
ಮಂಗಳೂರು – ಬುದ್ಧಿವಂತರ ಜಿಲ್ಲೆ ಎಂದೇ ಖ್ಯಾತಿ ಪಡೆದಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಬ್ ಗಳ ಹಾವಳಿ ಜೋರಾಗಿದೆ…!
ಇತ್ತೀಚಿನ ದಿನಗಳಲ್ಲಿ ಮಾದಕ ನಶೆ ಯುವಜನತೆಯ ದಾರಿ ತಪ್ಪಿಸುತ್ತಿದೆ, ಅವರ ಭವಿಷ್ಯವನ್ನು ಸಹ ಹಾಳು ಮಾಡುತ್ತಿದೆ…!!
ಪೊಲೀಸ್ ಇಲಾಖೆಯು “ಆಂಟಿ ಡ್ರಗ್ ಸ್ಕ್ವಾಡ್” ಎಂಬ ಘಟಕವೊಂದನ್ನು ರಚಿಸಿ ಕಾರ್ಯಾಚರಣೆ ನಡೆಸಿ ಹಲವೆಡೆ ಡ್ರಗ್ಸ್ ಪೆಡ್ಲರ್ ಗಳ ಹೆಡೆಮುರಿ ಕಟ್ಟುವಲ್ಲಿ ಸಫಲವಾದರೂ ಸಹ, ಯಾವುದೇ ಲೈಸೆನ್ಸ್ ಇಲ್ಲದೆ ಕಾರ್ಯಾಚರಣೆ ನಡೆಸುತ್ತಿರುವ ಪಬ್ ಗಳು ಡ್ರಗ್ಸ್ ಎಂಬ ಮಹಾಮಾರಿಯ ಅಕ್ರಮ ಅಡ್ಡೆಯಾಗಿ ಬಿಟ್ಟಿವೆ…!
ನಮ್ಮ ಮಂಗಳೂರಿನ ತುಳುನಾಡಿನ ಸಂಪ್ರದಾಯ ಮತ್ತು ನಮ್ಮ ಸಂಸ್ಕೃತಿಗೆ ಧಕ್ಕೆ ತರುವಂತೆ ಈ ಪಬ್ಗಳು ಇಂದಿನ ದಿನಗಳಲ್ಲಿ ತಲೆಎತ್ತಿ ಕಾರ್ಯಾಚರಿಸುತ್ತಿವೆ…!!
ಮೇಲಿನ ಪೋಸ್ಟರ್ ಒಮ್ಮೆ ನೋಡಿ, ಕುಡಿದು ಕುಪ್ಪಳಿಸಲು ಸುವರ್ಣ ಅವಕಾಶ ನೀಡುವ ಪಬ್… ಹುಡುಗಿಯರೇ ನಿಮಗೆ ಫ್ರೀ ಮದ್ಯ ನೀಡುತ್ತೇವೆ, ಕುಡಿಯಿರಿ ನಶೆಯಲ್ಲಿ ತೇಲಾಡಿ… ಎಂದು ಕೈ ಬೀಸಿ ಕರೆಯುವ ಕರೆಯೋಲೆ, ಎಲ್ಲಿಗೆ ತಲುಪಿದೆ ನಮ್ಮ ಕರಾವಳಿ ನಗರದ ಸ್ಥಿತಿ…?
ಪಬ್ ಗಳು ಮಂಗಳೂರಿನಲ್ಲಿ ಈಗಿನ ದಿನಗಳಲ್ಲಿ ರಾತ್ರಿ 7 ಗಂಟೆಗೆ ಬೆಳಿಗ್ಗೆ 3 ರಿಂದ 4 ಗಂಟೆಯವರೆಗೆ ಜೋರಾಗಿ ಡಿ ಜೆ ಸೌಂಡ್ಸ್ ಇಟ್ಟುಕೊಂಡು ತೆರೆದಿರುತ್ತದೆ…! ಅರೆಬರೆ ಬಟ್ಟೆ ತೊಟ್ಟ ಹುಡುಗಿಯರು ಅರೆ ಬೆತ್ತಲೆಯಾಗಿ ಕುಡಿದ ಮತ್ತಿನಲ್ಲಿ ಡ್ಯಾನ್ಸ್ ಮಾಡುವುದು, ನಶೆಯಲ್ಲಿಯೇ ರಸ್ತೆಗಳಲ್ಲಿ ತೇಲಾಡಿಕೊಂಡು ಹೋಗುವುದು, ರಾತ್ರಿ ಸಂಚರಿಸುವವರಿಗೆ ಮುಜುಗರ ಉಂಟಾಗುತ್ತದೆ…!
ಇದೆಲ್ಲ ಸದ್ಯ ಮಂಗಳೂರು ಬಹುತೇಕ ರಾತ್ರಿ ಹೊತ್ತು ಸರ್ವೇ ಸಾಮಾನ್ಯವಾಗಿದೆ…!!
ಈ ಪಬ್ ಗಳಲ್ಲಿ ಮದ್ಯದ ಜೊತೆಗೆ ಯುವಕ, ಯುವತಿಯರಿಗೆ ಡ್ರಗ್ಸ್, ಗಾಂಜಾ ಹೀಗೆ ವಿವಿಧ ರೀತಿಯ ಅಮಲುಪದಾರ್ಥಗಳು ಇಲ್ಲಿ ಸುಲಭವಾಗಿ ಕೈಗೆ ಸಿಗುತ್ತಿವೆ…!
ಸಂಪಾದಕರ ನಿಲುವು
ವಿದ್ಯಾರ್ಥಿಗಳ ಹಾದಿ ತಪ್ಪಿಸಿ ಅವರ ಭವಿಷ್ಯಕ್ಕೆ ಕೊಳ್ಳಿ ಇಡಲು ಹೊರಟಿರುವ ಇಂತಹ ಪಬ್ ಮಾಲಿಕರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಕಠಿಣವಾದ ಕ್ರಮ ಕೈಗೊಳ್ಳಬೇಕು…!
ವಿದ್ಯಾರ್ಥಿಗಳ ಪೋಷಕರು ಹಾಗೂ ಸಾರ್ವಜನಿಕರು ಕೂಡ ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಇಂತಹ ಅನಾಚಾರದ ವಿರುದ್ಧ ಧ್ವನಿ ಎತ್ತುವುದು ಅವಶ್ಯಕ…!!
ಯುವ ಗ್ರಾಹಕರನ್ನೇ ಟಾರ್ಗೆಟ್ ಮಾಡಿಕೊಂಡು ಹಣ ಮಾಡೋಕೆ ಹೊರಟಿರುವ ಇಂತಹ ಪಬ್ ಮಾಲಕರ ಲೈಸೆನ್ಸ್ ಕ್ಯಾನ್ಸಲ್ ಮಾಡಿ ಅವರನ್ನು ಜೈಲಿನ ಕಂಬಿ ಎಣಿಸುವಂತೆ ಸರ್ಕಾರ ಮಾಡಬೇಕು ಎಂದು ಸಾರ್ವಜನಿಕರಿಗೆ ಅನಿಸುತ್ತದೆ…!