
ನವ ದೆಹಲಿ : ಲೋಕಸಭಾ ಚುನಾವಣೆ ನಂತರ ನಡೆದ ಮೊದಲ ಚುನಾವಣೆ ಏಳು ರಾಜ್ಯದ 13 ವಿಧಾನಸಭಾ ಕ್ಷೇತ್ರದ ಉಪಚುನಾವಣೆಗಳು ಉಪ ಚುನಾವಣೆಯ ಮತ ಎಣಿಕೆ ಶನಿವಾರ ನಡೆಯುತ್ತಿದ್ದು, ಐಎನ್ಡಿಐಎ ಮೈತ್ರಿಕೂಟವು 10 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಜತೆಗೆ ಪಂಜಾಬ್ನ ಜಲಂಧರ್ ಪಶ್ಚಿಮ ವಿಧಾನಸಭೆ ಕ್ಷೇತ್ರದಲ್ಲಿ ಈಗಾಗಲೇ ಆಮ್ ಆದ್ಮಿ ಪಕ್ಷ ಗೆಲುವಿನ ನಗೆ ಬೀರಿದೆ. ಎನ್ಡಿಎ ಮೈತ್ರಿಕೂಟ ಕೇವಲ ಎರಡು ಸ್ಥಾನಗಳಲ್ಲಿ ಮುನ್ನಡೆ ಪಡೆದಿದೆ.
13 ಕ್ಷೇತ್ರಗಳ ಪೈಕಿ ಈಗಾಗಲೇ ಹಲವು ಕ್ಷೇತ್ರಗಳ ಫಲಿತಾಂಶ ಹೊರಬಿದ್ದಿದೆ. ಕಾಂಗ್ರೆಸ್ 2ರಲ್ಲಿ ಗೆಲುವು ಸಾಧಿಸಿದ್ದು 2 ಸ್ಥಾನಗಳಲ್ಲಿ ಮುಂದಿದೆ. ಟಿಎಂಸಿ (TMC) 3 ಸ್ಥಾನ ಗೆದ್ದಿದ್ದು, 1 ಕ್ಷೇತ್ರದಲ್ಲಿ ಮುಂದಿದೆ. ಪಶ್ಚಿಮ ಜಾರ್ಜಂಡ್ ಕ್ಷೇತ್ರವನ್ನು ಆಪ್ (AAP) ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಬಿಜೆಪಿ ಒಂದು ಸ್ಥಾನ ಮಾತ್ರ ಗೆದ್ದುಕೊಂಡಿದ್ದು, ಉಳಿದ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಿದೆ. ತಮಿಳುನಾಡಿನ ಒಂದು ಕ್ಷೇತ್ರದಲ್ಲಿ ಡಿಎಂಕೆ ಮುನ್ನಡೆ ಕಾಯ್ದುಕೊಂಡಿದ್ದು, ಬಿಜೆಪಿ ಹಿನ್ನಡೆ ಅನುಭವಿಸಿದೆ.
ಪಂಜಾಬ್ನಲ್ಲಿ ಆಪ್ನ ಮೊಹಿಂದರ್ ಭಗತ್ ಅವರು ಜಲಂಧರ್ ಪಶ್ಚಿಮ ಕ್ಷೇತ್ರದಲ್ಲಿ 23,000 ಮತಗಳ ಅಂತರದಿಂದ ಗೆದ್ದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಈಗಾಗಲೇ ಮೂರು ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಕಂಡಿದ್ದು, ಒಂದು ಕ್ಷೇತ್ರದಲ್ಲಿ ಮುನ್ನಡೆ ಸಾಧಿದಿದೆ. ಇಂಡಿಯಾ ಮೈತ್ರಿಕೂಟ ಸ್ಪರ್ಧಿಸಿರುವ ಕ್ಷೇತ್ರಗಳಲ್ಲಿ ಬಿಜೆಪಿ ತೀವ್ರ ಹಿನ್ನಡೆ ಅನುಭವಿಸಿದೆ.
ಚುನಾವಣಾ ಫಲಿತಾಂಶದ ಬಗ್ಗೆ ಎಎಪಿ ಸಂಸದ ಸಂಜಯ್ ಸಿಂಗ್ ಪ್ರತಿಕ್ರಿಯೆ ನೀಡಿದ್ದು, ‘ಇಂದು ಜಲಂಧರ್ ಉಪಚುನಾವಣೆ ಫಲಿತಾಂಶ ಬಂದಿದೆ. ಸುಮಾರು 38 ಸಾವಿರ ಮತಗಳಿಂದ ಗೆದ್ದಿದ್ದೇವೆ. ಪಂಜಾಬ್ ಜನತೆ ನಮ್ಮೊಂದಿಗಿದ್ದಾರೆ. ಇಡೀ ದೇಶದಲ್ಲಿ ಇಂಡಿಯಾ ಮೈತ್ರಿಕೂಟ ಗೆಲ್ಲುತ್ತಿದೆ. ಸಾರ್ವಜನಿಕರು ಪೊಳ್ಳು ಭರವಸೆಗಳು ಮತ್ತು ಸುಳ್ಳುಗಳಿಂದ ಬೇಸತ್ತಿದ್ದಾರೆ ಎಂಬುದನ್ನು ಬಿಜೆಪಿ ಅರ್ಥಮಾಡಿಕೊಳ್ಳಬೇಕು. ಇಂದು ದೇಶದಲ್ಲಿ ಯುವಕರು ಸಂಕಷ್ಟದಲ್ಲಿದ್ದಾರೆ.
ಇನ್ನು ಹಿಮಾಚಲ ಪ್ರದೇಶ ಡೆಹ್ರಾದಲ್ಲಿ ಕಾಂಗ್ರೆಸ್ 25 ವರ್ಷಗಳ ನಂತರ ವಿಜಯ ಪತಾಕೆಯನ್ನು ಹಾರಿಸಿದೆ. ಹಮೀರ್ಪುರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಆಶಿಶ್ ಶರ್ಮಾ 1433 ಮತಗಳಿಂದ ಜಯಗಳಿಸಿದ್ದಾರೆ. ನಲಗಢದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಾವಾ ಹರ್ದೀಪ್ ಸಿಂಗ್ ಗೆಲುವು ಸಾಧಿಸಿದ್ದಾರೆ
ಪಶ್ಚಿಮ ಬಂಗಾಳದಲ್ಲಿ 4 ಸ್ಥಾನಗಳಲ್ಲೂ ಟಿಎಂಸಿ ಕ್ಲೀನ್ ಸ್ವಿಪ್ ಮಾಡಿದ್ದು, ಬಿಜೆಪಿಗೆ ತೀವ್ರ ಮುಖಭಂಗ ಉಂಟಾಗಿದೆ. ರಾಯಗಂಜ್ ಕ್ಷೇತ್ರದಲ್ಲಿ ಟಿಎಂಸಿ ಅಭ್ಯರ್ಥಿ ಕೃಷ್ಣ ಕಲ್ಯಾಣಿ ಬಿಜೆಪಿ ಅಭ್ಯರ್ಥಿಯನ್ನು 49536 ಮತಗಳಿಂದ ಸೋಲಿಸಿದ್ದಾರೆ. ರಣಘಟ್ಟ ದಕ್ಷಿಣದಲ್ಲಿ ಟಿಎಂಸಿ ಅಭ್ಯರ್ಥಿ ಗೆಲುವು ದಾಖಲಿಸಿದ್ದು, ಬಗ್ಡಾದಲ್ಲಿ ಟಿಎಂಸಿ ಅಭ್ಯರ್ಥಿ ಗೆದಿದ್ದಾರೆ. ಇನ್ನು ಮಾಣಿಕ್ತಾಲಾ ಕ್ಷೇತ್ರದಲ್ಲಿ ಸಹ 11 ಸುತ್ತಿನ ಮತದಾನದ ನಂತರ, ಟಿಎಂಸಿ ಅಭ್ಯರ್ಥಿ ಸುಪ್ತಿ ಪಾಂಡೆ ಭರ್ಜರಿ ಜಯ ಸಾಧಿಸಿದ್ದಾರೆ.
ಈ ಚುನಾವಣೆ ಫಲಿತಾಂಶದ ನಂತರ NDA ಮೈತ್ರಿಕೂಟಕ್ಕೆ ಭಾರಿ ಆಘಾತವಾಗಿದೆ ದೇಶದಲ್ಲಿ INDA ಮೈತ್ರಿ ಕೂಟ ಬಲಿಷ್ಠವಾಗುತಿದೆ ಇನ್ನು ಮುಂದಿನ ದಿನಗಳಲ್ಲಿ ಯಾವ ರೀತಿಯ ರಾಜಕೀಯ ಬದಲಾವಣೆಗಳು ದೇಶದಲ್ಲಿ ಆಗಲಿದೆ ಅನ್ನೋದು ಕಾದು ನೋಡಬೇಕಾಗಿದೆ.