
ಬೆಂಗಳೂರು: ಬೆಂಗಳೂರಿನ ಸರ್ಜಾಪುರದ ದಂಪತಿಗಳು
ಅಮೆಜಾನ್ ನಲ್ಲಿ ಎಕ್ಸ್ಬಾಕ್ಸ್ ಕಂಟ್ರೋಲರ್ ಬುಕ್ ಮಾಡಿದ್ದ ದಂಪತಿಗಳು ಪಾರ್ಸೆಲ್ ತೆರೆಯುತ್ತಿದ್ದಂತೆ ಬೆಚ್ಚಿ ಬಿದ್ದಿದ್ದಾರೆ.
ಪಾರ್ಸೆಲ್ ಬಾಕ್ಸ್ ಓಪನ್ ಮಾಡುತ್ತಿದ್ದಂತೆ ಬುಸುಗುಟ್ಟುತ್ತಿರುವ ಹಾವು ಬೆಚ್ಚಿಬಿದ್ದ ದಂಪತಿಗಳು ತಮಗಾದ ಈ ಅನುಭವವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರಿನ ಕಾಸಿಗೆ ಸಂಸ್ಥೆ ಒಂದರಲ್ಲಿ ಸಾಫ್ಟ್ವೇರ್ ಉದ್ಯೋಗದಲ್ಲಿರುವ ಈ ದಂಪತಿ ವಾರದ ಹಿಂದೆಯಷ್ಟೇ ಅಮೆಜಾನ್ನಲ್ಲಿ ಎಕ್ಸ್ಬಾಕ್ಸ್ ಕಂಟ್ರೋಲರ್ ಆರ್ಡರ್ ಮಾಡಿದ್ದರು. ಅದರಂತೆ ಪಾರ್ಸೆಲ್ ಮನೆ ಬಾಗಿಲಿಗೆ ಬಂದು ತಲುಪಿದೆ. ಪಾರ್ಸೆಲ್ ಓಪನ್ ಮಾಡುತ್ತಿದ್ದಂತೆ ಅದರೊಳಗೆ ಎಕ್ಸ್ಬಾಕ್ಸ್ ಕಂಟ್ರೋಲರ್ ಬದಲಾಗಿ ನಾಗರಹಾವೊಂದು ಹೆಡೆ ಎತ್ತಿ ನಿಂತಿದೆ.
ನಂತರ ದಂಪತಿಗಳು ಅದನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ನಂತರ ದಂಪತಿಗಳು ಅಮೆಜಾನ್ ಗೆ ದೂರು ನೀಡಿದ್ದರು ಅಮೆಜಾನ್ ದಂಪತಿಗಳಿಗೆ ಹಣವನ್ನು ಹಿಂತಿರುಗಿಸಿದೆ ಆದರೆ ಪಾರ್ಸಲ್ನಲ್ಲಿ ಹಾವು ಇದ್ದಿದ್ದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.