
ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆಯಾಗುತ್ತಲೇ ಏಕರೂಪ ನಾಗರಿಕ ಸಂಹಿತೆ ಕಾನೂನು ಜಾರಿ ಮಾಡಲಾಗುತ್ತದೆ, ಇದು ಮೋದಿ ಕಿ ಗ್ಯಾರಂಟಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ…!
ಅಲ್ಲದೆ ವೈಯಕ್ತಿಕ ವೈವಾಹಿಕ ಕಾನೂನು ಜಾರಿ ಮಾಡಲು ಕಾಂಗ್ರೆಸ್ ನಾಯಕ “ರಾಹುಲ್ ಬಾಬಾ”ಗೆ (ರಾಹುಲ್ ಗಾಂಧಿ ಗೆ) ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ…!!
ಕಾಂಗ್ರೆಸ್ ಪ್ರಕಾರ ದೇಶದ ಸಂಪನ್ಮೂಲದ ಮೇಲೆ ಮೊದಲ ಹಕ್ಕು ಇರುವುದು ಮುಸ್ಲಿಮರಿಗೆ, ಆದರೆ ಬಿಜೆಪಿ ಪ್ರಕಾರ ಮೊದಲ ಹಕ್ಕು ಇರುವುದು ಬಡವರು, ದಲಿತರು, ಇತರ ಹಿಂದುಳಿದ ವರ್ಗಗಳು ಹಾಗೂ ಬುಡಕಟ್ಟು ಜನರಿಗೆ ಎಂದು ಅವರು ಹೇಳಿದರು…!
ಮಧ್ಯಪ್ರದೇಶದ ಗುನಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಅವರನ್ನು ಬೆಂಬಲಿಸಿ ಇಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಅವರು ಮಾತನಾಡಿದರು…!!
ಚುನಾವಣಾ ಪ್ರಚಾರ ಸಭೆಯಲ್ಲಿ ಭಾಷಣ ಮಾಡಿದ ಅಮಿತ್ ಶಾ, ರಾಹುಲ್ ಬಾಬಾ, ನೀವು ಓಲೈಕೆಗಾಗಿ ಏನು ಬೇಕಾದರೂ ಮಾಡಿ. ಆದರೆ ಬಿಜೆಪಿ ಎಲ್ಲಿ ತನಕ ಅಧಿಕಾರದಲ್ಲಿ ಇರುತ್ತದೆಯೋ ಅಲ್ಲಿಯವರೆಗೆ ನಿಮ್ಮ ವೈಯುಕ್ತಿಕ ಕಾನೂನುಗಳನ್ನು (ಮುಸ್ಲಿಂ ಪರ ಕಾನೂನು) ಜಾರಿಗೆ ತರುವುದಕ್ಕೆ ಆಗುವುದಿಲ್ಲ. ಇದು ನಮ್ಮ ಭರವಸೆ. ದೇಶದಲ್ಲಿ ಮೋದಿ ಅಧಿಕಾರಕ್ಕೆ ಬಂದರೆ ಉತ್ತರಾಖಂಡ್ ನಲ್ಲಿ ಜಾರಿಗೆ ತಂದಂತೆ ಏಕರೂಪ ನಾಗರಿಕ ರೂಪ ಸಂಹಿತೆಯನ್ನು ದೇಶದೆಲ್ಲಡೆ ಜಾರಿಗೆ ತರುತ್ತೇವೆ. ಇದು ‘ಮೋದಿ ಗ್ಯಾರಂಟಿ’ ಎಂದು ಶಾ ಗುಡುಗಿದರು…!