
ರಾಯಚೂರು: ಮಟನ್ ಮಾಂಸದ ಊಟ ಮಾಡಿದ್ದ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ರಾಯಚೂರಿನ ಕಲ್ಲೂರು ಗ್ರಾಮದಲ್ಲಿ ನಡೆದಿದೆ. ವಿಷಾಹಾರ ಸೇವನೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಮೃತಪಟ್ಟವರು ಭೀಮಣ್ಣ( 60), ಈರಮ್ಮ ( 57) ಮಲ್ಲೇಶ (21), ಪಾರ್ವತಿ ( 19) ಮೃತರು. ಮತ್ತೋರ್ವ ಮಗಳು ಮಲ್ಲಮ್ಮ (23) ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.
ಊಟದಲ್ಲಿ ಮಾಂಸಹಾರಿ ಸೇವನೆ ಮಾಡಿದ್ದಾರೆ ಇದರಿಂದ ಫುಡ್ ಪಾಯಿಸನ್ ಆಗಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ. ಮೊನ್ನೆ ಬುಧವಾರ ಚಪಾತಿಯ ಜೊತೆ ಮಟನ್ ಮಾಂಸದ ಊಟ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ ಊಟ ಮುಗಿಸಿಕೊಂಡು ಜಮೀನಿನ ಕೆಲಸಕ್ಕೆ ಹೋದವರು ಜಮೀನಿನಲ್ಲಿ ಕೆಲಸ ಮಾಡುವಾಗ ಹೊಟ್ಟೆ ನೋವು ಕಾಣಿಸಿಕೊಂಡು ನಂತರ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಭೀಮಣ್ಣ ಈರಮ್ಮ , ಮಲ್ಲೇಶ ಹಾಗೂ ಪಾರ್ವತಿ ಮೃತಪಟ್ಟಿದ್ದಾರೆ. ಮಲ್ಲಮ್ಮ ಎಂಬುವವರ ಸ್ಥಿತಿ ಗಂಭೀರವಾಗಿದೆ. ಊಟ ಮಾಡಿ ಅಸ್ವಸ್ಥಗೊಂಡ ಮೂವರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೂವರು ರಿಮ್ಸ್ನಲ್ಲಿ ಕೊನೆಯುಸಿರೆಳೆದರೆ, ಒಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ರಾಯಚೂರು ಜಿಲ್ಲೆಯ ಸಿರವಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಸಿರವಾರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಭೀಮಣ್ಣ, ಈರಮ್ಮ, ಮಲ್ಲೇಶ್ ಹಾಗೂ ಪಾರ್ವತಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ಒಂದೇ ಕುಟುಂಬದ ನಾಲ್ವರ ಸಾವಿಗೆ ಕಾರಣ ಏನೆಂಬುದು ಇದುವರೆಗೆ ಸರಿಯಾಗಿ ತಿಳಿದುಬಂದಿಲ್ಲ ಪೊಲೀಸರ ತನಿಖೆ ನಂತರ ತಿಳಿದು ಬರಬೇಕಿದೆ.
ಕೋಮಾದಲ್ಲಿರುವ ಮಲ್ಲಮ್ಮ ಸ್ಥಿತಿ ಗಂಭೀರವಾಗಿದ್ದು ಅವರನ್ನು ವೆಂಟಿಲೇಟರ್ ನಲ್ಲಿರಿಸಿದ್ದು, ಆದಷ್ಟು ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿಕೊಳ್ಳಲಾಗುತ್ತಿದೆ. ಇನ್ನು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಿದ್ದೇವೆ ಎಂದಿದ್ದಾರೆ
ಜಿಲ್ಲಾಧಿಕಾರಿ ಈ ಪ್ರಕರಣದ ಬಗ್ಗೆ ತಿಳಿಸಿದ್ದಾರೆ.
ಈ ಘಟನೆ ಬಗ್ಗೆ ರಾಯಚೂರು ಜಿಲ್ಲಾಧಿಕಾರಿ ನಿತೀಶ್.ಕೆ. ಅವರು ಪ್ರತಿಕ್ರಿಯಿಸಿದ್ದಾರೆ. “ಪ್ರಾಥಮಿಕವಾಗಿ ಆಹಾರದಲ್ಲಿ ಬಲವಾದ ವಿಷಕಾರಿ ಪದಾರ್ಥ ಇರೋದು ತಿಳಿದು ಬಂದಿದೆ
ಮನೆಯಲ್ಲಿ ಚಪಾತಿ, ಮಟನ್ ಮತ್ತು ತರಕಾರಿ ಊಟ ಮಾಡಿದ್ದರು. ವಿಷಾಆಹಾರ ಸೇವಿಸಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಭೀಮಣ್ಣ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಉಳಿದ 4 ಕುಟುಂಬಸ್ಥರನ್ನು ರಾಯಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಕಾಲೇಜ್ ಗೆ (ರಿಮ್ಸ್) ತರಲಾಗಿದೆ” ಎಂದು ತಿಳಿಸಿದ್ದಾರೆ.