
ಲಕ್ನೋ – ಉತ್ತರ ಪ್ರದೇಶದಲ್ಲಿ ಬಿಜೆಪಿ ಸ್ಥಿತಿ ಬಹಳ ದುರ್ಬಲವಾಗಿದೆ…!
ಹೈಕಮಾಂಡ್ ರಾಜ್ಯದ ಬಗ್ಗೆ ಕೂಡಲೇ ಗಮಹರಿಸಬೇಕು, ಇಲ್ಲವಾದರೆ 2027ರಲ್ಲಿ ರಾಜ್ಯದಲ್ಲಿ ಪಕ್ಷ ಅಧಿಕಾರ ಹಿಡಿಯುವುದಿಲ್ಲ ಎಂದು ಬಿಜೆಪಿ ಶಾಸಕರೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ…!!
ಸಮಾಜವಾದಿ ಪಕ್ಷವು ರಾಜ್ಯದಲ್ಲಿನ ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರ ಸಮಸ್ಯೆಗಳ ಬಗ್ಗೆ ಈಗಲೇ ಧ್ವನಿ ಎತ್ತಲು ಶುರು ಮಾಡಿದೆ…!
ಇದು ವಿಧಾನಸಭೆ ಚುನಾವಣೆಯಲ್ಲಿ ಪರಿಣಾಮ ಬೀರಲಿದೆ…!!
ಪಕ್ಷವು ಈಗಿನಿಂದಲೇ ಸಂಘಟನೆ ಕುರಿತು ಗಮನ ಹರಿಸಬೇಕು, ಎಂದು ಬದ್ಲಾಪುರ ವಿಧಾನಸಭೆ ಕ್ಷೇತ್ರದ ಶಾಸಕ ರಮೇಶ್ ಚಂದ್ರ ಮಿಶ್ರಾ ಆಗ್ರಹಿಸಿದ್ದಾರೆ…!
ಮಿಶ್ರಾ ಅವರ ಈ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ…!!
ಇತ್ತೀಚಿಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ನಂತರ ಪಕ್ಷದ ಕಾರ್ಯಕರ್ತರಲ್ಲಿ ಆತಂಕ ಹೆಚ್ಚಿರುವುದನ್ನು ಮಿಶ್ರಾ ಹೇಳಿಕೆಯಲ್ಲಿ ಪ್ರತಿಧ್ವನಿಸಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ…!
ಮತ್ತೊಂದೆಡೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ಕಳೆದುಕೊಳ್ಳುವ ಭಯದಿಂದ ರಾಷ್ಟ್ರೀಯ ನಾಯಕರ ಮಧ್ಯಸ್ಥಿಕೆಗೆ ಮಿಶ್ರಾ ಈ ರೀತಿಯ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ…!!
ರಾಷ್ಟ್ರೀಯ ನಾಯಕತ್ವದ ಮಧ್ಯಸ್ಥಿಕೆಗೆ ಕರೆ ನೀಡಲು ಮಿಶ್ರಾ ಅವರನ್ನು ತಳ್ಳಿದೆ ಎಂದು ನಂಬಲಾದ ಮತ್ತೊಂದು ಅಂಶವೆಂದರೆ ಮುಂದಿನ ಹಂತದಲ್ಲಿ ಟಿಕೆಟ್ ಕಳೆದುಕೊಳ್ಳುವ ಭಯ, ಮಿಶ್ರಾ ಅವರು 2017 ರಲ್ಲಿ ಬದ್ಲಾಪುರ್ ಕ್ಷೇತ್ರವನ್ನು 2,300 ಮತಗಳ ಅಂತರದಿಂದ ಗೆದ್ದಿದ್ದರು, ಅದು 2022 ರ ವಿಧಾನಸಭಾ ಚುನಾವಣೆಯಲ್ಲಿ 1,300 ಕ್ಕೆ ಇಳಿದಿತ್ತು, 2027ರ ಚುನಾವಣೆಯಲ್ಲಿ ಮಿಶ್ರಾ ಟಿಕೆಟ್ ಪಡೆಯುವ ಸಾಧ್ಯತೆ ತೀರಾ ಕಡಿಮೆ ಇದೆ ಎಂದು ಮೂಲಗಳು ಹೇಳಿವೆ…!