
ವಯನಾಡ್ (ಕೇರಳ) – ಕೇರಳದ ವಯನಾಡ್ ನಲ್ಲಿ ಸಂಭವಿಸಿರುವ ಭೂಕುಸಿತ ಇದುವರೆಗೂ 250 ಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿದೆ…!
ಇನ್ನೂ ಹಲವು ಮಂದಿ ನಾಪತ್ತೆ ಯಾಗಿದ್ದು ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ…!!
ಭೂಕುಸಿತದ ಭೂಮಿಯಲ್ಲಿ ಬದುಕಿ ಬಂದವರು ತಮ್ಮವರನ್ನು ಕಳೆದುಕೊಂಡು ಕಣ್ಣೀರಿಡುತಿದ್ದಾರೆ…!
ಭೂಕುಸಿತದ ದುರಂತದಲ್ಲೂ ಅಚ್ಚರಿ ಎಂಬಂತೆ ಒಂದು ಪವಾಡವೇ ನಡೆದಿದೆ…!!
ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸು ಕರ್ನಾಟಕ ಮೂಲದ ಒಂದು ಇಡೀ ಕುಟುಂಬವನ್ನೇ ರಕ್ಷಿಸಿದೆ…!
ಕೇರಳದ ವಯನಾಡ್ ನಿಂದ ಕರ್ನಾಟಕಕ್ಕೆ ಬದುಕಿ ಬಂದಿರುವ ಕುಟುಂಬಸ್ಥರು ತಾವು ಬದುಕಿ ಬಂದ ರೋಚಕ ಕಥೆಯನ್ನು ತೆರೆದಿಟ್ಟಿದ್ದಾರೆ…!!
ವಯನಾಡ್ ನ ಚೂರಲ್ಮಲಾ ಗುಡ್ಡದಲ್ಲಿ ಕರ್ನಾಟಕದ ಚಾಮರಾಜನಗರ ಮೂಲದ ವಿನೋದ್ ಎನ್ನುವವರ ಕುಟುಂಬ ವಾಸವಾಗಿತ್ತು…!
ಜುಲೈ 30ರ ಮಧ್ಯರಾತ್ರಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ವಿನೋದ್ ಅವರ ಹಸು ಪದೇ ಪದೇ ಜೋರಾಗಿ ಚೀರಾಡಿದೆ…!!
ಹಸುವಿನ ಜೋರಾದ ಕೂಗಿಗೆ ಮನೆಯೊಳಗಡೆ ಮಲಗಿದ್ದ ವಿನೋದ್ ಅವರು ಮಧ್ಯರಾತ್ರಿ ಎಚ್ಚರಗೊಂಡಿರುತ್ತಾರೆ…!
ಎಚ್ಚೆತ್ತ ವಿನೋದ್, ಕೊಟ್ಟಿಗೆಗೆ ತೆರಳಿ ನೋಡಿದಾಗ ಕೊಟ್ಟಿಗೆ ಒಳಗಡೆ ನೀರು ತುಂಬಿಕೊಂಡಿತ್ತು…!!
ಇದನ್ನು ಕಂಡು ವಿನೋದ್ ಕೂಡಲೇ ಮನೆಯಲ್ಲಿದ್ದವರನ್ನು ಎಬ್ಬಿಸಿ ಗುಡ್ಡದ ಮೇಲಕ್ಕೆ ತೆರಳಿದ್ದಾರೆ…!
ಬಳಿಕ, ನೋಡ, ನೋಡುತ್ತಿದ್ದಂತೆ ತಾವಿದ್ದ ಮನೆ, ವಾಹನ ಎಲ್ಲವೂ ಭೂಮಿಯಡಿ ಹುದುಗಿ ಹೋಗಿದೆ…!!
ಮನೆಯ ಸಮೀಪವೇ ಇದ್ದ ಸೇತುವೆ ಕೂಡ ಎರಡು ಭಾಗವಾಗಿದೆ…!
ಈ ಮಧ್ಯೆ, ಗುಡ್ಡದ ಮೇಲೆ ಆಶ್ರಯವಿನೋದ್ ಹಾಗೂ ಮತ್ತಿತ್ತರನ್ನು ರಕ್ಷಣಾ ಪಡೆ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿತು…!!
ತಾವು ಸಾಕಿದ್ದ ಹಸು ದೇವರಂತೆ ಬಂದು ಕುಟುಂಬಕ್ಕೆ ಅಪಾಯದ ಬಗ್ಗೆ ಎಚ್ಚರಿಸಿ ಇಡೀ ಕುಟುಂಬವನ್ನು ಸಾವಿನ ದವಡೆಯಿಂದ ಪಾರು ಮಾಡಿದೆ…!
ಚೂರಲ್ ಮಲೆಯಲ್ಲಿದ್ದ ಚಾಮರಾಜನಗರದ ವಿನೋದ್, ಜಯಶ್ರೀ, ಸಿದ್ದರಾಜು, ಮಹೇಶ್ ಹಾಗೂ ಗೌರಮ್ಮ ಎಂಬುವರು ದುರಂತದಿಂದ ಪಾರಾಗಿದ್ದು, ಚಾಮರಾಜನಗರಕ್ಕೆ (ಮಾವನ ಮನೆಗೆ) ಸುರಕ್ಷಿತವಾಗಿ ಹಿಂದಿರುಗಿದ್ದಾರೆ…!!