾನ್ಸರ್ ಕಾರಕ ಅಂಶಗಳು ಇದೆ ಎನ್ನುವುದಕ್ಕೆ ಇದೊಂದು ಉದಾಹರಣೆ.
ಕ್ಯಾನ್ಸರ್ ಕಾರಕ ಇರೋ ಸಾಸ್, ಮೀಟಾ ಖಾರದ ಪುಡಿ ಬ್ಯಾನ್ ಮಾಡುವ ಬಗ್ಗೆ ಆರೋಗ್ಯ ಇಲಾಖೆ ಚಿಂತನೆ ನಡೆಸಿದೆ. ಇದರೊಂದಿಗೆ ಪಾನಿಪುರಿ ಅಂದ್ರೆ ಬಾಯಿ ನೀರು ಬಿಡುವ ಯುವತಿಯರು, ವಿದ್ಯಾರ್ಥಿಗಳೇ ಬಿಗ್ ಶಾಕ್ ಎದುರಾಗಿದೆಯಂತೆ.
ಇನ್ನು, ಕೃತಕ ಬಣ್ಣ ಬಳಸುವುದರಿಂದ ಆರೋಗ್ಯದ ಮೇಲೆ ಭಾರೀ ದುಷ್ಪರಿಣಾಮ ಬೀರುವುದರಿಂದ ಕಲರ್ ಕಾಟನ್ ಕ್ಯಾಂಡಿಯನ್ನು ನಿಷೇಧಿಸಲಾಗಿತ್ತು. ಜೊತೆಗೆ ಗೋಬಿ ಮಂಚೂರಿ ತಯಾರಿಸುವಾಗ ಕೃತಕ ಬಣ್ಣ ಬಳಸುವುದನ್ನು ಕೂಡ ನಿಷೇಧಿಸಿ ಸರ್ಕಾರ ಆದೇಶಿಸಿತ್ತು.