
ತ್ರಿಪುರಾದಲ್ಲಿ ಅತೀ ಹೆಚ್ಚು, ಬಿಹಾರದಲ್ಲಿ ಅತೀ ಕಡಿಮೆ ವೋಟಿಂಗ್
21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ 102 ಸ್ಥಾನಗಳಿಗೆ ಶುಕ್ರವಾರದ ನಡೆದ ಚುನಾವಣೆಯಲ್ಲಿ ಶೇಕಡಾ 65.4ರಷ್ಟು ಮತದಾನವಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮಾಹಿತಿ ನೀಡಿದೆ…!
ಪಶ್ಚಿಮ ಬಂಗಾಳದ ಕೆಲವು ಕಡೆ ಸಣ್ಣ ಪುಟ್ಟ ಘರ್ಷಣೆ ಆಗಿದ್ದು ಬಿಟ್ಟರೆ ಉಳಿದ ಕಡೆ ಮತದಾನ ಪ್ರಕ್ರಿಯೆ ಶಾಂತಿಯುತವಾಗಿತ್ತು…!!
ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ರಾಜ್ಯಗಳಲ್ಲಿ ಶುಕ್ರವಾರ ಲೋಕಸಭಾ ಚುನಾವಣೆಯ ಜೊತೆಗೆ ವಿಧಾನಸಭಾ ಚುನಾವಣೆಗೂ ಮತದಾನ ನಡೆದಿದೆ. ಈ ರಾಜ್ಯಗಳಲ್ಲಿ ಕ್ರಮವಾಗಿ ಶೇಕಡಾ 68 ಮತ್ತು 68.3 ರಷ್ಟು ಮತದಾನವಾಗಿದೆ…!
ಒಂದೇ ದಿನದ ಮತದಾನ ಇರುವ ಅಪರೂಪದ ರಾಜ್ಯಗಳಲ್ಲಿ ಒಂದಾದ ತಮಿಳುನಾಡಿನಲ್ಲಿ ಶೇಕಡಾ 67.2 ರಷ್ಟು ಮತದಾನವಾಗಿದೆ…!!
ರಾಜಸ್ಥಾನದಲ್ಲಿ ಅರ್ಧದಷ್ಟು ಲೋಕಸಭಾ ಸ್ಥಾನಗಳಿಗೆ ಶುಕ್ರವಾರ ಮತದಾನವಾಗಿದ್ದು, ಶೇ. 57.3 ರಷ್ಟು ಮತದಾನವಾಗಿದೆ…!
ಬಿಜೆಪಿ ಪ್ರಾಬಲ್ಯವಿರುವ ಈಶಾನ್ಯ ರಾಜ್ಯಗಳಲ್ಲಿ ಅಸ್ಸಾಂ ಶೇಕಡಾ 72.3, ಮೇಘಾಲಯ ಶೇಕಡಾ74.5, ಮಣಿಪುರ ಶೇಕಡಾ 69.2, ಅರುಣಾಚಲ ಪ್ರದೇಶದಲ್ಲಿ ಶೇಕಡಾ 67.7 ಮತ್ತು ತ್ರಿಪುರದಲ್ಲಿ ಶೇಕಡಾ 80.6ರಷ್ಟು ಮತದಾನವಾಗಿದೆ…!!
ಪುದುಚೇರಿಯಲ್ಲಿ ಶೇಕಡೋ 73.25ರಷ್ಟು ಮತದಾನವಾಗಿದೆ. ಬಿಹಾರದಲ್ಲಿ ಅತಿ ಕಡಿಮೆ ಮತದಾನವಾಗಿದ್ದು, ನಾಲ್ಕು ಕ್ಷೇತ್ರಗಳಲ್ಲಿ ಕೇವಲ 47.49 ಪ್ರತಿಶತ ಮತದಾರರು ಮತದಾನ ಮಾಡಿದ್ದಾರೆ…!