
ಮಂಗಳೂರು : ಸನಾತನ ಹಿಂದೂ ಧರ್ಮದಲ್ಲಿ ಸೂರ್ಯ ದೇವರಿಗೆ ಮಹತ್ವದ ಸ್ಥಾನವಿದೆ ಜ್ಯೋತಿಷ್ಯ ಶಸ್ತ್ರ ವಾಸ್ತುಶಾಸ್ತ್ರ ಹಾಗೂ ವೇದಗಳಲ್ಲಿಯೂ ಸೂರ್ಯನ ಮಹತ್ವವನ್ನು ತಿಳಿಸಲಾಗಿದೆ.
ಸೂರ್ಯದೇವನ ದೇಗುಲ ಬಹಳ ವಿರಾಳ ಹಾಗೆ ದೇವಸ್ಥಾನಗಳ ಬೀಡು ತುಳುನಾಡು ಎನ್ನುವಂತೆ ದಕ್ಷಿಣ ಕನ್ನಡ ಉಡುಪಿ ಎಂದು ಆ ಕ್ಷಣ ನೆನಪಾಗುವುದು ದೇವಸ್ಥಾನಗಳು, ತುಳುನಾಡಿನಲ್ಲಿಯೇ ಇರುವಂತದ್ದು ಶ್ರೀ ಸೂರ್ಯನಾರಾಯಣ ದೇವಸ್ಥಾನ ಮರೋಳಿ
ಸೂರ್ಯನಾರಾಯಣ ದೇವಸ್ಥಾನ. ಅತ್ಯಂತ ಪುರಾತನವಾದ ಈ ದೇಗುಲ ಇರುವುದು ಮಂಗಳೂರಿನ ಮರೋಳಿಯಲ್ಲಿ ದಕ್ಷಿಣ ಭಾರತದಲ್ಲೇ ಅತ್ಯಂತ ವಿರಳ ಎನಿಸಿರುವ ಈ ದೇವಸ್ಥಾನ ಅತ್ಯಂತ ಕಾರಣಿಕ ಕ್ಷೇತ್ರಗಳಲ್ಲಿ ಒಂದಾಗಿದೆ.
ಈ ದೇವಸ್ಥಾನವು ಸುಮಾರು 1,200 ವರ್ಷಗಳ ಹಿಂದೆ
ಸಂಸ್ಕ್ರತದಲ್ಲಿ “ಮರಾಲಿ” ಎಂದರೆ ಸಾತ್ವಿಕ-ಸುಂದರ ಎಂದು ಅರ್ಥ ಮಹಾ ತಪಸ್ವಿ ಋುಷಿಯೊಬ್ಬರಿಗೆ ಗೋಲಾಕೃತಿಯೊಂದು ಪ್ರಕಾಶ ರೂಪದಲ್ಲಿ ಕಾಣಿಸಿ, ಶ್ರೀ ಸೂರ್ಯನಾರಾಯಣ ದೇವರ ಆವಿರ್ಭಾವ ಆಯಿತು ಎಂಬುದು ಪ್ರತೀತಿ. ನಾಥ ಪಂಥದವರು ಇಲ್ಲಿ ಶ್ರೀ ಸೂರ್ಯ ದೇವರನ್ನು ಪ್ರತಿಷ್ಠಾಪಿಸಿದರು ಎಂದು ಹೇಳಲಾಗುತ್ತಿದೆ. 450-500 ವರ್ಷಗಳ ಹಿಂದೆ ಬಜಾಲು ಜೈನ ಪಾಳೆಗಾರ್ತಿಯು ಈ ದೇವಸ್ಥಾನವನ್ನು ಮರು ನಿರ್ಮಾಣ ಮಾಡಿದಳು ಎಂಬುದು ಕ್ಷೇತ್ರದ ಇತಿಹಾಸದಿಂದ ತಿಳಿದುಬರುತ್ತದೆ.
2016ರಲ್ಲಿ ಸೂರ್ಯ ನಾರಾಯಣ ದೇವಸ್ಥಾನದ ಜೀರ್ಣೊದ್ದಾರ ಕಾಮಗಾರಿ ನಡೆಸಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ನಡೆಸಲಾಗಿದೆ. ಜೀರ್ಣೊದ್ದಾರ ಸಂದರ್ಭ ಅದ್ಬುತವಾಗಿ ದೇವಸ್ಥಾನವನ್ನು ಮರು ನಿರ್ಮಾಣ ಮಾಡಲಾಗಿದೆ. ವಿಶೇಷ ಎಂದರೆ ನೈಸರ್ಗಿಕವಾಗಿ ದೊರಕುವ ವಸ್ತುಗಳಿಂದಷ್ಟೇ ದೇವಳದ ಮರು ನಿರ್ಮಾಣ ಮಾಡಲಾಗಿದೆ. ಗರ್ಭಗುಡಿಯ ಸುತ್ತಲೂ ಹದಿನಾರು ಕಂಬಗಳಲ್ಲಿ ಅರುವತ್ತು ಸಂವತ್ಸರಗಳನ್ನು ಗುರುತಿಸಲಾಗಿದೆ. ಗಣಪತಿ ಗುಡಿಯ ಎದುರಿನ ಕಂಬದಲ್ಲಿ ಗಣಪತಿಯ ನಾಲ್ಕು ರೂಪಗಳನ್ನು ಕೆತ್ತಲಾಗಿದೆ. ತೀರ್ಥ ಮಂಟಪದ ನಾಲ್ಕು ಕಂಬದಲ್ಲಿ ನಾಲ್ಕು ವೇದಗಳು, ಧರ್ಮಾದಿ ಚತುಷ್ಟಯಗಳು, ನಾಲ್ಕು ವೇದಾಂಗಗಳು, ನಾಲ್ಕು ಶಾಸ್ತ್ರಗಳನ್ನು ಕೆತ್ತಲಾಗಿದೆ.ಅಗ್ರಸಭಾದ ಶಿಲಾಕಂಬಗಳಲ್ಲಿ 12 ರಾಶಿಗಳು, ಆಯಾ ರಾಶಿಗಳ ಅಧಿಪತಿಗಳು, ಪ್ರತ್ಯಧಿದೇವತೆ ಸಹಿತ ಗ್ರಹದೇವತೆಗಳನ್ನು ಕೆತ್ತಲಾಗಿದೆ.
600 ವರ್ಷ ಬಾಳ್ವಿಕೆಯ ದೃಷ್ಟಿಯನ್ನಿಟ್ಟುಕೊಂಡು ಈ ಎಲ್ಲಾ ಅದ್ಬುತ ರಚನೆಗಳಾಗಿವೆ. ಈ ಸುಂದರ ಕೆತ್ತನೆ ಭಕ್ತರ ಮನಸ್ಸನ್ನು ಗೆದ್ದಿದೆ.
ಶ್ರೀಕ್ಷೇತ್ರದಲ್ಲಿ ಪರಬ್ರಹ್ಮನ ಸ್ವರೂಪಗಳಾದ ಶಿವ, ಪರಾಶಕ್ತಿ, ಮಹಾವಿಷ್ಣು ಹಾಗೂ ಚತುರ್ಮುಖ ದೇವರು, ಶ್ರೀ ಸೂರ್ಯನಾರಾಯಣ, ಮಹಾಗಣಪತಿ ಹಾಗೂ ನಾಗಬ್ರಹ್ಮನ ಸಾನ್ನಿಧ್ಯವಿದೆ.
.ಒಟ್ಟಿನಲ್ಲಿಮರೋಳಿ ಸೂರ್ಯ ನಾರಾಯಣ ದೇವಸ್ಥಾನ ಕಾರಣಿಕ ಸ್ಥಳವಾಗಿ ಬೆಳಗುತ್ತಿದ್ದು, ಜೀವನದಲ್ಲಿ ಒಮ್ಮೆಯಾದರೂ ಈ ಮರೋಳಿಯ ಸೂರ್ಯ ನಾರಾಯಣ ದೇವರ ದರುಷನ ಮಾಡಲೇಬೇಕು.
ಕ್ಷೇತ್ರದಲ್ಲಿ ಪ್ರಧಾನ ದೇವರಾದ ಶ್ರೀ ಸೂರ್ಯನಾರಾಯಣ ದೇವರಿಗೆ ತ್ರಿಕಾಲ ಪೂಜೆ ನಡೆಯುತ್ತದೆ. ಪ್ರತಿ ವರ್ಷ ರಥಸಪ್ತಮಿಯಂದು ಸೂರ್ಯ ನಡು ನೆತ್ತಿಗೆ ಬಂದಾಗ ದೇವರಿಗೆ ಪೂಜೆ ನಡೆದು, ಬಳಿಕ ಬಲಿ ಉತ್ಸವ, ನಂತರ ರಥಾರೂಢರಾಗಿ ರಥೋತ್ಸವ ಜರುಗುತ್ತದೆ.
ಸಂಜೆ ಮತ್ತೆ ರಥೋತ್ಸವ, ಅದೇ ದಿನ ರಾತ್ರಿ ದೊಡ್ಡ ರಂಗಪೂಜಾದಿ ಸೇವೆಗಳು ನಡೆಯುತ್ತವೆ. ಮರುದಿನ ಪ್ರಾತಃಕಾಲ ಅರುಣೋದಯಕ್ಕೆ ಪುನಃ ರಥಾರೋಹಣವಾಗಿ ರಥ ಎಳೆಯುವ ಪದ್ಧತಿ ಅನಾದಿಯಿಂದ ನಡೆದುಕೊಂಡು ಬಂದಿದೆ.
ಹರಿ, ಹರ, ಬ್ರಹ್ಮ ಹಾಗೂ ಶಕ್ತಿ ಸಾನ್ನಿಧ್ಯವನ್ನು ಹೊಂದಿರುವ ಶ್ರೀ ಸೂರ್ಯನಾರಾಯಣ ಸ್ವಾಮಿ ದೇವಾಲಯವು ಪವಿತ್ರ ಕ್ಷೇತ್ರವಾಗಿದ್ದು ಈ ದೇವಾಲಯದ ಶಕ್ತಿಯನ್ನು ನಂಬಿ ಬಂದ ಭಕ್ತರಿಗೆ ಈ ಕ್ಷೇತ್ರದ ದೇವರು ಉನ್ನತಿಯನ್ನು ದಯಪಾಲಿಸಿದ ಸಾಕಷ್ಟು ಉದಾಹರಣೆಗಳು ಇವೆ.