
ಬೆಂಗಳೂರು: ಮೊನ್ನೆ ಶುಕ್ರವಾರ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಜೈಪುರ್ ಮೈಸೂರ್ ಎಕ್ಸ್ಪ್ರೆಸ್ ರೈಲಿನಲ್ಲಿ 4,500 ಕೆಜಿ ಮಾಂಸ ಬಂದಿದ್ದು ಇದರಲ್ಲಿ ನಾಯಿ ಮಾಂಸ ಇದೆ ಎಂದು ಹೇಳಲಾಗಿತ್ತು ನಂತರ ಆರೋಗ್ಯ ಇಲಾಖೆ ಇದರ ಸ್ಯಾಂಪಲ್ ಅನ್ನು ಆರೋಗ್ಯ ಇಲಾಖೆ ಹೈದರಾಬಾದಿಗೆ ಕಳಿಸಿದೆ.
ಕಳಪೆ ಮಾಂಸ ದಂಧೆ ಆರೋಪ ಪ್ರಕರಣದ ತನಿಖೆ ಚುರುಕುಗೊಳಿಸಿ ಕಾಟನ್ ಪೇಟೆ ಪೊಲೀಸರು, ರೈಲ್ವೆ ಅಧಿಕಾರಿಗಳಿಗೆ ಪತ್ರ ಬರೆದು ಮಾಹಿತಿ ಕೇಳಿದ್ದಾರೆ. ರೈಲಿನಲ್ಲಿ ಮಾಂಸ ಎಲ್ಲಿಂದ ಬರ್ತಾ ಇತ್ತು? ಎಷ್ಟು ದಿನಗಳಿಗೊಮ್ಮೆ ಮಾಂಸ ಬರ್ತಾ ಇತ್ತು? ಯಾವ ಟ್ರೈನ್ ನಲ್ಲಿ ಯಾತು ತಗೊಂಡು ಬರ್ತಾ ಇದ್ರು? ಯಾವ ಪ್ಲಾಟ್ ಫಾರಂಗೆ ರೈಲು ಬರ್ತಾ ಇತ್ತು ಹಾಗೂ ಆ ಪ್ಲಾಟ್ ಫಾರಂನ ಸಿಸಿಟಿವಿ ದೃಶ್ಯಗಳನ್ನು ನೀಡುವಂತೆ ಪೊಲೀಸರು ಮಾಹಿತಿ ಕೇಳಿದ್ದಾರೆ.
ಈಗ ಅಬ್ದುಲ್ ರಜಾಕ್ ಅವರಿಂದ ಮಾಂಸ ಖರೀದಿಸುತ್ತಿದ್ದ ಮಾಂಸದಂಗಡಿಗಳು, ಹೋಟೆಲ್ ಹಾಗೂ ರೆಸ್ಟೋರೆಂಟ್ಗಳ ಮಾಲೀಕರಿಗೆ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆ ನೋಟಿಸ್ ಜಾರಿಗೊಳಿಸಿದೆ.
ಮೊದಲ ಹಂತವಾಗಿ ಒಂಬತ್ತು ಜನ ರೆಸ್ಟೋರೆಂಟ್, ಹೋಟೆಲ್ ಮಾಲೀಕರಿಗೆ ನೊಟೀಸ್ ನೀಡಲಾಗಿದೆ ದಾಖಲೆ ಸಮೇತ ವಿಚಾರಣೆಗೆ ಹಾಜರಾಗುವಂತೆ ಮಾಂಸದಂಗಡಿಗಳು, ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರಿಗೆ ನೋಟಿಸ್ ಕಳುಹಿಸಲಾಗಿದೆ.
ಎಷ್ಟು ವರ್ಷಗಳಿಂದ ಮಾಂಸ ಖರೀದಿಸಲಾಗುತ್ತಿತ್ತು? ಯಾರಿಂದ ಹಾಗೂ ಖರೀದಿ ಮಾಡಿದ್ದ ಮಾಂಸದ ಬೆಲೆ ಎಷ್ಟಿತ್ತು? ಎಂಬುದರ ಮಾಹಿತಿ ಕೇಳಲಾಗಿದೆ. ರಾಜಸ್ಥಾನದಿಂದ ಮಾಂಸ ತರಿಸುತ್ತಿದ್ದ ಉದ್ಯಮಿ ಅಬ್ದುಲ್ ರಜಾಕ್ ಅವರಿಗೂ ಪರವಾನಗಿಯ ದಾಖಲೆ ಸಮೇತ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.
ಅಬ್ದುಲ್ ರಜಾಕ್ ತರಿಸಿಕೊಳ್ಳುತ್ತಿರುವ ರಾಜಸ್ಥಾನದಿಂದ ಬರುತ್ತಿರುವ ಮಾಂಸದ ಮೇಲೆ ಅನುಮಾನಕ್ಕೆ ಕಾರಣ ಏನು.?
ಅಬ್ದುಲ್ ರಜಾಕ್ ರಾಜಸ್ಥಾನದಿಂದ ಪಾರ್ಸಲ್ನಲ್ಲಿ ತರಿಸಿಕೊಳ್ಳುತ್ತಿರುವ ಮಾಂಸದ ಮೇಲೆ ಅನುಮಾನ ಹೆಚ್ಚಿದ್ದು, ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಇಲಾಖೆಯಿಂದ ತೀವ್ರ ತನಿಖೆಗೆ ಒಳಪಡಲಿದೆ. ಅಬ್ದುಲ್ ರಜಾಕ್ ತಂಡ ಸಪ್ಲೈ ಮಾಡುತ್ತಿದ್ದ ಹೋಟೆಲ್ಗಳ ಮಾಹಿತಿ ಸಂಗ್ರಹಿಸಲಾಗಿದೆ.
ಬೆಂಗಳೂರಿನಲ್ಲಿ ಮಾತ್ರ ಅಲ್ಲದೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿಯೂ ಕೆ.ಜಿ ಕುರಿ ಮಾಂಸ 700-800 ರೂಪಾಯಿ ಇದೆ. ರಾಜ್ಯದ ಯಾವ ಜಿಲ್ಲೆಗೆ ಹೋದರೂ 700-800 ರೂಪಾಯಿ ಕೆ.ಜಿ. ಇದೆ. ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶದ ಭಾಗದಲ್ಲೂ ಕುರಿ ಮಾಂಸದ ಬೆಲೆ 700 ರೂಪಾಯಿ ಇದೆ.
ಆದರೆ, ಅಬ್ದುಲ್ ರಜಾಕ್ ರಾಜಸ್ಥಾನದಿಂದ ತರಿಸಿದರೂ ಕೂಡ ಆ ಮಾಂಸದ ಬೆಲೆ 500 ರೂ. ಯಾಕೆ?
200 ರೂಪಾಯಿ ಕಮ್ಮಿಗೆ ಕೆ.ಜಿ ಕುರಿ ಮಾಂಸ ಮಾರಾಟ ಮಾಡಲು ಹೇಗೆ ಸಾಧ್ಯ? ಎಂಬ ಒಂದು ಪ್ರಶ್ನೆ ರಾಜ್ಯದ ಜನರಿಗೆ ಕಾಡುತ್ತಿದೆ.
ಬೆಂಗಳೂರಿನ ನೂರಕ್ಕೂ ಅಧಿಕ ಹೋಟೆಲ್ಗಳಿಗೆ ರಜಾಕ್ ಮಾಂಸ ಸಪ್ಲಿ ಮಾಡುತ್ತಿದ್ದರು.
ರಾಜಸ್ಥಾನದಿಂದ ಬೆಂಗಳೂರಿನ ಹೋಟೆಲ್ಗಳಿಗೆ ಮಾಂಸ ತಲುಪಿಸಲು ಅಬ್ಬಬ್ಬಾ ಅಂದರು ಕೂಲಿ ಚಾರ್ಜ್ ಗಾಡಿಯ ಚಾರ್ಜ್ ಪ್ರಾಣಿಯನ್ನು ವಧೆ ಮಾಡಲು ಹಾಗು ಕತ್ತರಿಸಲು ಚಾರ್ಜ್ ಇವೆಲ್ಲ ಸೇರಿದರೆ ಮಾಂಸಕ್ಕೆ ನೂರು ರೂಪಾಯಿ ಹೆಚ್ಚಿಗೆ ರೇಟ್ ನಲ್ಲಿ ಮಾರಾಟ ಮಾಡಬೇಕಾಗುತ್ತದೆ ಆದರೆ 400 ರಿಂದ 500 ರೂಪಾಯಿಗೆ ಇವರು ಅಲ್ಲಿಂದ ಮಾಂಸವನ್ನ ತಂದು ಇಲ್ಲಿ ಮಾರಾಟ ಮಾಡುತ್ತಾರೆ ಅಂದರೆ ಸಹಜವಾಗಿ ಅನುಮಾನ ಹುಟ್ಟುತ್ತದೆ.?
ಅಂದರೆ ರಾಜಸ್ಥಾನದಲ್ಲಿ ಅಬ್ದುಲ್ ರಜಾಕ್ ಅವರಿಗೆ ಕುರಿ ಮಾಂಸ ಕೆ.ಜಿಗೆ 200 ರೂಪಾಯಿಗೆ ಸಿಗುತ್ತಿದೆಯಾ? ಎಂಬ ಅನುಮಾನ ಮೂಡಿದೆ. ಆದರೆ ಎಲ್ಲೂ ಇಷ್ಟು ಕಡಿಮೆ ಬೆಲೆಗೆ ಮಾಂಸ ಸಿಗಲಾರದು. ಹೀಗಾಗಿ ಇದು ಕಳಪೆ ಮಾಂಸ ಅಥವಾ ನಾಯಿ ಮಾಂಸ ಇರಲೂಬಹುದು ಎಂದು ಕೆಲವರು ತರ್ಕಿಸಿದ್ದಾರೆ.
ಅಬ್ದುಲ್ ರಜಾಕ್ ಕೂಡ ಸ್ವತಹ ತಾವೇ ಈ ಮಾಂಸವನ್ನು ತರಿಸಿಕೊಳ್ಳುತ್ತಿರುವುದು ಹಾಗೆ ನಾವೇ ಹೋಟೆಲ್ಗಳಿಗೆ ಸಪ್ಲೈ ಮಾಡುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಮಂಸದಲ್ಲಿ ರಾಸಾಯನಿಕಗಳು ಪತ್ತೆಯಾದರೆ ಕ್ರಮ ಕೈಗೊಳ್ಳುವುದಾಗಿ ಮಾಂಸದಂಗಡಿ ಮಾಲೀಕರಿಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಆಯುಕ್ತ ಶ್ರೀನಿವಾಸ್ ಎಚ್ಚರಿಕೆ ನೀಡಿದ್ದಾರೆ.
ತರಕಾರಿ ಮಾದರಿ ಸಂಗ್ರಹ
ಆಹಾರ ಇಲಾಖೆ ಬೆಂಗಳೂರಿನ 300 ಕಡೆ ತರಕಾರಿ ಮಾದರಿ ಸಂಗ್ರಹಿಸಿ ಪರೀಕ್ಷೆ ನಡೆಸಿದೆ. ಪರೀಕ್ಷೆಯಲ್ಲಿ ತರಕಾರಿ ಫ್ರೆಶ್ ಆಗಿರುವಂತೆ ಕಾಣುವುದಕ್ಕೆ ಕೆಮಿಕಲ್ ಬಳಕೆ ಮಾಡಿರುವುದು ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ತರಕಾರಿ ಅಂಗಡಿಗಳ ಮೇಲೂ ಕ್ರಮಕ್ಕೆ ಇಲಾಖೆ ತಯಾರಿ ನಡೆಸಿದೆ.
ಒಟ್ಟಿನಲ್ಲಿ ಈ ಪ್ರಕರಣ ರಾಜ್ಯದ ಮಾಂಸಪ್ರಿಯರಿಗೆ ಆಘಾತ ಉಂಟು ಮಾಡಿದೆ.