
ಕಳೆದ ಬಾರಿ ಮಳೆ ಇಲ್ಲದೆ ನೀರಿನ ಅಭಾವ ಉಂಟಾಗಿ ಅಂತರ್ಜಲ ಮಟ್ಟವು ಕೂಡ ಇಳಿದು ಹೋಗಿದೆ . ನದಿ ಕೆರೆ ಅಣೆಕಟ್ಟುಗಳು ಎಲ್ಲವೂ ಕೂಡ ಬತ್ತುತಿದೆ . ರಾಜ್ಯ ಹಾಗೂ ದೇಶದ ರೈತರು ಹಾಗೂ ಪ್ರಾಣಿ ಪಕ್ಷಿಗಳು ನೀರಿಲ್ಲದೆ ಪರದಾಡುವ ಪರಿಸ್ಥಿತಿ ಉಂಟಾಗಿದೆ.
ಆದರೆ ಇದೀಗ ಭಾರತೀಯ ಹವಮಾನ ಇಲಾಖೆ ಅನ್ನದಾತರಿಗೆ ಸಿಹಿ ಸುದ್ದಿ ನೀಡಿದೆ.
ಈ ವರ್ಷ ಮುಂಗಾರು ಆಗಮಾನ ಬಹುಬೇಗನೆ ಆಗಲಿದೆ ಸರಾಸರಿ ವಾಡಿಕೆ ಪ್ರಮಾಣ 85.2 ಸೆ ಮೀ ರಷ್ಟಿದೆ.
ಸೆಪ್ಟೆಂಬರ್ ಮತ್ತು ಜೂನ್ ನಲ್ಲಿ ಅತಿ ಹೆಚ್ಚು ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ.
ಈ ವರ್ಷ ದೇಶದಲ್ಲಿ ಅಧಿಕವಾಗಿ ಮಳೆ ಆಗಲಿದೆ ಮುಂಗಾರು ಮಳೆ ಮುನ್ಸೂಚನೆ.

ಐಎಂಡಿಯು ಐದು ರೀತಿಯಲ್ಲಿ ಮಳೆ ಪ್ರಮಾಣವನ್ನು ವಿಂಗಡಿಸಿದ್ದು, ಶೇ.96 ರಿಂದ 104 ಸಾಮಾನ್ಯ ಮಳೆಯಾಗಿದ್ದರೆ, ಶೇ.90 ರಿಂದ 96 ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಇನ್ನು, ಶೇ.90ಕ್ಕಿಂತ ಕಡಿಮೆ ಮಳೆ ಬಿದ್ದರೆ ಮಳೆ ಕೊರತೆ ಎನ್ನಲಾಗುತ್ತದೆ. ಶೇ.104 ರಿಂದ 110 ಅನ್ನು ವಾಡಿಕೆಗಿಂತ ಹೆಚ್ಚು ಮಳೆ ಎಂದರೆ, ಶೇ.110ಕ್ಕಿಂತ ಹೆಚ್ಚಿದ್ದರೆ ಅಧಿಕ ಮಳೆ ಎಂದು ಕರೆಯಲಾಗುತ್ತದೆ.
ಬಹು ಆಯಾಮದ ಹವಾಮಾನ ಮುನ್ಸೂಚನೆ ವ್ಯವಸ್ಥೆ ಹಾಗೂ ಹವಾಮಾನ ಮಾದರಿಗಳ ಅನ್ವಯ ಪ್ರಸ್ತುತ ಎಲ್ ನಿನೊ ಪರಿಸ್ಥಿತಿ ಮತ್ತುಷ್ಟು ದುರ್ಬಲಗೊಳ್ಳುವ ಸಾಧ್ಯತೆ ಇದೆ. ಮಾನ್ಸೂನ್ ಋತುವಿನ ಆರಂಭಿಕ ಭಾಗ ಮತ್ತು ಲಾನಿನಾ ಪರಿಸ್ಥಿತಿಗಳು ಮಾನ್ಸೂನ್ ಋತುವಿನ ದ್ವಿತೀಯಾರ್ಧದಲ್ಲಿ ಅಭಿವೃದ್ಧಿಗೊಳ್ಳುವ ಸಾಧ್ಯತೆ ಇದೆ.