
ಬೆಂಗಳೂರು: ಒಂದು ಕಡೆ ದೇಶದಲ್ಲಿ ಲೋಕಸಭಾ ಚುನಾವಣೆಯ ಕಾವು ರಂಗೇರಿದ್ದು ಇನ್ನೊಂದು ಕಡೆ ರಾಜ್ಯದಲ್ಲಿ ವಿಧಾನ ಪರಿಷತ್ ಕಾವು ಕೂಡ ರಂಗೇರುತ್ತಿದೆ ದಿನೇ ದಿನೇ.
ಆಕಾಂಕ್ಷಿಗಳಿಗೆ ಕೈ ತಪ್ಪಿದ ಅವಕಾಶ ಅವಕಾಶ ಕೈತಪ್ಪಿದ್ದಕ್ಕೆ ಮೇಲ್ಮನೆ ಚುನಾವಣೆಯಲ್ಲಿ ಕೆಲವು ಕ್ಷೇತ್ರದಲ್ಲಿ ಬಂಡಾಯವಾಗಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಮನವೊಲಿಸುವ ಪ್ರಯತ್ನಕ್ಕೆ ವೇಗ ಕೊಟ್ಟ ಬಿಜೆಪಿ ನಾಯಕರು , ಕೆಲವರು ನಾಮಪತ್ರ ಹಿಂಪಡೆಯುವುದಾಗಿ ಹೇಳಿರುವುದು ನಾಯಕರಿಗೆ ಸಮಾಧಾನ ಮೂಡಿಸಿದೆ.
ವಿಧಾನ ಪರಿಷತ್ ಚುನಾವಣೆಯಲ್ಲಿ ಕೆಲವು ಕ್ಷೇತ್ರದಲ್ಲಿ ಬಂಡಾಯವಾಗಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಮನವೊಲಿಕೆ ಕಾರ್ಯಕ್ಕೆ ವೇಗ ಕೊಟ್ಟ ಬಿಜೆಪಿ ನಾಯಕರು ಬಿಜೆಪಿ ನಾಯಕರಾ ಈ ಪ್ರಯತ್ನಕ್ಕೆ ಮೊದಲ ಯಶಸ್ಸು ಸಿಕ್ಕಿದೆ.
ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುರೇಶ್ ಸಜ್ಜನ್ ಅವರು ನಾಮಪತ್ರ ಹಿಂತೆಗೆದುಕೊಳ್ಳಲು ಒಪ್ಪಿದ್ದಾರೆ. ಇನ್ನೋರ್ವ ನಿಂಗರಾಜು ಈಗಾಗಲೇ ನಾಮಪತ್ರ ಹಿಂಪಡೆಯಲು ತೀರ್ಮಾನಿಸಿದ್ದು, ರಘುಪತಿ ಭಟ್ ಅವರ ಮನವೊಲಿಕೆ ಪ್ರಯತ್ನವೂ ನಡೆಯುತ್ತಿದೆ.
ಲಿಂಗರಾಜು ಅವರನ್ನು ದಕ್ಷಿಣ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಹೆಸರನ್ನು ಘೋಷಿಸಲಾಗಿತ್ತು. ನಂತರ ಜೆಡಿಎಸ್ ಗೆ ಬಿಜೆಪಿ ಆ ಕ್ಷೇತ್ರ ಬಿಟ್ಟು ಕೊಟ್ಟಿತ್ತು . ಇದೀಗ ನಾಮಪತ್ರ ಸಲ್ಲಿಸಿದ್ದ ಲಿಂಗರಾಜು ಅವರ ಮನವೊಲಿಸಲಾಗಿದೆ,” ಎಂದು ವಿಜಯೇಂದ್ರ ಹೇಳಿದರು.
ಯಡಿಯೂರಪ್ಪ ಹಾಗೂ ಬಿಜೆಪಿಯ ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ ಬಳಿಕ ಮಾತನಾಡಿದ ಮಾಧ್ಯಮದವರಿಗೆ ಪ್ರತಿಕ್ರಯಿಸಿದ ಸುರೇಶ್ ಸಜ್ಜನ್, ಪಕ್ಷ ನನ್ನ ಸೇವೆಯನ್ನು ಮುಂದೆ ಗುರುತಿಸಲಿದೆ ಎಂದು ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ. ಜತೆಗೆ ಅಭ್ಯರ್ಥಿ ಅಮರನಾಥ ಪಾಟೀಲ್ ಅವರನ್ನು ಬೆಂಬಲಿಸುವಂತೆ ಪಕ್ಷದ ಹಿರಿಯ ನಾಯಕರು ಸೂಚಿಸಿದ್ದಾರೆ. ಪಕ್ಷದ ಸೂಚನೆಯಂತೆ ಸೋಮವಾರ ನಾಮಪತ್ರ ಹಿಂಪಡೆಯಲಿದ್ದೇನೆ,”
ರಾಜ್ಯಾಧ್ಯಕ್ಷರು ಪಕ್ಷಕ್ಕಾಗಿ ಮಾಡುತ್ತಿರುವ ಹೋರಾಟ, ಸಂಘಟನಾ ಕಾರ್ಯಕ್ಕೆ ಅವರು ಮೆಚ್ಚುಗೆ ಸೂಚಿಸಿದರು. ನನಗೆ ಟಿಕೆಟ್ ಮುಖ್ಯವಲ್ಲ. ಪಕ್ಷದ ಅಭ್ಯರ್ಥಿಯ ಗೆಲುವೇ ಮುಖ್ಯ ಎಂದು ಅವರು ನುಡಿದರು. ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಮುಂದೆ ಮುಖ್ಯಮಂತ್ರಿಯಾಗಲು ಅವರ ಕೈ ಬಲಪಡಿಸುವ ಅಗತ್ಯವಿದೆ. ಅಮರನಾಥ ಪಾಟೀಲ ಅವರ ಗೆಲುವಿಗೆ ನಾವೆಲ್ಲರೂ ಶ್ರಮಿಸುತ್ತೇವೆ ಎಂದು ಹೇಳಿದರು.
ಇನ್ನು ನೈಋುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಆಕಾಂಕ್ಷಿಯಾಗಿದ್ದ ಮಾಜಿ ಶಾಸಕ ರಘುಪತಿ ಭಟ್ ಅವರು ದೊಡ್ಡ ಪ್ರಮಾಣದಲ್ಲಿ ಮತದಾರರ ನೋಂದಣಿ ಮಾಡಿಸಿದ್ದರು. ಆದರೆ, ನಾಯಕರು ಮಕ್ಕಳ ತಜ್ಞ ಡಾ ಧನಂಜಯ ಸರ್ಜಿಗೆ ಮಣೆ ಹಾಕಿದ್ದಾರೆ. ಇದರಿಂದ ಅಸಮಾಧಾನ ಗೊಂಡ ರಘುಪತಿ ಭಟ್ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಹೇಳಿ ಮೊನ್ನೆ ನಾಮಪತ್ರ ಕೂಡ ಸಲ್ಲಿಸಿದ್ದಾರೆ. ಇದೀಗ ಬಿಜೆಪಿಗೆ ಬಿಸಿ ತುಪ್ಪವಾದ ರಘುಪತಿ ಭಟ್ಟರ ಮನವೊಲಿಸುವ ಪ್ರಯತ್ನ ಮುಂದುವರಿಸಿದ ಬಿಜೆಪಿ ನಾಯಕರು ಎಷ್ಟರಮಟ್ಟಿಗೆ ಇದು ಸಕ್ಸಸ್ ಆಗುತ್ತೆ ಅನ್ನೋದು ಇನ್ನೂ ಕಾಯಬೇಕಾಗಿದೆ.