
ಜೈಪುರ – 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷಿತ ಮಟ್ಟದಲ್ಲಿ ಗೆಲುವು ಸಾಧಿಸಲು ಸಾಧ್ಯವಾಗದೆ ತನ್ನ ಮಿತ್ರ ಪಕ್ಷಗಳ ಜೊತೆಗೂಡಿ ಸರಕಾರ ರಚಿಸಿದೆ, ಆದರೆ ಬಿಜೆಪಿ ತನ್ನ ಗುರಿ ತಲುಪುವಲ್ಲಿ ಎಲ್ಲಿ ವಿಫಲವಾಯಿತು ಎಂದು ದೊಡ್ಡ ಮಟ್ಟದಲ್ಲಿ ದೇಶ ವ್ಯಾಪ್ತಿ ಚರ್ಚೆ ನಡೆಯುತ್ತಿದೆ, ಉತ್ತರ ಪ್ರದೇಶ ದಂತ ರಾಜ್ಯದಲ್ಲಿ ಬಿಜೆಪಿ ಬಲಿಷ್ಠ ವಾಗಿದ್ದರೂ ಈ ಬಾರಿ ಸೋಲಿಗೆ ಕಾರಣವೇನು ಅನ್ನೋದು ಬಿಜೆಪಿ ನಾಯಕರ ನಿದ್ದೆಗೆಡಿಸಿದೆ.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ನಿರೀಕ್ಷಿತ ಮಟ್ಟದ ಸ್ಥಾನಗಳಲ್ಲಿ ಗೆಲುವು ಸಿಗದಿರಲು ಮತ್ತು ಹಲವು ಸೀಟುಗಳಲ್ಲಿ ಸೋಲು ಕಾಣಲು ವಿದೇಶಿ ಶಕ್ತಿಗಳ ಹಸ್ತಕ್ಷೇಪವೇ ಪ್ರಮುಖ ಕಾರಣ ಆಗಿರಬಹುದು ಎಂದು ಕೇಂದ್ರ ಕ್ರಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ…!
ರಾಜಸ್ಥಾನ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷಗಳ ಪರವಾಗಿ ವಿದೇಶಿ ಶಕ್ತಿಗಳು ಸಕ್ರಿಯವಾಗಿದ್ದವು, ಹೇಗಾದರೂ ಮಾಡಿ ಬಿಜೆಪಿಯನ್ನು ಸೋಲಿಸಲು ಹವಣಿಸುತ್ತಿದ್ದವು, ಎಂದು ಹೇಳಿದ್ದಾರೆ…!
ಸಚಿವರ ಮಾತಿಗೆ ಬೆಂಬಲ ಸೂಚಿಸಿದ ರಾಜಸ್ಥಾನದ ಬಿಜೆಪಿ ಚುನಾವಣಾ ಉಸ್ತುವಾರಿ ವಿನಯ್ ಸಹಸ್ರಬುದ್ಧೆ ಅವರು, 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೀಟುಗಳು ಸಂಖ್ಯೆ ಕಡಿಮೆ ಆಗಲು ಸಚಿವ ಶಿವರಾಜ್ ಅವರು ಶಂಕಿಸಿರುವಂತೆ ವಿದೇಶಿ ಶಕ್ತಿಗಳ ಹಸ್ತಕ್ಷೇಪವೇ ನೈಜ ಕಾರಣವಾಗಿದೆ, ಎಂದು ಹೇಳಿದರು…!
ರಾಜಸ್ಥಾನ ಮುಖ್ಯಮಂತ್ರಿ ಭಜನ್ಲಾಲ್ ಶರ್ಮಾ ಹಾಗೂ ಮಾಜಿ ಸಿಎಂ ವಸುಂಧರಾ ರಾಜೇ ಕಾರ್ಯಕಾರಿಣಿ ಸಭೆಯಲ್ಲಿ ಭಾಗಿಯಾಗಿದ್ದರು…!