
ಆಗ್ರಾ: ಜಮೀನಿನ ವಿವಾದಕ್ಕೆ ಸಂಬಂಧಿಸಿದಂತೆ ನನ್ನನ್ನು ಕರೆದುಕೊಂಡು ಹೋಗಿ ನನಗೆ ಹೊಡೆದಿದ್ದಾರೆ ನಂತರ ನಾನು ಸತ್ತಿದ್ದೇನೆ ಎಂದು ನನ್ನನ್ನು ಮಣ್ಣಿನ ಅಡಿ ಹೋಳಿದರು ಆದರೆ ಬೀದಿ ನಾಯಿಗಳು ಬಂದು ಮಣ್ಣನ್ನು ಆಗಿದ್ದು ನನ್ನನ್ನು ರಕ್ಷಿಸಿದೆ ಎಂದು ವ್ಯಕ್ತಿ ಒಬ್ಬ ಹೇಳಿಕೊಂಡಿದ್ದಾನೆ.
ನನ್ನನ್ನು ಹೊಡೆದು ಜೀವಂತ ಸಮಾಧಿ ಮಾಡಿದ್ದರು ಬೀದಿ ನಾಯಿಗಳು ತನ್ನನ್ನು ರಕ್ಷಿಸಿವೆ ಎಂದು ಉತ್ತರ ಪ್ರದೇಶದ ಆಗ್ರಾದಲ್ಲಿ 24 ವರ್ಷದ ವ್ಯಕ್ತಿಯೊಬ್ಬರು ಹೇಳಿಕೊಂಡಿದ್ದಾರೆ. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯನ್ನು ನಾಲ್ವರು ಥಳಿಸಿ, ಕತ್ತು ಹಿಸುಕಿ, ಜೀವಂತ ಸಮಾಧಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಜುಲೈ 18 ರಂದು, ಆಗ್ರಾದ ಅರ್ಟೋನಿ ಪ್ರದೇಶದಲ್ಲಿ ಅಂಕಿತ್, ಗೌರವ್, ಕರಣ್ ಮತ್ತು ಆಕಾಶ್ ನಾಲ್ವರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಂತ್ರಸ್ತೆ, ರೂಪ್ ಕಿಶೋರ್ ಹೇಳಿದ್ದಾರೆ. ಆತನ ಮೇಲೆ ಹಲ್ಲೆ ನಡೆಸಿದ ನಂತರ, ಆರೋಪಿಗಳು ಆತನನ್ನು ಕತ್ತು ಹಿಸುಕಿ ಕೊಂದರು ಮತ್ತು ನಂತರ ಕಿಶೋರ್ ಸಾವನ್ನಪ್ಪಿದ್ದಾರೆ ಎಂದು ಭಾವಿಸಿ ತಮ್ಮ ಜಮೀನಿನಲ್ಲಿ ಹೂತು ಹಾಕಿದ್ದಾರೆ ಎಂದು ಸಂತ್ರಸ್ತೆಯ ಎಫ್ಐಆರ್ನಲ್ಲಿ ಹೇಳಲಾಗಿದೆ ಎಂದು ಎನ್ಡಿಟಿವಿ ವರದಿ ಮಾಡಿದೆ.
ಆದರೆ, ಸಮಾಧಿ ಮಾಡಿದರೂ, ರೂಪ್ ಕಿಶೋರ್ ಆಶ್ಚರ್ಯವೆನ್ನುವಂತೆ ಬದುಕಿ ಬಂದಿದ್ದಾರೆ.
ತನ್ನನ್ನು ಸಮಾಧಿ ಮಾಡಿದ ಜಾಗವನ್ನು ಬೀದಿ ನಾಯಿಗಳ ದಂಡು ಅಗೆದಿದೆ ಎಂದು ಕಿಶೋರ್ ಹೇಳಿಕೊಂಡಿದ್ದಾರೆ. ಬೀದಿ ನಾಯಿಗಳು ಮಣ್ಣನು ಹೋಗಿದ್ದು ನಂತರ ಕಿಶೋರ್ ಎನ್ನುವ ವ್ಯಕ್ತಿಯನ್ನು ಕತ್ತಲು ಪ್ರಾರಂಭಿಸಿದವು ಬಹಿರಂಗವಾದ ಅವುಗಳು ಕಚ್ಚಿದ್ದರಿಂದ ಪ್ರಜ್ಞೆಯನ್ನು ಮರಳಿ ಬಂತು ಎಂದು ಕಿಶೋರ್ ಹೇಳಿಕೊಂಡಿದ್ದಾರೆ..
, ಕಿಶೋರ್ ಎಚ್ಚರಗೊಂಡ ನಂತರ ಅಲ್ಲಿಂದ ಎದ್ದು ಸ್ವಲ್ಪ ದೂರ ನಡೆದರೂ. ಅಲ್ಲಿ ಕೆಲ ಸ್ಥಳೀಯರು ಆತನನ್ನು ಗುರುತಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋದರು ಎಂದು ಹೇಳಲಾಗುತ್ತಿದೆ.
ಹಲ್ಲೆಗೊಳಗಾದ ಕಿಶೋರ್ ತಾಯಿಯ ಪ್ರಕಾರ, ಆ ವ್ಯಕ್ತಿಗಳು ಕಿಶೋರ್ ಅವರನ್ನು ಬಲವಂತವಾಗಿ ಮನೆಯಿಂದ ಕರೆದೊಯ್ದು ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರಪಿಸಿದ್ದಾರೆ.
ಕೂಲಂಕುಷವಾಗಿ ತನಿಖೆ ನಡೆಸಲಾಗುತ್ತಿದ್ದು, ಸದ್ಯ ತಲೆಮರೆಸಿಕೊಂಡಿರುವ ನಾಲ್ವರು ಆರೋಪಿಗಳನ್ನು ಹಿಡಿಯಲು ಪೊಲೀಸರು ಬಲೆ ಬೀಸಿದ್ದಾರೆ ಎಂದು ಪೊಲೀಸರು ಎನ್ಡಿಟಿವಿಗೆ ತಿಳಿಸಿದ್ದಾರೆ.
ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಸಿಕಂದರಾ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (ಎಸ್ಎಚ್ಒ) ನೀರಜ್ ಶರ್ಮಾ ಹೇಳಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.