village-administrative:ಮತ್ತೆ 1000, ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗೆ ಅರ್ಜಿ ಆಹ್ವಾನಿಸಿದ ಸರಕಾರ.

ನೀವು ಈ ಹಿಂದೆ ಗ್ರಾಮ ಆಡಳಿತ ಅಧಿಕಾರಿ ಉದ್ಯೆಗೆ ಸಂಬಂಧಪಟ್ಟಂತೆ ಅರ್ಜಿಗಳನ್ನು ಸಲ್ಲಿಸಿದ್ದೀರಾ ಹಾಗಾದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ ಮಾಹಿತಿಗಳನ್ನು ತಿಳಿದುಕೊಳ್ಳಿ.

ಸ್ನೇಹಿತರೆ ಈ ಹಿಂದೆ ದಿನಾಂಕ 04/05/2024 ರಂದು ಪ್ರಕಟಣೆ ಸಂಖ್ಯೆ ED/KEA/ಆಡಳಿತ/C.R.04/2023(RPC) ಪ್ರಕಟಣೆಯಂತೆ ಕರ್ನಾಟಕ ಸರಕಾರದ ಕಂದಾಯ ಇಲಾಖೆ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ನೇರ ನೇಮಕಾತಿ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು ಅದಾದ ನಂತರ ಅರ್ಜಿಯನ್ನು ಅರ್ಬಿ ಸಲ್ಲಿಸಲು ವಿಸ್ತರಣೆ ಮಾಡಲಾಗಿತ್ತು,

ಅಭ್ಯರ್ಥಿಗಳು ಸೂಕ್ತ ದಾಖಲೆಗಳೊಂದಿಗೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೂಚನೆ ನೀಡಿತ್ತು ಸಾವಿರಾರು ಜನ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿದ್ದರು ಆದರೆ ಅದಾದ ನಂತರ ದಿನಾಂಕ 17/09/2024 ರಂದು ಮತ್ತೊಮ್ಮೆ ಅರ್ಜಿ ಸಲ್ಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಣೆಯನ್ನು ಹೊರಡಿಸಿದೆ ಮತ್ತೆ ಅರ್ಜಿ ಸಲ್ಲಿಸಲು ಯಾರಾದರೂ ಬಯಸಿದರೆ ಹಾಗೂ ಅರ್ಹ ಅಭ್ಯರ್ಥಿಗಳು ಕರ್ನಾಟಕ ಸರಕಾರದ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಪ್ರಕಾಶ ನೀಡಿದೆ.

ಆದರೆ ಹಿಂದೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಯಾವುದೇ ಗೊಂದಲಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಯಾಕೆಂದರೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ 29/09/2024 ರಂದು ಕಡ್ಡಾಯ ಕನ್ನಡ ಪರೀಕ್ಷೆಯನ್ನು ನಡೆಸಲು ವೇಳಾಪಟ್ಟಿಯನ್ನು ಈಗಾಗಲೇ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ ಅಭ್ಯರ್ಥಿಗಳಲ್ಲಿ ಯಾವುದೇ ಗೊಂದಲ ಬೇಡ ನೀವು ಇದೇ ತಾರೀಕಿನಂದು ನಿಮಗೆ ನಿಗದಿ ಮಾಡಿರುವ ಸ್ಥಳದಲ್ಲಿ ಪರೀಕ್ಷೆಯನ್ನು ಬರೆಯಬಹುದಾಗಿದೆ.

ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಿರುವ ಎಲ್ಲ ಅಭ್ಯರ್ಥಿಗಳು ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಗಳು ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಂಡು ತಪ್ಪದೇ 29/09/2824 ರಂದು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗತಕ್ಕದ್ದು.

ಕಡ್ಡಾಯ ಕನ್ನಡ ಪರೀಕ್ಷೆ ಗೆ ಗೈರು ಹಾಜೂರಾದ ಅಭ್ಯರ್ಥಿಗಳಿಗೆ ಮುಂದಿನ ದಿನಾಂಕ 27/10/2024 ರಂದು ನಡೆಯಲಿರುವ ಪತ್ರಿಕೆ ಒಂದು ಮತ್ತು ಪತ್ರಿಕೆ ಎರಡರ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಲು ಅವಕಾಶ ಇರುವುದಿಲ್ಲ.

ಹಾಗೆ ಕರ್ನಾಟಕ ಸರಕಾರದ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಅರ್ಜಿ ಸಲ್ಲಿಸಲು ಬಯಸುವವರು ಹಾಗೂ ಅರ್ಜಿ ಸಲ್ಲಿಸಲು ಬಾಕಿ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ ಹಾಗಾದರೆ ಅರ್ಜಿ ಸಲ್ಲಿಸುವುದು ಹೇಗೆ ಅನ್ನೋದನ್ನ ನೋಡೋಣ.

ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ಆಡಳಿತ ಅಧಿಕಾರಿ ಹುದ್ದೆಗೆ ನೇರ ನೇಮಕಾತ್ ಸಂಬಂಧಿಸಿದಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆದಿ ಸೂಚನೆಯನ್ನು ಹೊರಡಿಸಿದೆ 1000 ಗ್ರಾಮ ಆಡಳಿತ ಅಧಿಕಾರಿಗಳ ನೇಮಕಕ್ಕೆ ಸರಕಾರ ಸೂಚನೆ ನೀಡಿದೆ ಹಾಗಾದರೆ ಅರ್ಜಿ ಸಲ್ಲಿಸುವುದು ಹೇಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳೇನು? ಹಾಗೂ ನಿಯಮಗಳೇನು ಅನ್ನೋದನ್ನ ಈ ಲೇಖನದಲ್ಲಿ ಪೂರ್ತಿಯಾಗಿ ನೋಡೋಣ.

ಹುದ್ದೆ ವಿವರ


ಅರ್ಜಿ ಸಲ್ಲಿಸುವುದು ಹೇಗೆ

ಕರ್ನಾಟಕ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ಸೈಟ್ http:kea.kar.nic.in ಗೆ ಭೇಟಿ ನೀಡಿ ವೆಬ್ ಸೈಟ್ ಗೆ ಭೇಟಿ ನೀಡಿದ ನಂತರ ಕೇಳಿರುವ ಎಲ್ಲಾ ದಾಖಲೆಗಳನ್ನು ಸೂಕ್ತವಾದ ಮಾಹಿತಿಗಳನ್ನು ಸಲ್ಲಿಸಿ, ನಂತರ ನೀವು ಉದ್ಯೋಗ ಬಯಸುವ ಜಿಲ್ಲೆ ಹಾಗೂ ನೀವು ಪರೀಕ್ಷೆ ಬರೆಯುವ ಜಿಲ್ಲೆಗಳನ್ನು ಆಯ್ಕೆ ಮಾಡಿ ಹಾಗೂ ಅರ್ಜಿಯ ಶುಲ್ಕವನ್ನು ಸಲ್ಲಿಸಿ.

ಅರ್ಜಿ ಸಲ್ಲಿಸಲು ಬಯಸುವ ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು ಒಂದು ಜಿಲ್ಲೆಗೆ ಮಾತ್ರ ಸಲ್ಲಿಸಬಹುದಾಗಿರುತ್ತದೆ ಒಂದಕ್ಕಿಂತ ಹೆಚ್ಚು ಜಿಲ್ಲೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಅವಕಾಶ ಇರುವುದಿಲ್ಲ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬೇಕಾಗುತ್ತದೆ ಹಾಗೂ ಪರೀಕ್ಷೆ ಬರೆದ ನಂತರ ಪರಿಗಣಿಸಲಾಗುತ್ತದೆ .

ಒಂದು ಬಾರಿ ನೀವು ಅರ್ಜಿಯನ್ನು ಸಲ್ಲಿಸಿದರೆ ಮತ್ತೆ ಅರ್ಜಿಯನ್ನು ತಿದ್ದುಪಡಿ ಮಾಡಲು ಯಾವುದೇ ಅವಕಾಶವನ್ನು ನೀಡಿರುವುದಿಲ್ಲ ಹಾಗಾಗಿ ಅರ್ಜಿ ಸಲ್ಲಿಸುವಾಗ ಸೂಕ್ಷ್ಮವಾಗಿ ಗಮನಿಸಿ ಅರ್ಜಿಯನ್ನು ಸಲ್ಲಿಸಿ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

  • ಆಧಾರ್ ಕಾರ್ಡ್
  • ಪಾಸ್ಪೋರ್ಟ್ ಸೈಜ್ ಫೋಟೋ
  • SSLC ಹಾಗೂ ಪಿಯುಸಿ ನೋಂದಾವಣಿ ಸಂಖ್ಯೆ
  • ಅಭ್ಯರ್ಥಿಯ ಡಿಜಿಟಲ್ ಸಹಿ
  • ಅಭ್ಯರ್ಥಿ ಯಾವುದಾದರೂ ಪದವಿಗಳನ್ನು ಹೊಂದಿದ್ದರೆ ಆ ಪದವಿಯ ಸರ್ಟಿಫಿಕೇಟ್
  • ಜಾತಿ ಪ್ರಮಾಣ ಪತ್ರ

ಮೊದಲು ವೆಬ್ಸೈಟ್ಗೆ ಭೇಟಿ ನೀಡಿ ಕೇಳಿರುವ ಎಲ್ಲಾ ದಾಖಲೆಗಳನ್ನು ಸಲ್ಲಿಸಿ

  • ಎರಡನೆಯ ಹಂತ ನಿಮ್ಮ ಭಾವಚಿತ್ರ ಹಾಗೂ ಸಹಿ ಮಾಡಿದ ಫೋಟೋವನ್ನು ಅಪ್ಲೋಡ್ ಮಾಡಿ
  • ಮೂರನೇ ಹಂತ ಶುಲ್ಕ ಪಾವತಿಸಿ
  • ನಾಲ್ಕನೆಯ ಹಂತ ಪಾವತಿಯ ಸ್ಥಿತಿಯನ್ನು ಪರಿಶೀಲಿಸಿ
  • ಐದನೇ ಹಂತ ಅರ್ಜಿಯನ್ನು ಮುದ್ರಿಸಿಕೊಳ್ಳಿ.

ಅರ್ಜಿಯ ಶುಲ್ಕ

ಸಾಮಾನ್ಯ ಅರ್ಹತೆ ಮತ್ತು ಇತರ ಪ್ರವರ್ಗಗಳು
ಪ್ರವರ್ಗ-2A/2b/3a/3b/ ರೂ.750

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಹಾಗೂ ವಿಕಲಚೇತನ ಅಭ್ಯರ್ಥಿಗಳಿಗೆ ರೂ.500

ಒಂದು ಸಾರಿ ಸುಲ್ಕವನ್ನು ಪಾವತಿಸಿದರೆ ಮತ್ತೆ ಹಿಂತಿರುಗಿಸಲಾಗುವುದಿಲ್ಲ.

ಗ್ರಾಮ ಆಡಳಿತ ಅಧಿಕಾರಿ ಹುದ್ದೆಯ ಪರೀಕ್ಷೆಯನ್ನು ಆಫ್ಲೈನ್ ಮೂಲಕ ಓ ಎಂ ಆರ್ ಮಾದರಿ ಪರೀಕ್ಷೆ ನಡೆಸಲಾಗುವುದು ಎಂದು ಹೇಳಲಾಗಿದೆ.

ಈ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾ ಕೇಂದ್ರಗಳಲ್ಲಿ ನಟಿಸಲಾಗುತ್ತದೆ ಹಾಗೂ ನಿಯಮಗಳು ಶರತ್ತುಗಳು ಒಳಗೊಂಡಿರುತ್ತದೆ.

ಪರೀಕ್ಷಾ ಕೇಂದ್ರಗಳಿಗೆ ಅಭ್ಯರ್ಥಿಗಳು ತಲುಪುವಾಗ ಯಾವುದಾದರೂ ಒಂದು ಗುರುತಿನ ಚೀಟಿ ಕಡ್ಡಾಯವಾಗಿ ತರಬೇಕಾಗುತ್ತದೆ.

ಕಡ್ಡಾಯ ಕನ್ನಡ ಭಾಷಾ ಪರೀಕ್ಷೆಯು ಬಹು ಆಯ್ಕೆ ಮಾದರಿಯ ಪತ್ರಿಕೆ ಆಗಿರುತ್ತದೆ ಇದರಲ್ಲಿ ಗರಿಷ್ಠ 150 ಅಂಕೆಗಳನ್ನು ಒಳಗೊಂಡಿರುತ್ತದೆ ಮತ್ತು ಅಭ್ಯರ್ಥಿಗಳು ಇದರಲ್ಲಿ ಕನಿಷ್ಠ 50 ಅಂಕಿಗಳನ್ನ ಗಳಿಸಬೇಕಾಗುತ್ತದೆ 50 ಅಂಕಿಗಳಿಂದ ಕಮ್ಮಿ ಗಳಿಸಿದ ಅಭ್ಯರ್ಥಿಗಳು ಆಯ್ಕೆ ಆಗುವುದಿಲ್ಲ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಬರುವ ಪ್ರಶ್ನೆ ಪತ್ರಿಕೆಗಳು.

  1. ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ಸಾಮಾನ್ಯ ಜ್ಞಾನದ ಪ್ರಶ್ನೆಗಳು.
  2. ದೈನಂದನದ ಗ್ರಹಿಕೆಗೆ ಸಂಬಂಧಿಸಿದ ವಿಷಯಗಳು
  3. ಭಾರತ ಸಂವಿಧಾನದ ವಿಷಯಗಳು.
  4. ವಿಶೇಷವಾಗಿ ಕರ್ನಾಟಕಕ್ಕೆ ಸಂಬಂಧಿಸಿದ ರಾಷ್ಟ್ರೀಯ ಹಾಗೂ ಭಾರತದ ಇತಿಹಾಸಗಳು.
  5. ಹಾಗೂ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ಭೂಗೋಳ ವಿಷಯಗಳು.
  6. ರಾಜ್ಯದ ಹಾಗೂ ಪ್ರಾದೇಶಿಕ ಆಡಳಿತದ ಮಾಹಿತಿಗಳು ಹಾಗೂ ವಿಚಾರ ವಿಷಯಗಳು.
  7. ಹಾಗೂ ಗ್ರಾಮೀಣ ಅಭಿವೃದ್ಧಿ ಪಂಚಾಯತ್ ರಾಜ್ಯ ಸಂಸ್ಥೆಗಳಿಗೆ ಸಂಬಂಧಿಸಿದ ಕೆಲವೊಂದಿಷ್ಟು ಆಡಳಿತದ ಮಾಹಿತಿಗಳು ವಿಚಾರಗಳು.
  8. ಹಾಗೂ ಆರ್ಥಿಕ ಅಭಿವೃದ್ಧಿ ಕುರಿತು ಮಾಹಿತಿಗಳು ವಿಷಯಗಳು.
  9. ಹಾಗೂ ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿದ ಪರಿಸರದ ವಿಚಾರಗಳು.

ಅಂಕಿಗಳು 100 ಪರೀಕ್ಷಾ ಸಮಯ 2 ಗಂಟೆಗಳ ಕಾಲ

  • ಸಾಮಾನ್ಯ ಕನ್ನಡ ಪರೀಕ್ಷೆ
  • ಸಾಮಾನ್ಯ ಇಂಗ್ಲಿಷ್ ಪರೀಕ್ಷೆ
  • ಕಂಪ್ಯೂಟರ್ ಗೆ ಸಂಬಂಧಿಸಿದ ಜ್ಞಾನ

100 ಅಂಕಗಳು ಸಮಯ 2 ಗಂಟೆಗಳ ಕಾಲ

ಅರ್ಬಿಸಲಿಸಿದ ಅರ್ಹ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಲ್ಲಿರುವ ಎಲ್ಲ ಮಾಹಿತಿಗಳನ್ನು ಸ್ಪಷ್ಟವಾಗಿ ತಿಳಿದುಕೊಂಡರೆ ಉತ್ತಮ.

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು VAO- ಕಡ್ಡಾಯ ಕನ್ನಡ ಪರೀಕ್ಷೆ-29/09/2024 ರ ಪ್ರವೇಶ ಟಿಕೆಟ್ ಡೌನ್ಲೋಡ್ ಮಾಡಿಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ https://cetonline.karnataka.gov.in/hallticket_va/forms/HALLTICKET.aspx ಮೊದಲು ನಿಮ್ಮ ಮುದ್ರಿತಾ ಐಡಿಯಾ ಸಂಖ್ಯೆಯನ್ನು ನಮೂದಿಸಿ ನಂತರ ನಿಮ್ಮ ಹೆಸರಿನ ನಾಲ್ಕು ಅಕ್ಷರಗಳನ್ನು ಹಾಕಿ ಸ್ಪೇಸ್ ಕೊಡಿ ಸಬ್ಮಿಟ್ ಮಾಡಿ ನಂತರ ಹಾಲ್ ಟಿಕೆಟ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ.

Leave a Comment

Your email address will not be published. Required fields are marked *

Scroll to Top