
ಸಿಲಿಕಾನ್ ಸಿಟಿ ಬೆಂಗಳೂರು, ಸರ್ಕಾರದ ಖಜಾನೆ ತುಂಬಿಸುವ ನಗರಿ. ಐಟಿ ಬಿಟಿ ಕಂಪನಿಗಳ ನೆಲೆಬೀಡು, ವಿದ್ಯಾವಂತರೇ ತುಂಬಿರೋ ಮಯಾನಗರಿ ಬೆಂಗಳೂರು, ಆದರೆ ಬೆಂಗಳೂರಿನಲ್ಲಿ ಈ ಬಾರಿಯೂ ಮತದಾನ ಕಡಿಮೆಯಾಗಿದೆ, ಇದರಿಂದ ಆಕ್ರೋಶಗೊಂಡ ಕೆಲವರು ಮತದಾನ ಮಾಡದವರು ಬದುಕಿದ್ದು ಸತ್ತಂತೆ ಅಂತ ಬ್ಯಾನರ್ ಹಾಕಿದ್ದಾರೆ…!
ಲೋಕಸಭೆ ಚುನಾವಣೆಯ ಎರಡನೇ ಹಂತದಲ್ಲಿ ರಾಜ್ಯದ 14 ಕ್ಷೇತ್ರಗಳಲ್ಲಿ ಮತದಾನ ಶುಕ್ರವಾರ ನಡೆಯಿತು, ಬೆಂಗಳೂರಿನಲ್ಲಿ ಪ್ರತಿ ಬಾರಿಯಂತೆ ಕಡಿಮೆ ಮತದಾನವಾಗಿದೆ, ಇದರಿಂದ ಆಕ್ರೋಶಗೊಂಡ ಕೆಲವರು ಮತದಾನ ಮಾಡದವರು ಬದುಕಿದ್ದು ಸತ್ತಂತೆ ಅಂತ ರಸ್ತೆ ಬದಿಗಳಲ್ಲಿ ಬ್ಯಾನರ್ ಹಾಕಿದ್ದಾರೆ, “ಚುನಾವಣಾ ಆಯೋಗ ಅಷ್ಟೊಂದು ಪ್ರಚಾರ ಮಾಡಿದ ನಂತರವೂ ಮತದಾನದಿಂದ ದೂರ ಉಳಿದು ಬದುಕಿದ್ದರೂ ಸತ್ತಂತೆ ವರ್ತಿಸಿದ ಬೆಂಗಳೂರು ನಗರದ ಸುಶಿಕ್ಷತ ಸತ ಪ್ರಜೆಗಳಿಗೆ ನಮ್ಮ ಶ್ರದ್ಧಾಂಜಲಿಗಳು” ಎಂದು ಬ್ಯಾನರ್ ಹಾಕಿದ್ದಾರೆ…!!
“ಪ್ರತಿ ಸಲದಂತೆ 2024ರ ಲೋಕಸಭಾ ಚುನಾವಣೆಯಲ್ಲೂ ವಲಸಿಗರು ಕೈ ಕೊಟ್ಟಿದ್ದಾರೆ, ಬೆಂಗಳೂರಿನಲ್ಲಿ ಮತದಾನ ಮಾಡುವ ಹಕ್ಕಿದ್ದರೂ ಮತ ಹಾಕಿಲ್ಲ, ಇವರು ಬದುಕಿದ್ದು ಸತ್ತಂತೆ” ಎಂದು ಹೆಸರು ಹೇಳಲು ಇಚ್ಚಿಸಿದ ವ್ಯಕ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ…!