
ಭೋಜನಕ್ಕೆ ಕುಳಿತುಕೊಂಡ ಮೇಲೆ ಮುಂದಿನ ಶ್ಲೋಕವನ್ನು ಭಕ್ತಿಯಿಂದ ಪಠಿಸಬೇಕು…!
ಅನ್ನಪೂರ್ಣೆ ಸದಾಪೂರ್ಣೆ ಶಂಕರ ಪ್ರಾಣ ವಲ್ಲಭೆ |
ಜ್ಞಾನ ವೈರಾಗ್ಯ ಸಿಧ್ಯರ್ಥಂ ಭಿಕ್ಷಾಂ ದೇಹಿ ಚ ಪಾರ್ವತೀ ||
ಈ ಶ್ಲೋಕದಲ್ಲಿ ಪಾರ್ವತಿದೇವಿಯ ಅವತಾರವಾದ ಅನ್ನಪೂರ್ಣಾ ಮಾತೆಯನ್ನು ಸಂಬೋಧಿಸಿ, ತಟ್ಟೆಯಲ್ಲಿರುವ ಅನ್ನವನ್ನು ಅವಳು ದಯಪಾಲಿಸಿದ ಭಿಕ್ಷೆಯೆಂದು ಸ್ವೀಕರಿಸಲಾಗುತ್ತದೆ…!
ಇದರಿಂದ ಅನ್ನದ ಬಗ್ಗೆ ಗೌರವ ಮತ್ತು ಕೃತಜ್ಞತೆಯ ಭಾವ ನಿರ್ಮಾಣವಾಗಲು ಸಹಾಯವಾಗುತ್ತದೆ…!!
ನಾವು ಆಹಾರವಾಗಿ ಸ್ವೀಕರಿಸುವ ಎಲ್ಲವೂ ಪ್ರಕೃತಿಯಿಂದ ಬಂದಿದೆ ಮತ್ತು ಅದಕ್ಕಾಗಿ ನಾವು ಪ್ರಕೃತಿಗೆ ಕೃತಜ್ಞರಾಗಿರಬೇಕು…!
ಹಿಂದೂ ಧರ್ಮದಲ್ಲಿ, ಪ್ರತಿಯೊಂದು ಕಣದಲ್ಲೂ ದೇವರು ನೆಲೆಸಿದ್ದಾನೆ ಎಂದು ನಾವು ನಂಬುತ್ತೇವೆ, ಆದ್ದರಿಂದ ನಾವು ಎಲ್ಲವನ್ನೂ ಗೌರವಿಸುತ್ತೇವೆ…!!
ನಾವು ಆಹಾರವನ್ನು ದೇವತೆ ಎಂದು ಪರಿಗಣಿಸುತ್ತೇವೆ ಮತ್ತು ಅದನ್ನು ಸೇವಿಸುವ ಮೊದಲು ಆಹಾರ ಮಂತ್ರವನ್ನು ಪಠಿಸುತ್ತೇವೆ…!
ಆಹಾರ ಮಂತ್ರವು ನಮಗೆ ಆಹಾರವನ್ನು ಒದಗಿಸಿದ್ದಕ್ಕಾಗಿ ದೇವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವುದಾಗಿದೆ ಮತ್ತು ಇತರರೊಂದಿಗೆ ಹಂಚಿಕೊಳ್ಳುವ ಬಯಕೆಯನ್ನು ವ್ಯಕ್ತಪಡಿಸುತ್ತದೆ…!!