
ಹೆಚ್ಚಿನ ಹಿಂದೂ ಸ್ತ್ರೀಯರು ಮತ್ತು ಪುರುಷರು ಹಣೆಗೆ ಕುಂಕುಮ ಅಥವಾ ಗಂಧವನ್ನು ಹಚ್ಚುತ್ತಾರೆ…!
ಅದರ ಪದ್ಧತಿಯು ಆಯಾ ಪ್ರದೇಶಕ್ಕನುಸಾರ ಅಥವಾ ಸಂಪ್ರದಾಯ ಕ್ಕನುಸಾರ ಬೇರೆ ಬೇರೆಯಾಗಿರುತ್ತದೆ…!!
ಕುಂಕುಮ ಮತ್ತು ಗಂಧವನ್ನು ಹಚ್ಚುವ ಪದ್ಧತಿ
ಕುಂಕುಮವನ್ನು ಹಚ್ಚುವ ಎರಡು ಪ್ರಮುಖ ಪದ್ಧತಿಗಳು ಈ ಕೆಳಗಿನಂತಿವೆ…!
1) ಗೋಲಾಕಾರದಲ್ಲಿ ಕುಂಕುಮವನ್ನು ಹಚ್ಚುವುದು
ಇದರಿಂದ ಸ್ತ್ರೀಯರಲ್ಲಿ ದುರ್ಗಾದೇವಿಯ ತತ್ತ್ವವು ಅಧಿಕ ಪ್ರಮಾಣದಲ್ಲಿ ಕಾರ್ಯನಿರತವಾಗುತ್ತದೆ ಮತ್ತು ಅವಳ ಶಕ್ತಿಯು ಬಹಳಷ್ಟು ಪ್ರಮಾಣದಲ್ಲಿ ವಾತಾವರಣದಲ್ಲಿ ಪ್ರಕ್ಷೇಪಿತವಾಗುತ್ತದೆ…!
ಇಂತಹ ಸ್ತ್ರೀಯರಿಗೆ ಧರ್ಮಾಚರಣೆ ಮತ್ತು ಸಾಧನೆಯನ್ನು ಮಾಡಲು ದುರ್ಗಾದೇವಿಯ ಸಗುಣ ಶಕ್ತಿ ಮತ್ತು ಚೈತನ್ಯವು ಅಧಿಕ ಪ್ರಮಾಣದಲ್ಲಿ ಸಿಗುತ್ತದೆ…!!
2) ಜ್ಯೋತಿಯಂತೆ ಕುಂಕುಮದ ಉದ್ದ ತಿಲಕವನ್ನು ಹಚ್ಚುವುದು
ಇದರಿಂದ ಪುರುಷರಲ್ಲಿ ಶಿವಜ್ಯೋತಿಸ್ವರೂಪ ಶಕ್ತಿ ಮತ್ತು ಚೈತನ್ಯ ಅಧಿಕ ಪ್ರಮಾಣದಲ್ಲಿ ಕಾರ್ಯನಿರತವಾಗಿ, ಅವರಿಗೆ ಧರ್ಮಾಚರಣೆ ಮತ್ತು ಸಾಧನೆಯನ್ನು ಮಾಡಲು ಶಿವನ ನಿರ್ಗುಣ ಶಕ್ತಿ ಮತ್ತು ಚೈತನ್ಯ ಅಧಿಕ ಅಧಿಕ ಪ್ರಮಾಣದಲ್ಲಿ ಸಿಗುತ್ತದೆ…!
ಗಂಧವನ್ನು ಹಚ್ಚುವ ಪದ್ಧತಿ
ಗಂಧವನ್ನು ಹಚ್ಚುವ ಎರಡು ಪ್ರಮುಖ ಪದ್ಧತಿಗಳು ಈ ಕೆಳಗಿನಂತಿವೆ…!
1) ಗೋಲಾಕಾರದಲ್ಲಿ ಗಂಧವನ್ನು ಹಚ್ಚುವುದು
ಇದರಿಂದ ಜ್ಞಾನಶಕ್ತಿಗೆ ಸಂಬಂಧಿತ ಶಕ್ತಿ ಕಾರ್ಯನಿರತವಾಗುತ್ತದೆ…!
2) ಆಂಗ್ಲ ಅಕ್ಷರ U ಆಕಾರದಂತೆ (U ನ, ಎರಡೂ ಬದಿಗಳು ಒಂದೇ ರೀತಿಯಲ್ಲಿ ದಪ್ಪವಾಗಿರುವ) ಲಂಬಾಕಾರದ (ಉದ್ದ) ಗಂಧವನ್ನು ಹಚ್ಚುವುದು
ಇದರಿಂದ ಗಂಧದಲ್ಲಿ ವಿಷ್ಣುತತ್ತ್ವ ಅಧಿಕ ಪ್ರಮಾಣದಲ್ಲಿ ಸೆಳೆಯಲ್ಪಟ್ಟು ಕಾರ್ಯನಿರತವಾಗುತ್ತದೆ…!
ಇದರಿಂದ ಪೂಜಕನಲ್ಲಿ ಶೀಘ್ರಗತಿಯಲ್ಲಿ ಶ್ರೀವಿಷ್ಣುವಿನ ಬಗ್ಗೆ ಭಕ್ತಿಭಾವ ಜಾಗೃತವಾಗುತ್ತದೆ…!!
ಧಾರ್ಮಿಕ ಕಾರ್ಯಗಳ ಸಮಯದಲ್ಲಿ ಅರಿಶಿಣ ಅಥವಾ ಕುಂಕುಮವನ್ನು ಹೆಚ್ಚು ಪ್ರಮಾಣದಲ್ಲಿ ಉಪಯೋಗಿಸಬೇಕು…!
ವೈಯಕ್ತಿಕ ಸ್ತರದಲ್ಲಿ ದೇವತೆಗಳ ಉಪಾಸನೆಯನ್ನು ಮಾಡುವಾಗ ಅಷ್ಟಗಂಧ, ಚಂದನ, ಗೋಪಿಚಂದನ, ರಕ್ತಚಂದನ ಇತ್ಯಾದಿಗಳನ್ನು ಉಪಯೋಗಿಸಬೇಕು…!!
ಅಂತ್ಯಕ್ರಿಯೆ ಅಥವಾ ಶ್ರಾದ್ಧಾದಿ ಕರ್ಮ ಗಳನ್ನು ಮಾಡುವಾಗ ಭಸ್ಮವನ್ನು ಉಪಯೋಗಿಸಬೇಕು…!
ಹೀಗೆ ಮಾಡುವುದರಿಂದ ಸಂಬಂಧಿತ ಧಾರ್ಮಿಕ ಕಾರ್ಯಗಳನ್ನು ಮಾಡಲು ಆವಶ್ಯಕವಿರುವ ದೇವತೆಗಳ ತತ್ತ್ವ ಮತ್ತು ಶಕ್ತಿಯು ಉಪಾಸಕನಿಗೆ ದೊರಕಿ ಅವರಿಂದ ಪ್ರತಿಯೊಂದು ಧಾರ್ಮಿಕ ಕರ್ಮವು ಚಾಚೂತಪ್ಪದೇ ಮತ್ತು ಪರಿಪೂರ್ಣವಾಗಲು ಸಹಾಯವಾಗುತ್ತದೆ…!
ಯಾವ ಬೆರಳಿನಿಂದ ಕುಂಕುಮ ಹಚ್ಚಬೇಕು ಮತ್ತು ಅದರ ಹಿಂದಿನ ಶಾಸ್ತ್ರವೇನು…?
ಕುಂಕುಮವನ್ನು ಹಚ್ಚಿಕೊಳ್ಳುವುದರ ಮಹತ್ವ ಮತ್ತು ಲಾಭಗಳು
1) ಕುಂಕುಮವನ್ನು ಹಚ್ಚಿಕೊಳ್ಳುವಾಗ ಭ್ರೂಮಧ್ಯ ಮತ್ತು ಆಜ್ಞಾಚಕ್ರದ ಮೇಲೆ ಒತ್ತಡವನ್ನು ಹಾಕಲಾಗುತ್ತದೆ, ಇದರಿಂದ ಅಲ್ಲಿನ ಬಿಂದುಗಳ ಮೇಲೆ ಒತ್ತಡವು ಬಂದು (ಬಿಂದು ಒತ್ತಡ ಪದ್ಧತಿಯಿಂದ) ಮುಖದ ಮೇಲಿನ ಸ್ನಾಯುಗಳಿಗೆ ರಕ್ತದ ಪೂರೈಕೆಯು ಒಳ್ಳೆಯ ರೀತಿಯಿಂದ ಆಗುತ್ತದೆ…!
2) ಹಣೆಯ ಮೇಲಿನ ಸ್ನಾಯುಗಳ ಒತ್ತಡವು ಕಡಿಮೆಯಾಗಿ ಮುಖವು ಪ್ರಕಾಶಮಾನವಾಗಿ ಕಾಣಿಸುತ್ತದೆ…!!
3) ಕೆಟ್ಟ ಶಕ್ತಿಗಳಿಗೆ ಆಜ್ಞಾಚಕ್ರದಿಂದ ಶರೀರದಲ್ಲಿ ಸೇರಿಕೊಳ್ಳಲು ಕುಂಕುಮದಿಂದ ಅಡಚಣೆಯುಂಟಾಗುತ್ತದೆ…!
ಪುರುಷರು ತಮ್ಮ ಮತ್ತು ಇತರರ ಭ್ರೂಮಧ್ಯದಲ್ಲಿ ಮಧ್ಯದ ಬೆರಳಿನಿಂದ ಕುಂಕುಮದ ಉದ್ದ ತಿಲಕವನ್ನು ಹಚ್ಚಬೇಕು…!
ಸ್ತ್ರೀಯರು ತಮಗೆ ಅನಾಮಿಕಾದಿಂದ (ಕಿರುಬೆರಳಿನ ಪಕ್ಕದ ಬೆರಳು) ಮತ್ತು ಇತರ ಸ್ತ್ರೀಯರ ಭ್ರೂಮಧ್ಯದಲ್ಲಿ ಮಧ್ಯದ ಬೆರಳಿನಿಂದ ಗೋಲಾಕಾರದ ಕುಂಕುಮವನ್ನು ಹಚ್ಚಬೇಕು…!!
ಪುರುಷರಿರಲಿ ಅಥವಾ ಸ್ತ್ರೀಯರಿರಲಿ ಅವರು ಇತರರಿಗೆ ಕುಂಕಮವನ್ನು ಹಚ್ಚುವಾಗ ಮಧ್ಯಮಾವನ್ನು (ಮಧ್ಯದ ಬೆರಳು) ಉಪಯೋಗಿಸಬೇಕು, ಏಕೆಂದರೆ ಇತರರನ್ನು ಸ್ಪರ್ಶಿಸುವಾಗ ಬೆರಳಿನ ಮೂಲಕ ಅವರಲ್ಲಿರುವ ಕೆಟ್ಟ ಶಕ್ತಿಗಳು ನಮ್ಮ ದೇಹದಲ್ಲಿ ಸೇರಿಕೊಳ್ಳುವ ಸಾಧ್ಯತೆಯಿರುತ್ತದೆ…!
ಆದುದರಿಂದ ತೇಜದ ಬಲವಿರುವ ಮಧ್ಯಮಾವನ್ನು ಉಪಯೋಗಿಸಿ ತಮ್ಮ ದೇಹದ ರಕ್ಷಣೆಯನ್ನು ಮಾಡಿಕೊಳ್ಳಬೇಕು…!!