
ಹಾಗಾದರೆ ನೋಟಾ ಎಂದರೇನು…!?
None Of The Above ಎನ್ನುವುದರ ಸಂಕ್ಷಿಪ್ತ ರೂಪವೇ ನೋಟಾ. ಈ ಮೇಲಿನ ಯಾರೂ ಅಲ್ಲ ಎನ್ನುವುದು ಇದರ ಅರ್ಥ. ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳಿಗೆ ಮತ ಚಲಾಯಿಸಲು ಇಷ್ಟವಿಲ್ಲದವರು ನೋಟಾ ಆಯ್ಕೆ ಮಾಡಿಕೊಳ್ಳಬಹುದು. ಕಣದಲ್ಲಿರುವ ಎಲ್ಲಾ ಅಭ್ಯರ್ಥಿಗಳ ಹೆಸರಿನ ಬಳಿಕ ಕೊನೆ ಸಾಲಿನಲ್ಲಿ ನೋಟಾ ಆಯ್ಕೆ ಇರುತ್ತದೆ…!
ಇವಿಎಂನಲ್ಲಿ ಇರುವ ಎಲ್ಲಾ ಅಭ್ಯರ್ಥಿಗಳನ್ನು ತಿರಸ್ಕರಿಸಲು ಮತದಾರರಿಗೆ ನೀಡಿರುವ ಅವಕಾಶವೇ ನೋಟಾ…!!
ನೋಟಾ ಜಾರಿಗೆ ಬಂದಿದ್ದು ಯಾವಾಗ…?
2013ರಲ್ಲಿ ಛತ್ತೀಸ್ಗಢ, ಮಿಜೋರಾಂ, ದೆಹಲಿ, ರಾಜಸ್ಥಾನ ಹಾಗೂ ಮಧ್ಯಪ್ರದೇಶದ ಪಂಚರಾಜ್ಯ ಚುನಾವಣೆಯಲ್ಲಿ ಈ ಆಯ್ಕೆಯನ್ನು ಚುನಾವಣಾ ಆಯೋಗ ಪರಿಚಯಿಸಿತ್ತು. 2014ರ ಲೋಕಸಭೆ ಚುನಾವಣೆಯಲ್ಲೂ ನೋಟಾ ಆಯ್ಕೆ ಇತ್ತು…!
ಈ ತರಹದ ಆಯ್ಕೆಯನ್ನು ನೀಡಬೇಕು ಎನ್ನುವ ಸುಪ್ರೀಂ ಕೋರ್ಟ್ನ ನಿರ್ದೇಶನದ ಮೇರೆಗೆ ಚುನಾವಣಾ ಆಯೋಗ ನೋಟಾವನ್ನು ಪರಿಚಯಿಸಿತ್ತು…!!
ನೋಟಾವನ್ನು ಯಾಕೆ ಪರಿಚಯಿಸಲಾಯಿತು…?
ಚುನಾವಣಾ ಪ್ರಕ್ರಿಯೆಯಲ್ಲಿ ಮತದಾರರಿಗೆ ತಮ್ಮ ಕ್ಷೇತ್ರದ ಅಭ್ಯರ್ಥಿಗಳ ವಿರುದ್ಧ ಅಸಮಾಧಾನವಿದ್ದರೆ, ಅವರು ಮತದಾನದಿಂದಲೇ ದೂರ ಉಳಿಯುತ್ತಿದ್ದರು. ಹಾಗಾಗಿ ಮತದಾರರು ತಮ್ಮ ಮತ ಚಲಾಯಿಸುವ ಹಕ್ಕನ್ನು ಅಸಮಾಧಾನದ ಕಾರಣಕ್ಕಾಗಿ ಚಲಾಯಿಸುತ್ತಿರಲಿಲ್ಲ. ನೋಟಾ ಅಳವಡಿಸಿದ ಬಳಿಕ, ಅಭ್ಯರ್ಥಿಗಳ ವಿರುದ್ಧದ ಅತೃಪ್ತಿಯನ್ನು ಮತದಾರರು ಅಧಿಕೃತವಾಗಿ ನೋಟಾ ಮೂಲಕ ದಾಖಲಿಸಬಹುದು ಮತ್ತು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಲು ನೋಟಾ ಪ್ರೇರೇಪಿಸುತ್ತಿದೆ…!
ಚುನಾವಣಾ ಫಲಿತಾಂಶದಲ್ಲಿ ನೋಟಾ ಪರಿಣಾಮವೇನು…? ಮತ್ತು ನೋಟಾ ಹೆಚ್ಚು ಮತಗಳನ್ನು ಪಡೆದಾಗ ಏನಾಗುತ್ತದೆ…?
ನೋಟಾ ಪರವಾಗಿ ಗರಿಷ್ಠ ಮತಗಳು ಬಂದಿದ್ದರೂ ಸಹ, ಹೆಚ್ಚಿನ ಸಂಖ್ಯೆಯ ಮತಗಳನ್ನು ಪಡೆದ ಅಭ್ಯರ್ಥಿಯನ್ನು ವಿಜೇತ ಅಭ್ಯರ್ಥಿ ಎಂದು ಘೋಷಿಸಲಾಗುತ್ತದೆ, ನೋಟಾ – ಕೇವಲ ಅತೃಪ್ತಿಯನ್ನು ಮಾತ್ರವೇ ಪ್ರತಿಬಿಂಬಿಸುತ್ತದೆ…!!