
ಸನಾತನ ಹಿಂದೂ ಧರ್ಮದಲ್ಲಿ ತುಳಸಿಗೆ ವಿಶೇಷವಾದಂತಹ ಮಹತ್ವವಿದೆ ಮನೆಯ ಅಂಗಳದಲ್ಲಿ ತುಳಸಿ ವೃಂದಾವನವಿರುವ ಮನೆಗಳಲ್ಲಿ ಸಾಕ್ಷಾತ್ ಲಕ್ಷ್ಮೀದೇವಿ ನೆಲೆಸುತ್ತಾಳೆ ಎಂದು ಹೇಳುತ್ತಾರೆ, ಹಾಗೆ ತುಳಸಿ ಇದ್ದಲ್ಲಿ ಶ್ರೀಹರಿಯ ವಾಸಸ್ಥಾನ ಎಂದು ಪುರಾಣಗಳಲ್ಲಿ ಹೇಳಲಾಗಿದೆ, ಆಯುರ್ವೇದ , ಆಧ್ಯಾತ್ಮ ಧಾರ್ಮಿಕ, ಹಾಗೆ ಈ ಎಲ್ಲಾ ಶಾಸ್ತ್ರಗಳಲ್ಲಿಯೂ ತುಳಸಿಗೆ ಮಹತ್ವದ ಸ್ಥಾನವಿದೆ. ತುಳಸಿ ಇಲ್ಲದೆ ಯಾವ ಪೂಜೆಯು ಪೂರ್ಣವಾಗುವುದಿಲ್ಲ ಎಂದು ಶಾಸ್ತ್ರ ಹೇಳುತ್ತದೆ,
ತುಳಸಿ ಕಾನನಂ ಯತ್ರ ಯತ್ರಪದ್ಮವ ನಾನಿಚ
ವಸಂತಿ ವೈಷ್ಣವಾಯತ್ರ ತತ್ರ ಸನ್ನಿಹಿತೋ ಹರಿ:
ಅಂದರೆ ತುಳಸಿ ವನ ಹಬ್ಬಿರುವ ಜಾಗದಲ್ಲಿ ಶ್ರೀ ಹರಿಯು ಸದಾ ವಾಸ ಮಾಡುತ್ತಾನೆ. ಶೈವರು, ವೈಷ್ಣವರು, ಗಾಣಸತ್ಯರು, ದೇವೀ ಉಪಾಸಕರು ಮೊದಲಾದ ಎಲ್ಲಾ ಪಂಥಗಳ ಆಸ್ತಿಕ ಹಿಂದೂಗಳು ತಮ್ಮ ಮನೆಯಂಗಳಗಳಲ್ಲಿ ತುಳಸಿಯನ್ನು ನೆಟ್ಟು, ತುಳಸಿ ಕಟ್ಟೆ ಕಟ್ಟಿ, ಅದಕ್ಕೆ ನಿತ್ಯವೂ ಪೂಜಿಸುತ್ತಾರೆ.
ಯಾ ದೃಷ್ಟಾ ನಿಖಿಲಾಘಸಂಘಶಮನೀ ಸ್ಪೃಷ್ಟ್ವಾ ವಪು: ಪಾವನೀ
ರೋಗಾಣಾಂ ಅಭಿವಂದಿತಾ ನಿರಸನೀ ಸಿಕ್ತಾಂತಕತ್ರಾಸಿನೀ |
ಪ್ರತ್ಯಾಸತ್ತಿವಿಧಾಯಿನೀ ಭಗವತ: ಕೃಷ್ಣಸ್ಯ ಸಂರೋಪಿತಾ
ನ್ಯಸ್ತಾ ತಚ್ಚರಣೇ ವಿಮುಕ್ತಿಫಲದಾ ತಸ್ಯೈ ತುಲಸ್ಯೈ ನಮ: ||
ತುಳಸಿಗೆ ನಮಸ್ಕರಿಸಬೇಕು – ಆ ತುಳಸಿಯು ಏನೇನು
ಮಾಡತಕ್ಕಂತವಳು ಎಂಬುದನ್ನು ಈ ಶ್ಲೋಕ ಹೇಳುತ್ತದೆ –
ತನ್ನ ದರ್ಶನಮಾತ್ರದಿಂದ ಸಕಲಪಾಪಗಳ ಹಿಂಡನ್ನೇ ಪರಿಹರಿಸುತ್ತದೆ.
ತನ್ನ ಸ್ಪರ್ಶನದಿಂದ ಇಡೀ ದೇಹವನ್ನೇ ಪಾವನಗೊಳಿಸುತ್ತದೆ
ವಂದನೆ ಮಾತ್ರದಿಂದ ಸಕಲರೋಗಗಳನ್ನೂ ಗುಣಪಡಿಸುತ್ತದೆ.
ಪ್ರೋಕ್ಷಣದಿಂದ ಯಮನ ಭಯವನ್ನು ಪರಿಹರಿಸುತ್ತದೆ
ಮನೆಯಲ್ಲಿ ಬೆಳೆಸುವುದರಿಂದ ಭಗವಂತನಾದ ಶ್ರೀ ಕೃಷ್ಣನಲ್ಲಿ ಭಕ್ತಿಯನ್ನು ಕರುಣಿಸುತ್ತದೆ, ತುಳಸಿಯನ್ನು ಪರಮಾತ್ಮನ ಪಾದಕಮಲದಲ್ಲಿ ಸಮರ್ಪಣದಿಂದ ಮುಕ್ತಿ ಫಲವನ್ನು ನೀಡುತ್ತದೆ.
ಆದರೆ ತುಳಸಿ ಪೂಜೆ ಯಾವ ಸಮಯದಲ್ಲಿ ಮಾಡಬೇಕು ತುಳಸಿಗೆ ದೀಪ ಯಾವ ಸಮಯದಲ್ಲಿ ಹಚ್ಚಬೇಕು ಇನ್ನು ಇದರ ಬಗ್ಗೆ ತಿಳಿದುಕೊಳ್ಳೋಣ.
ತುಳಸಿಗೆ ದೀಪ ಸೂರ್ಯಸ್ತ ಆದಮೇಲೆ ಹಚ್ಚಬೇಕು ಎಂದು ಶಾಸ್ತ್ರ ಹೇಳುತ್ತದೆ ಹಾಗಾದ್ರೆ ಯಾಕೆ ಸೂರ್ಯಸ್ತ ಆದಮೇಲೆ ಹಚ್ಚಬೇಕು ಹಗಲು ಹೊತ್ತಿನಲ್ಲಿ ವಾತಾವರಣದಲ್ಲಿನ ದುಷ್ಟ ಶಕ್ತಿಗಳು ಸೂರ್ಯನ ಕಿರಣಗಳಿಂದ ಹೊರ ಬರುವುದಿಲ್ಲ ಸೂರ್ಯ ರಶ್ಮಿಗೆ ವಿಶೇಷ ಶಕ್ತಿ ಇರುವ ಕಾರಣಕ್ಕಾಗಿ ಹಗಲು ಹೊತ್ತಿನಲ್ಲಿ ಎಷ್ಟು ಶಕ್ತಿಗಳು ತಮ್ಮ ಬಲವನ್ನ ತೋರಿಸಲು ಸಾಧ್ಯವಾಗುವುದಿಲ್ಲ.
ಹಾಗಾಗಿ ಹಗಲಲ್ಲಿ ಸೂರ್ಯ ರಕ್ಷಣೆ ಮಾಡುತ್ತಾನೆ ರಾತ್ರಿ ಹೊತ್ತಲ್ಲಿ ಸೂರ್ಯ ರಶ್ಮಿ ಇಲ್ಲದ ಕಾರಣಕ್ಕೆ ದುಷ್ಟ ಶಕ್ತಿಗಳ ಉಪಟಳ ಹೆಚ್ಚಾಗುತ್ತದೆ ಅದಕ್ಕಾಗಿ ತುಳಸಿಗೆ ದೀಪ ಹಚ್ಚುವುದರಿಂದ ತುಳಸಿಯ ದೀಪದ ದೈವಿಕ ಕಿರಣಗಳು ಬೆಳಗುತ್ತಿರುತ್ತದೆ ಬೆಳಗುವ ಕಿರಣಗಳಿಂದ ಹೊರಹೊಮ್ಮುವ ದೈಹಿಕ ಚೈತನ್ಯಗಳು ದುಷ್ಟ ಶಕ್ತಿಗಳಿಂದ ನಮ್ಮನ್ನು ಸಂರಕ್ಷಣೆ ಮಾಡುತ್ತದೆ. ಹಾಗೆ ತುಳಸಿ ಬೃಂದಾವನ ಇರುವ ಪರಿಸರದಲ್ಲಿ ಶ್ರೀಹರಿಯ ವಾಸಸ್ಥಾನ ಇರುವುದರಿಂದ ದೇವತಾ ಶಕ್ತಿಗಳು ಸಂಚಲನವಾಗುತ್ತಿರುತ್ತದೆ.
ಇದಕ್ಕಾಗಿ ಹಗಲಲ್ಲಿ ತುಳಸಿಗೆ ದೀಪ ಹಚ್ಚಬಾರದು ಸಂಜೆ ಸಮಯದಲ್ಲಿ ಹಚ್ಚಬೇಕು ಎಂದು ಶಾಸ್ತ್ರದಲ್ಲಿ ಹೇಳುವುದು.
ಬೆಳಗಿನ ಸಮಯದಲ್ಲಿ ತುಳಸಿಗೆ ದೂಪವನ್ನ ಹಾಕಬೇಕು ಆ ದೂಪವು ದೈವಿಕ ಶಕ್ತಿಗಳನ್ನು ಕೂಡ ಜಾಗೃತಿ ಮಾಡುತ್ತದೆ ಹಾಗೆ ತುಳಸಿ ಗಿಡವನ್ನ ನಾಶ ಮಾಡುವ ಕ್ರಿಮಿಕೀಟಗಳಿಂದ ತುಳಸಿ ಗಿಡವನ್ನು ರಕ್ಷಣೆ ಮಾಡುತ್ತದೆ.
ತುಳಸಿಗೆ ನಿತ್ಯ ಸಂಜೆ ದೀಪ ಹಚ್ಚುವುದರಿಂದ ಆ ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸಿರುತ್ತದೆ ಹಾಗೂ ಸಾಕ್ಷಾತ್ ಲಕ್ಷ್ಮೀದೇವಿ ನೆಲೆಸಿರುತ್ತಾಳೆ ಎಂದು ಹೇಳಲಾಗುತ್ತದೆ.
ತುಳಸಿಗೆ ದೀಪವನ್ನು ಹಚ್ಚುವಾಗ ಶ್ಲೋಕ ಹಾಗೂ ಸೂತ್ರವನ್ನು ಹೇಳಿ ಹಚ್ಚಬೇಕು ಇನ್ನು ಹೆಚ್ಚಿನ ದೈವಿಕ ಲಾಭಗಳು ಸಿಗುತ್ತದೆ
ದೀಪಜ್ಯೋತಿಃ ಪರಬ್ರಹ್ಮಃ ದೀಪಜ್ಯೋತಿಃ ಜನಾರ್ಧನಃ ದೀಪೋಹರ್ತಿಮೇ ಪಾಪಂ ಸಂಧ್ಯಾದೀಪಂ ನಮೋಸ್ತುತೇ
ಶುಭಂ ಕರೋತು ಕಲ್ಯಾಣಮಾರೋಗ್ಯಂ ಸುಖಂ ಸಂಪದಾಂ ಶತ್ರುವೃದ್ಧಿ ವಿನಾಶಂ ದೀಪಜ್ಯೋತಿಃ ನಮೋಸ್ತುತೇ.
ಎಂಬ ಮಂತ್ರವನ್ನು ದೀಪ ಹಚ್ಚುವಾಗಿ ಪಠಿಸಿದರೆ ಒಳ್ಳೆಯದು.