
ಬೆಂಗಳೂರು – ಸಿಎಂ ಸಿದ್ಧರಾಮಯ್ಯ ಅವರೇ ಎಂಥಾ ಅಪಚಾರವಿದು…? ಕಾವೇರಿ ನದಿಗೆ ಬಾಗಿನ ಕಾರ್ಯಕ್ರಮದಲ್ಲಿ ಅಧಿಕಾರಿಗಳಿಗೆ
ಬಾಡೂಟ…!? ಭಾರೀ ನೆರೆ ಹಾಗೂ ಪ್ರವಾಹ ಪರಿಸ್ಥಿತಿಯ ಈ ಸಂದರ್ಭದಲ್ಲಿ ತುತ್ತು ಅನ್ನಕ್ಕೂ ಸಂತ್ರಸ್ತರ ಪರದಾಟ ಮಾಡಬೇಕಾದ ಸಮಯದಲ್ಲಿ ಏನಿದು ಅಂತ ಜೆಡಿಎಸ್ ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸುವ ಮೂಲಕ ಕುಟುಕಿದೆ…!
ಈ ಕುರಿತು ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಜೆಡಿಎಸ್ ಘಟಕ ರಾಜ್ಯದಲ್ಲಿ ನೆರೆ ಹಾಗೂ ಪ್ರವಾಹದಿಂದ ಹಲವು ಜಿಲ್ಲೆಗಳಲ್ಲಿ ಜನರು ಒಂದು ತುತ್ತು ಅನ್ನಕ್ಕೂ ಪರದಾಡುತಿದ್ದರೆ, ಇತ್ತ ಮಜಾವಾದಿ ಸಿಎಂ ಸಿದ್ಧರಾಮಯ್ಯನವರು ಹಾಗೂ
ಅವರ ಅಧಿಕಾರಿಗಳು ಭರ್ಜರಿ ಬಾಡೂಟ ತಿಂದು ಪಾರ್ಟಿ ಮಾಡಿದ್ದಾರೆ ಎಂದು ಆಕ್ರೋಶ ಹೊರಹಾಕಿದೆ…!!
ಮಂಡ್ಯದಲ್ಲಿ ಕಾವೇರಿ ನದಿಗೆ ಬಾಗಿನ ಅರ್ಪಿಸಿದ ಬಳಿಕ ಬಾಡೂಟ ಆಯೋಜಿಸಿ ಸಂಪ್ರದಾಯಕ್ಕೆ ಎಳ್ಳುನೀರು ಬಿಟ್ಟು, ಅಪಚಾರ ಎಸಗಿ ಕಾಂಗ್ರೆಸ್ ಸರ್ಕಾರ ಜನರ ಆಕ್ರೋಶಕ್ಕೆ ಕಾರಣವಾಗಿದೆ…!
ಜನಸಾಮಾನ್ಯರ ಭಾವನೆಗಳಿಗೆ ಬೆಲೆ ಕೊಡದ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಮುಂದಿನ ದಿನಗಳಲ್ಲಿ ರಾಜ್ಯದ ಜನತೆ ತಕ್ಕ ಪಾಠ ಕಲಿಸುವುದು ಗ್ಯಾರಂಟಿ ಎಂದು ಜೆಡಿಎಸ್ ಕಿಡಿಕಾರಿದೆ…!!