
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಟ್ಟು ಪಿತ್ರಾರ್ಜಿತ ಆಸ್ತಿಯಲ್ಲಿ ಕೇವಲ 45% ಮಾತ್ರ ಮಕ್ಕಳಿಗೆ ಪಾಲು, ಉಳಿದ 55% ಆಸ್ತಿ ಸರ್ಕಾರ ತೆರಿಗೆ ರೂಪದಲ್ಲಿ ವಶಪಡಿಸಿ ಕೊಳ್ಳುವ ಕಾನೂನು ರೂಪಿಸುವುದಾಗಿ ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡ ಹೇಳಿದ್ದಾರೆ…!
ಕಾಂಗ್ರೆಸ್ ಗೆ ಬಿಸಿತುಪ್ಪ – ಕಾಂಗ್ರೆಸ್ನ ಹಿರಿಯ ನಾಯಕ, ರಾಹುಲ್ ಗಾಂಧಿ ಆಪ್ತ ಸ್ಯಾಮ್ ಪಿತ್ರೋಡಾ ಲೋಕಸಭೆ ಚುನಾವಣೆ ಹೊತ್ತಲ್ಲೇ ಎಎನ್ಐಗೆ ನೀಡಿರುವ ಸಂದರ್ಶನದಲ್ಲಿ ಪಿತ್ರಾರ್ಜಿತ ಆಸ್ತಿಯಲ್ಲಿ ಮಕ್ಕಳಿಗೆ ನೂರಕ್ಕೆ ನೂರು ಹಕ್ಕು ಲಭಿಸದಂತೆ ತೆರಿಗೆ ವಿಧಿಸುವ ಕುರಿತು ನೀಡಿರುವ ಹೇಳಿಕೆ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಯಲ್ಲಿ ತಿರುಗುಬಾಣವಾಗುವ ಆತಂಕ ತಂದೊಡ್ಡಿದೆ. ಅಮೆರಿಕದಲ್ಲಿರುವ ಪಿತ್ರಾರ್ಜಿತ ತೆರಿಗೆ ಪದ್ಧತಿ ನ್ಯಾಯಯುತ ಕಾನೂನಾಗಿದೆ. ನಿಮ್ಮ ಪೀಳಿಗೆಯಲ್ಲಿ ನೀವು ಸಂಪತ್ತನ್ನು ಸೃಷ್ಟಿಸಿದರೆ, ನೀವು ಸಾಯುವಾಗ ಅರ್ಧದಷ್ಟು ಅಸ್ತಿಯನ್ನು ಸಾರ್ವಜನಿಕರಿಗೆ ಬಿಟ್ಟು ಕೊಡಬೇಕು. ಆದರೆ ಭಾರತದಲ್ಲಿ ಈ ಕಾನೂನು ಇಲ್ಲ. ಇಲ್ಲಿ 10 ಬಿಲಿಯನ್ ಹೊಂದಿರುವ ವ್ಯಕ್ತಿ ಮೃತಪಟ್ಟರೆ ಆತನ ಮಕ್ಕಳಿಗೇ ಎಲ್ಲ 10 ಬಿಲಿಯನ್ ಹಣ ಹೋಗುತ್ತದೆ. ಸಾರ್ವಜನಿಕರಿಗೆ ಏನೂ ಸಿಗುವುದಿಲ್ಲ. ಸಂಪತ್ತಿನ ಸಮಾನ ಹಂಚಿಕೆಗೆ ಅಮೆರಿಕ ಪಿತ್ರಾರ್ಜಿತ ತೆರಿಗೆ ಪದ್ಧತಿ ಸರಿಯಾದ ನಿದರ್ಶನ ಎಂದು ಪಿತ್ರೋಡಾ ವ್ಯಾಖ್ಯಾನಿಸಿದ್ದರು…!!
ಸತ್ತ ಮೇಲೂ ಕಾಂಗ್ರೆಸ್ ನಿಮ್ಮನ್ನು ಲೂಟಿ ಮಾಡುತ್ತೆ – ಮೋದಿ
ಸ್ಯಾಮ್ ಪಿತ್ರೋಡಾ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ. ನೀವು ಬದುಕಿದ್ದಾಗ ಮಾತ್ರವಲ್ಲ, ನಿಮ್ಮ ಜೀವನ ಮುಗಿದ ಬಳಿಕವೂ ಕಾಂಗ್ರೆಸ್ ನಿಮ್ಮನ್ನು ಲೂಟಿ ಮಾಡುತ್ತದೆ. ನಿಮ್ಮ ಆಸ್ತಿ ಕಸಿದುಕೊಂಡು ಯಾರಿಗೆ ಕೊಡುತ್ತಾರೆ ಗೊತ್ತಾ…? ನಾನು ಹೇಳುವ ಅಗತ್ಯವಿಲ್ಲ. ಆದರೆ ಈ ಪಾಪ ಮಾಡಲು ಅವರಿಗೆ ಅವಕಾಶ ಮಾಡಿಕೊಡಬೇಡಿ. ಅವರ ಈ ಯೋಜನೆ ಯಶಸ್ವಿಯಾಗಲ್ಲ ಎಂದಿದ್ದಾರೆ…!