ನೀವು ಡಿಗ್ರಿ ಓದುತ್ತಿದ್ದೀರಾ ಅಥವಾ ಇನ್ನಿತರೆ ಯಾವುದೇ ಪದವಿಯನ್ನು ಓದುತ್ತಿದ್ದೀರಾ ಹಾಗಾದರೆ ಈ ವಿದ್ಯಾರ್ಥಿ ವೇತನಕ್ಕೆ ನೀವು ಅರ್ಜಿ ಸಲ್ಲಿಸಬಹುದು ಹೌದು ಸ್ನೇಹಿತರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಫೌಂಡೇಶನ್ ವತಿಯಿಂದ ಪ್ರತಿ ವರ್ಷವೂ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದೆ ಆದರೆ ಈ ಬಾರಿಯೂ ಕೂಡ ಈ ಫೌಂಡೇಶನ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದೆ ನೀವು ಈ ವಿದ್ಯಾರ್ಥಿ ವೇತನವನ್ನು ಪಡೆಯಲು ಬಯಸಿದ್ದರೆ ಆನ್ಲೈನ್ ಮುಖಾಂತರ ಸರಿಯಾದ ಮಾಹಿತಿಗಳನ್ನ ನೀಡಿ ಅರ್ಜಿ ಸಲ್ಲಿಸಬಹುದು ಈ ಲೇಖನವನ್ನು ಪೂರ್ತಿಯಾಗಿ ಓದಿ ಈ ಬಗ್ಗೆ ವಿವರಣೆಯನ್ನು ಪಡೆಯಿರಿ.
ಈ ಲೇಖನದ ಮೊದಲ ಹಂತದಲ್ಲಿ ಸ್ನಾತಕೋತರ ಪದವಿ ಹಾಗೂ ಪದವಿ ವಿದ್ಯಾರ್ಥಿಗಳ ಸ್ಕಾಲರ್ಶಿಪ್ ಬಗ್ಗೆ ಮಾಹಿತಿ ಹಾಗೂ ಎರಡನೇ ಹಂತದಲ್ಲಿ 6ನೇ ತರಗತಿಯಿಂದ 12ನೇ ತರಗತಿ ಒಳಗಿನ ವಿದ್ಯಾರ್ಥಿಗಳ ಸ್ಕಾಲರ್ಶಿಪ್ ಬಗ್ಗೆ ಮಾಹಿತಿ ನೀಡಲಾಗಿದೆ ಲೇಖನವನ್ನು ಸಂಪೂರ್ಣವಾಗಿ ಓದಿ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಫೌಂಡೇಶನ್ ವತಿಯಿಂದ ಎಲ್ಲಾ ವಿದ್ಯಾರ್ಥಿಗಳಿಗೂ ಶಿಕ್ಷಣದ ಗುರಿಯನ್ನು ತಲುಪಲು ಅದರಲ್ಲಿಯೂ ಆರ್ಥಿಕವಾಗಿ ಸಂಕಟದಲ್ಲಿ ಇರುವ ಹಾಗೂ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ತಮ್ಮ ಉನ್ನತ ಶಿಕ್ಷಣದ ಸಹಾಯಕ್ಕಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪೌಲಿಶನ್ ವತಿಯಿಂದ ಅತಿ ದೊಡ್ಡ ಪ್ರಯತ್ನವೆಂದು ನಡೆಯುತ್ತಿದೆ.
ಸ್ನಾತಕೋತರ ಪದವಿ ಅಥವಾ ಪದವಿ ಇನ್ನೂ ಇತರ ಉನ್ನತ ಶಿಕ್ಷಣವನ್ನು ಕಲಿಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಸ್ಕಾಲರ್ಶಿಪ್ ಸಿಗುತ್ತದೆ ಹಾಗೂ ದೇಶದ ಅತಿ ದೊಡ್ಡ ನೂರು ಎನ್ಐಆರ್ಎಫ್ ವಿಶ್ವವಿದ್ಯಾಲಯಗಳಿಗೂ ಹಾಗೂ ಆ ಕಾಲೇಜಿನಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೂ ಈ ಸೌಲಭ್ಯ ನೀಡಲಾಗುತ್ತದೆ.
ಈ ವರ್ಷ 2024ನೇ ಸಾಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆಸಸ್ ಸ್ಕಾಲರ್ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜುಗಳನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು
- SBI ಅಸಾಸ್ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ಯಾವುದೇ ಪದವಿ ಆದರೂ ತೊಂದರೆ ಇಲ್ಲ
- ತಮ್ಮ ಹಿಂದಿನ ಶಿಕ್ಷಣದಲ್ಲಿ 75% ಅಂಕಿಗಳನ್ನು ಪಡೆದಿರಬೇಕು
- ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ 6 ಲಕ್ಷಕ್ಕಿಂತ ಹೆಚ್ಚಿರಬಾರದು.
- ದೇಶದ ಎಲ್ಲಾ ರಾಜ್ಯಗಳಿಂದ ಹಾಗೂ ಜಿಲ್ಲಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು
- ಈ ಸ್ಕಾಲರ್ಶಿಪ್ ಯೋಜನೆಯಲ್ಲಿ 50% ನಷ್ಟ ವಿದ್ಯಾರ್ಥಿನಿಯರಿಗೆ ಮೀಸಲಿವೆ.
ಹಾಗಾದರೆ ಈ ಸ್ಕಾಲರ್ಶಿಪ್ ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ? ಅರ್ಜಿ ಸಲ್ಲಿಸುವ ವಿಧಾನವನ್ನು ನೋಡೋಣ.
- ಮೊದಲಾಗಿ ಭಾರತೀಯ ಸ್ಟೇಟ್ ಬ್ಯಾಂಕ್ ನ ಫೌಂಡೇಶನ್ ಸ್ಕಾಲರ್ಶಿಪ್ ನೀಡುವ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡೋಣ https//www.SBI foundation.in/ ಭೇಟಿ ನೀಡಬೇಕು
- ಪೇಜ್ ಓಪನ್ ಆದ ನಂತರ Apply now ಮೇಲೆ ಕ್ಲಿಕ್ ಮಾಡಿ
- ಇದಾದ ನಂತರ ತೆರೆಯುವ ಮುಂದಿನ ಪೇಜ್ ನಲ್ಲಿ ಯಾವ ವಿಭಾಗದಲ್ಲಿ ಅರ್ಜಿ ಸಲ್ಲಿಸಬೇಕೆಂಬುದನ್ನು ಆಯ್ಕೆ ಮಾಡಿ
- ಇದಾದ ನಂತರ ನಿಮ್ಮ ಮುಂದೆ ಕೆಲವೊಂದಿಷ್ಟು ಆಪ್ಷನ್ ಗಳು ಬರುತ್ತದೆ ನೀವು ಅದರಲ್ಲಿ SBIF Asha Scholarship Program for Undergraduate Students’ ಅನ್ನೋದರ ಮೇಲೆ ಕ್ಲಿಕ್ ಮಾಡಿ.
- ನಿಮ್ಮ ಪರಮನೆಂಟ್ ಜಿಮೈಲ್ ಹಾಗೂ ನಿಮ್ಮ ಮೊಬೈಲ್ ಸಂಖ್ಯೆಯಿಂದ ಒಂದು ಅಕೌಂಟ್ ಅನ್ನು ಕ್ರಿಯೇಟ್ ಮಾಡಿಕೊಂಡು ಅಪ್ಲಿಕೇಶನ್ ಗೆ ಲಾಗಿನ್ ಆಗಿ.
- ಹಾಗೆ ಅಲ್ಲಿ ಕೇಳಿದ ಎಲ್ಲಾ ಮಾಹಿತಿಗಳು ಹಾಗೂ ದಾಖಲೆಗಳನ್ನು ನೀಡಿ ನೀವು ಅರ್ಜಿ ಸಲ್ಲಿಸಬಹುದು.
ಈ ಸ್ಕಾಲರ್ಶಿಪ್ಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು.
- ಆಧಾರ ಕಾರ್ಡ್
- ವಿದ್ಯಾಸಂಸ್ಥೆಯ ಪ್ರವೇಶಾತಿ ದಾಖಲೆಗಳು ಹಾಗೂ ಸುಲ್ಕಾ ಪಾವತಿಸಿದ ರಸೀದಿ
- ನಿಮ್ಮ ಹಿಂದಿನ ತರಗತಿಯ ಅಂಕೆ ಪಟ್ಟಿ
- ಹಾಗೂ ನಿಮ್ಮ ಬ್ಯಾಂಕ್ ಖಾತೆಯ ಪಾಸ್ ಬುಕ್ ಒಂದು ಜೆರಾಕ್ಸ್ ಕಾಪಿ /ಅಥವಾ ಫೋಟೋ
- ಆದಾಯ ಮತ್ತು ಜಾತಿ ಪ್ರಮಾಣ ಪತ್ರ
- ಒಂದು ಪಾಸ್ಪೋರ್ಟ್ ಸೈಜ್ ಫೋಟೋ
- ಹಾಗೆ ಸಹಿ ಮಾಡಿದ ಪ್ರತಿ
- ನಿಮ್ಮ ಇಮೇಲ್ ಅಥವಾ ಜಿಮೇಲ್ ವಿಳಾಸ
- ಮೊಬೈಲ್ ಸಂಖ್ಯೆ
ನಂತರ ಅಲ್ಲಿ ಕೇಳಿದ ಇನ್ನಿತರ ವಯಕ್ತಿಕ ಮಾಹಿತಿಗಳು.
ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 01/10/2024
ಇದಿಷ್ಟು ದಾಖಲೆಗಳು ಹಾಗೂ ಹೇಳಿದ ಮಾಹಿತಿಗಳಿಂದ ನೀವು ಆನ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಬಹುದು.
6ನೇ ತರಗತಿಯಿಂದ 12ನೇ ಒಳಗಿನ ಎಲ್ಲಾ ವಿದ್ಯಾರ್ಥಿಗಳಿಗೂ ಈ ಆಶಾಸ್ ಸ್ಕಾಲರ್ಶಿಪ್ ಸಿಗುತ್ತದೆ, ವಿದ್ಯಾರ್ಥಿಗಳು ಶಿಕ್ಷಣದ ಗುರಿಯನ್ನು ಮುಟ್ಟಲು ಹಾಗೂ ಶಿಕ್ಷಣಕ್ಕೆ ಬೇಕಾದ ಸಹಾಯಕ್ಕಾಗಿ ಸಹಕರಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಡ ಹಾಗೂ ಆರ್ಥಿಕವಾಗಿ ಸಮಸ್ಯೆಯಲ್ಲಿ ಇರುವ ವಿದ್ಯಾರ್ಥಿಗಳಿಗಾಗಿ sbi ಆಶಾ ಸ್ಕಾಲರ್ಶಿಪ್ ಯೋಜನೆಯನ್ನು ತಂದಿದೆ.
ಮೊದಲ ಹಂತದಲ್ಲಿ ನಾವು ನಿಮಗೆ ತಿಳಿಸಿದ ಹಾಗೆ ಇದು ಕೂಡ ಅದೇ ಯೋಜನೆಯಾಗಿದೆ ಆದರೆ ಅದು ಡಿಗ್ರಿ ವಿದ್ಯಾರ್ಥಿಗಳಿಗಾಗಿದೆ ಇದು 12ನೇ ತರಗತಿ ಒಳಗಿನ ವಿದ್ಯಾರ್ಥಿಗಳಿಗೆ ಆಗಿದೆ.
SBIF ಆಶಾ ಸ್ಕಾಲರ್ಶಿಪ್ ಪ್ರೋಗ್ರಾಮ್ ಆನ್ಲೈನ್ ಮುಖಾಂತರ ನೀವು ಅರ್ಜಿ ಸಲ್ಲಿಸಬಹುದು ವಿದ್ಯಾರ್ಥಿಗಳ ಭವಿಷ್ಯವನ್ನು ಗಟ್ಟಿಗೊಳಿಸುವುದಕ್ಕಾಗಿ ವಿದ್ಯಾರ್ಥಿಗಳು ತಮ್ಮ ಜೀವನದ ವಿದ್ಯಾಭ್ಯಾಸದಿಂದ ಗುರಿಯನ್ನು ಮುಟ್ಟುವ ಪ್ರಯತ್ನಕ್ಕಾಗಿ ಟಿ ಯೋಜನೆಯನ್ನು ತರಲಾಗಿದೆ ಹಾಗಾದರೆ ಇದರಿಂದ ಅರ್ಜಿ ಸಲ್ಲಿಸುವುದು ಹೇಗೆ ಸ್ಕಾಲರ್ಶಿಪ್ ಅನ್ನು ಪಡೆಯುವುದು ಹೇಗೆ ಅನ್ನೋದನ್ನ ಈ ಲೇಖನದಲ್ಲಿ ನೋಡೋಣ.
ಈ ಸ್ಕಾಲರ್ಷಿಪ್ ಹೆಸರು | SBIF ಆಸಾಸ್ ಸ್ಕಾಲರ್ಶಿಪ್ ಪ್ರೋಗ್ರಾಮ್ ಇದು ಶಾಲಾವಿದ್ಯಾರ್ಥಿಗಳಿಗಾಗಿ. |
ಅರ್ಜಿ ಸಲ್ಲಿಸಬಹುದಾದ ವಿದ್ಯಾರ್ಥಿಗಳು | 6ನೇ ತರಗತಿಯಿಂದ 12ನೇ ತರಗತಿಯ ಒಳಗಿನ ವಿದ್ಯಾರ್ಥಿಗಳು |
ವಿದ್ಯಾರ್ಥಿ ವೇತನ ಮೊತ್ತ | 15,000 |
ಅರ್ಜಿ ಸಲ್ಲಿಸಲು ನೀಡಿದ ಕೊನೆಯ ದಿನಾಂಕ | 01-10-2024 |
ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು
- ಅರ್ಧಿ ಸಲ್ಲಿಸುವ ವಿದ್ಯಾರ್ಥಿಗಳು ಪ್ರಸ್ತುತ 6-1 2ನೇ ತರಗತಿಯಲ್ಲಿ ಓದುತ್ತಿರಬೇಕು
- ವಿದ್ಯಾರ್ಥಿಗಳು ತಮ್ಮ ಹಿಂದಿನ ತರಗತಿಯಲ್ಲಿ 75% ನಷ್ಟು ಅಂಕೆಗಳನ್ನು ತೆಗೆದಿರಬೇಕು
- ಕುಟುಂಬದ ವಾರ್ಷಿಕ ಆದಾಯ 3 ಲಕ್ಷಕ್ಕಿಂತ ಹೆಚ್ಚಿಗೆ ಇರಬಾರದು
- ಈ ವಿದ್ಯಾರ್ಥಿ ವೇತನದಲ್ಲಿ ಶೇಕಡ 50ರಷ್ಟು ವಿದ್ಯಾರ್ಥಿನಿಯರಿಗೆ ಮೀಸಲಿಡಲಾಗಿದೆ.
- ಈ ವಿದ್ಯಾರ್ಥಿವೇತನದ ಹೆಚ್ಚಿನ ಆದ್ಯತೆ ಪರಿಷ್ಠಿತ ಜಾತಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ನೀಡಲಾಗಿದೆ
ಅರ್ಜಿ ಸಲ್ಲಿಸುವ ವಿಧಾನ
- ಮೊದಲಾಗಿ ಭಾರತೀಯ ಸ್ಟೇಟ್ ಬ್ಯಾಂಕ್ ನ ಫೌಂಡೇಶನ್ ಸ್ಕಾಲರ್ಶಿಪ್ ನೀಡುವ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡೋಣ https//www.SBI foundation.in/ ಭೇಟಿ ನೀಡಬೇಕು
- ಪೇಜ್ ತೆರೆದ ನಂತರ apply now ಮೇಲೆ ಕ್ಲಿಕ್ ಮಾಡಬೇಕು
- ನಂತರ ಅರ್ಜಿಯ ವಿಭಾಗವನ್ನು ಆಯ್ಕೆ ಮಾಡಬೇಕು
- ಇದಾದ ನಂತರ ನಿಮ್ಮ ಮುಂದೆ ಕೆಲವೊಂದಿಷ್ಟು ಆಪ್ಷನ್ ಗಳು ಬರುತ್ತದೆ ನೀವು ಅದರಲ್ಲಿ SBIF Asha Scholarship Program for Undergraduate Students’ ಅನ್ನೋದರ ಮೇಲೆ ಕ್ಲಿಕ್ ಮಾಡಿ.
- ಮುಂದಿನ ಪೇಜ್ ನಲ್ಲಿ ಇಸ್ಕಾಲರ್ ಶಿಪ್ಪಿನ ಸೌಲಭ್ಯಗಳು ಕುರಿತು ಹಾಗೂ ಸಂಪೂರ್ಣ ಮಾಹಿತಿಯನ್ನು ಓದಿಕೊಳ್ಳಿ
- ನಂತರ ಮತ್ತೆ ಅಪ್ಲೈ ಮೇಲೆ ಕ್ಲಿಕ್ ಮಾಡಿ ಇನ್ನೊಂದು ಪೇಜ್ ಓಪನ್ ಆಗುತ್ತದೆ
- ನಿಮ್ಮ ಮೊಬೈಲ್ ನಂಬರ್ ಜಿಮೇಲ್ ಐಡಿ ಇಂದ ಒಂದು ತಾತ್ಕಾಲಿಕ ಖಾತೆಯನ್ನು ರಚಿಸಿ
- ಇದೆಲ್ಲಾ ಮಾಡಿದ ನಂತರ ಅಲ್ಲಿ ಕೇಳಲಾದ ಎಲ್ಲಾ ಮಾಹಿತಿಗಳನ್ನು ಹಾಗೂ ದಾಖಲೆಗಳನ್ನು ನೀಡಿ ನೀವು ಅರ್ಜಿ ಸಲ್ಲಿಸಬಹುದು,
ಈ ಅರ್ಜಿಯನ್ನು ಸಲ್ಲಿಸಲು ಬೇಕಾದ ದಾಖಲೆಗಳು
- ವಿದ್ಯಾರ್ಥಿಯ ಹಿಂದಿನ ತರಗತಿಯ ಅಂಕೆ ಪಟ್ಟಿ
- ಆಧಾರ ಕಾರ್ಡ್
- ಪ್ರಸ್ತುತ ತರಗತಿಯ ಪ್ರವೇಶಾತಿ ಅಥವಾ ದಾಖಲೆ
- ಬ್ಯಾಂಕ್ ಪಾಸ್ ಬುಕ್ ಫೋಟೋ ಅಥವಾ ಜೆರಾಕ್ಸ್
- ಆದಾಯ ಹಾಗೂ ಜಾತಿ ಪ್ರಮಾಣ ಪತ್ರ
- ಒಂದು ಪಾಸ್ಪೋರ್ಟ್ ಸೈಜ್ ಫೋಟೋ
- ಹಾಗೂ ಸಹಿ ಹಾಕಿದ ಪ್ರತಿ
- ಇ-ಮೇಲ್ ಅಥವಾ ಜಿಮೇಲ್ ವಿಳಾಸ
- ನಂತರ ಮೊಬೈಲ್ ಸಂಖ್ಯೆ
ಕೊನೆದಾಗಿ ಅಲ್ಲಿ ಕೇಳಿದ ಎಲ್ಲ ವೈಯಕ್ತಿಕ ಮಾಹಿತಿಗಳನ್ನು ನೀಡಬೇಕಾಗುತ್ತದೆ.
ಇದಿಷ್ಟು ಭಾರತೀಯ ಸ್ಟೇಟ್ ಬ್ಯಾಂಕ್ ಫೌಂಡೇಶನ್ ನ ಆಶಾ ಸ್ಕಾಲರ್ ಶಿಪ್ ಪ್ರೋಗ್ರಾಮ್ ನ ಮಾಹಿತಿಗಳು ಇಂದೇ ಅರ್ಜಿ ಸಲ್ಲಿಸಿ.