Army Public School Recruitment: ಆರ್ಮಿ ಪಬ್ಲಿಕ್ ಸ್ಕೂಲ್ ನಲ್ಲಿ ಬೃಹತ್ ನೇಮಕಾತಿ 8,000 ಟೀಚರ್ಸ್ ಹಾಗೂ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

Army Public School Recruitment 2024: ನಮಸ್ತೆ ಸ್ನೇಹಿತರೆ ಟೀಚರ್ಸ್ ಹುದ್ದೆಗಳಿಗಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಭಾರತೀಯ ಸೇನೆ ಬಂಪರ್ ಆಫರ್ ನೀಡಿದೆ ಭಾರತೀಯ ಸೇನಾ ಸಿಬ್ಬಂದಿ ಮಕ್ಕಳಿಗೆ ಶಿಕ್ಷಣ ನೀಡಲು ಆರ್ಮಿ ಪಬ್ಲಿಕ್ ಸ್ಕೂಲ್ ಗಳಲ್ಲಿ ಸುಮಾರು ಎಂಟು ಸಾವಿರಕ್ಕೂ ಅಧಿಕ ಪೋಸ್ಟ್ ಗಳಿಗೆ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ.

ಹೌದು ಸ್ನೇಹಿತರೆ, ಭಾರತೀಯ ಸೇನೆ ತಮ್ಮ ಸಿಬ್ಬಂದಿಗಳ ಮಕ್ಕಳಿಗಾಗಿ ಶಿಕ್ಷಣ ನೀಡುವ ಒಂದು ಉದ್ದೇಶದಿಂದ ಆರ್ಮಿ ವೆಲ್ಫೇರ್ ಎಜುಕೇಶನ್ ಸೊಸೈಟಿಯ ವ್ಯಾಪ್ತಿಯಲ್ಲಿ ಇರುವ ಆರ್ಮಿ ಪಬ್ಲಿಕ್ ಸ್ಕೂಲ್ ಗೆ ಟೀಚರ್ಸ್ ಹಾಗೂ ಇನ್ನಿತರ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಹಾಗೂ ಆಸಕ್ತಿ ಇರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ ನೀಡಲಾಗಿದೆ ಅಂತಿಮ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕಾಗುತ್ತದೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಇಲಾಖೆ ನೀಡಿರುವ ಗೆಲ್ಲ ಅರ್ಜಿ ಫಾರ್ಮ್ ಗಳನ್ನು ಹಾಗೂ ಅರ್ಜಿಯ ರೀತಿಗಳನ್ನು ಸೂಕ್ಷ್ಮವಾಗಿ ಗಮನಿಸಿ ಅರ್ಜಿಯನ್ನು ಸಲ್ಲಿಸತಕ್ಕದ್ದು.

ಟೀಚರ್ಸ್ ಆಗಿ ಹಾಗೂ ಸೇನೆಯಲ್ಲಿ ಸೇವೆ ಸಲ್ಲಿಸಬೇಕು ಅನ್ನುವಂತಹ ಸಾಕಷ್ಟು ಜನರು ಆಸೆ ಪಟ್ಟಿರುತ್ತಾರೆ ಆದರೆ ಅವಕಾಶಗಳಿಂದ ಅವರು ವಂಚಿತರಾಗಿರುತ್ತಾರೆ. ಆದರೆ ಈಗ ಭಾರತೀಯ ಸೇನೆ ಒಂದು ಅದ್ಭುತ ಅವಕಾಶವನ್ನು ನೀಡಿದೆ ಇದು ಯಾವ ರೀತಿ ಎಂದರೆ ಸೇನಾ ಸಿಬ್ಬಂದಿಯ ಮಕ್ಕಳಿಗೆ ಶಿಕ್ಷಣ ನೀಡುವ ಕಾರ್ಯದಿಂದ ಸೇನೆಯಲ್ಲಿ ಸೇವಿ ಸಲ್ಲಿಸಿದಂತಹ ಒಂದು ಅನುಭವ ಹಾಗೂ ಮನಸ್ಸಿಗೆ ತೃಪ್ತಿ ಸಿಗುವ ಕಾರ್ಯವನ್ನ ಮಾಡಬಹುದಾಗಿದೆ,

ಸ್ನೇಹಿತರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ ಹಾಗೂ ಹೇಳಿದ ಎಲ್ಲಾ ವಿವರಗಳನ್ನು ಸೂಕ್ಷ್ಮವಾಗಿ ಗಮನಿಸಿ.

ನಿತ್ಯ ಧ್ವನಿ ಈ ಹಿಂದೆ ಹಲವು ಇದೇ ರೀತಿಯ ಮಾಹಿತಿಗಳನ್ನು ನಿಮ್ಮೊಂದಿಗೆ ಹಂಚಿಕೊಂಡಿದೆ ತಾವೆಲ್ಲರೂ ಪ್ರತಿ ಆರ್ಟಿಕಲ್ ಗಳನ್ನು ಸೂಕ್ಷ್ಮವಾಗಿ ಹಾಗೂ ಸಂಪೂರ್ಣವಾಗಿ ಓದಿ ಹಾಗೂ ನಮ್ಮ ಮಾಹಿತಿಗಳು ನಿಮಗೆ ಇಷ್ಟವಾದರೆ ನಮ್ಮ ಟೆಲಿಗ್ರಾಂ ಚಾನೆಲ್ ಹಾಗೂ ವಾಟ್ಸಪ್ ಚಾನಲ್ ಗಳಿಗೆ ಜಾಯಿನ್ ಆಗಿ ಹಾಗೂ ಮಾಹಿತಿಗಳು ಇನ್ನೊಬ್ಬರಿಗೂ ಕೂಡ ಸಹಾಯವಾಗಲ್ಲ ಎಂದು ನೀವು ಮಾಹಿತಿಗಳನ್ನ ನಿಮ್ಮ ವಾಟ್ಸಪ್ ಗುಂಪುಗಳಲ್ಲಿ ದಯವಿಟ್ಟು ಶೇರ್ ಮಾಡಿ ಈಗ ಆರ್ಮಿ ಪಬ್ಲಿಕ್ ಸ್ಕೂಲ್ ನೇಮಕಾತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.

ಆರ್ಮಿ ಪಬ್ಲಿಕ್ ಸ್ಕೂಲ್ ನೇಮಕಾತಿ 2024: ಭಾರತೀಯ ಸೇನೆ ಸಿಬ್ಬಂದಿ ಮಕ್ಕಳಿಗಾಗಿ ಶಿಕ್ಷಣ ನೀಡಲು ಆರ್ಮಿ ಪಬ್ಲಿಕ್ ಸ್ಕೂಲ್ನಲ್ಲಿ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ ವೇತನ ಶ್ರೇಣಿ ವಯಾಮಿತಿ ಹಾಗೂ ಅರ್ಜಿ ಸಲ್ಲಿಸಬೇಕಾದ ಅರ್ಹತೆಗಳ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ನೀಡಲಾಗಿದೆ ಸ್ನೇಹಿತರೆ ದಯವಿಟ್ಟು ಲೇಖನವನ್ನು ಸಂಪೂರ್ಣವಾಗಿ ಓದಿ.

ಉದ್ಯೋಗ ವಿವರ

ಆರ್ಮಿ ಪಬ್ಲಿಕ್ ಸ್ಕೂಲ್ ನೇಮಕಾತಿ 2024 ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು.

Army Public School Recruitment 2024 ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಕೇಂದ್ರಾ ಹಾಗೂ ರಾಜ್ಯ ಸರಕಾರದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ನಾದಕೋತರ ಪದವಿ ಅಥವಾ b.ed, ಪದವಿಯನ್ನು ಪಡೆದಿರಬೇಕು ಅಭ್ಯರ್ಥಿಯು 50% ಅಂಕವನ್ನು ಪಡೆದು ಪಾಸ್ ಆಗಿರಬೇಕು ಹಾಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು CTET ಹಾಗೆ ಟಿಇಟಿ ಮುಗಿಸಿರಬೇಕು ಇಷ್ಟು ಅರ್ಹತೆಗಳನ್ನು ಹೊಂದಿದ ಅಭ್ಯರ್ಥಿಗಳು ಆರ್ಮಿ ಪಬ್ಲಿಕ್ ಸ್ಕೂಲ್ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಬೇಕಾದ ವಯೋಮಿತಿ
ಆರ್ಮಿ ಪಬ್ಲಿಕ್ ಸ್ಕೂಲ್ 2024 ನೇಮಕಾತಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 40 ವರ್ಷದ ಒಳಗಿರಬೇಕು ಹಾಗೂ ಇನ್ನಿತರ ಕೆಲವು ಹುದ್ದೆಗಳಿಗೆ 57 ವರ್ಷದ ಒಳಗಿರಬೇಕು.

ಅರ್ಜಿ ಶುಲ್ಕ

ಸ್ನೇಹಿತರೆ ನಾವು ಎಲ್ಲಾ ಸರಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ್ರೀತಿಗೆ ಇದಕ್ಕೂ ಕೂಡ ಅರ್ಜಿ ಸಲ್ಲಿಸಬೇಕಾಗುತ್ತದೆ ಹಾಗೂ ಎಲ್ಲಾ ಅರ್ಜಿಗಳಿಗೂ ನಾವು ಹೇಗೆ ಶುಲ್ಕವನ್ನು ಪಾವತಿಸುತ್ತೇವೆ ಅದೇ ರೀತಿ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸುವಾಗ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಈ ಹುದ್ದೆಗೆ ಅರ್ಜಿ ಸಲ್ಲಿಸುವ ಎಲ್ಲಾ ಅಭ್ಯರ್ಥಿಗಳಿಗೂ 385 ರೂಪಾಯಿ ಶುಲ್ಕವಿರುತ್ತದೆ ಅಭ್ಯರ್ಥಿಗಳು ಯುಪಿಐ ನೆಟ್ ಬ್ಯಾಂಕಿಂಗ್ ಹಾಗೂ ಡೆಬಿಟ್ ಕಾರ್ಡ್ ಮುಖಾಂತರ ಹಣವನ್ನು ಪಾವತಿಸಬೇಕಾಗುತ್ತದೆ ಯಾವುದೇ ಅಡಚಣೆಗಳ ಆಗದ ಹಾಗೆ ಸೂಕ್ಷ್ಮವಾಗಿ ಗಮನಿಸಿ ಪಾವತಿಸಿ.

ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ

ಸ್ನೇಹಿತರೆ ಆರ್ಮಿ ಪಬ್ಲಿಕ್ ಸ್ಕೂಲ್ ನೇಮಕಾತಿ ಅಧಿಸೂಚನೆ ಪ್ರಕಾರ ಅಭ್ಯರ್ಥಿಗಳನ್ನು ಆನ್ಲೈನ್ ಮುಖಾಂತರ ಒಂದು ಪರೀಕ್ಷೆಯನ್ನು ನಡೆಸಲಾಗುತ್ತದೆ, ಪರೀಕ್ಷೆ ನಡೆಸಿದ ನಂತರ ಸಂದರ್ಶನ ನಡೆಸಿ ನಂತರ ಅಭ್ಯರ್ಥಿಗಳನ್ನು ಅವರ ಕೌಸಲ್ಯವನ್ನು ಗಮನಿಸಿ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ

ಆರ್ಮಿ ಪಬ್ಲಿಕ್ ಸ್ಕೂಲ್ ನೇಮಕಾತಿ 2024 ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು https://www.awesindia.com ಭೇಟಿ ನೀಡಿ ನಂತರ ಅಲ್ಲಿ ತೆರೆಯುವ ಪರದೆಯ ಮೇಲೆ ಒಂದು ಖಾತೆಯನ್ನು ರಚಿಸಬೇಕಾಗುತ್ತದೆ.

ಅಭ್ಯರ್ಥಿಗಳು ಆನ್ಲೈನ್ ಮುಖಾಂತರ ಈ ವೆಬ್ಸೈಟ್ನಲ್ಲಿ ಅಲ್ಲಿ ಕೇಳಿದ ಎಲ್ಲಾ ವಯಕ್ತಿಕ ವಿವರಗಳನ್ನು ಹಾಗೂ ಮಾಹಿತಿಗಳನ್ನು ಅಪ್ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಈ ಅವಕಾಶವನ್ನು ಅಭ್ಯರ್ಥಿಗಳಿಗೆ ನೀಡಲಾಗಿದೆ ಉದಾಹರಣೆ PRT,TGT,PGT) ಪ್ರತಿ ಹುದ್ದೆಗಳಿಗೆ ಬೇಕಾದ ಎಲ್ಲಾ ದಾಖಲಾತಿಯನ್ನು ನೀಡಿ ಪ್ರತ್ಯೇಕವಾಗಿ ಅರ್ಜಿಗಳನ್ನು ಸಲ್ಲಿಸಬೇಕು.

ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು

  • ಅಭ್ಯರ್ಥಿಯ ಆಧಾರ್ ಕಾರ್ಡ್.
  • ಶೈಕ್ಷಣಿಕ ದಾಖಲೆಗಳು.
  • ಅಭ್ಯರ್ಥಿಯ ಇತ್ತೀಚಿನ ಫೋಟೋ.
  • ಸಹಿ
  • ಹತ್ತನೆಯ ತರಗತಿಯ ಅಂಕಪಟ್ಟಿ.
  • ಜನನ ಪ್ರಮಾಣ ಪತ್ರ.
  • ಮೊಬೈಲ್ ಸಂಖ್ಯೆ.
  • ಚಾಲ್ತಿಯಲ್ಲಿ ಇರುವ ನಿಮ್ಮ ಅಧಿಕೃತ ಇಮೇಲ್ ಐಡಿ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಲ್ಲಿಸಿದ ಎಲ್ಲಾ ದಾಖಲಾತಿಗಳು ಹಾಗೂ ಮಾಹಿತಿಗಳು ಗಮನಿಸಿ ಅರ್ಜಿಯನ್ನ ಸಲ್ಲಿಸತಕ್ಕದ್ದು ಒಂದು ಬಾರಿ ಅರ್ಜಿ ಸಲ್ಲಿಸಿದರೆ ಮತ್ತೊಮ್ಮೆ ತಿದ್ದುಪಡಿ ಮಾಡಲು ಯಾವುದೇ ಅವಕಾಶಗಳು ಇರುವುದಿಲ್ಲ.

ಅರ್ಜಿ ಸಲ್ಲಿಸುವ ದಿನಾಂಕ
25 ಅಕ್ಟೋಬರ್ 2024ರ ವರೆಗೆ ಅರ್ಜಿಯನ್ನು ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ ಈ ದಿನಾಂಕದ ನಂತರ ಅರ್ಜಿ ಸಲ್ಲಿಸುವ ವೆಬ್ಸೈಟ್ ಕ್ಲೋಸ್ ಆಗುತ್ತದೆ.

ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿದ ನಂತರ ಅವರು ನೀಡಿದ ಇಮೇಲ್ ಐಡಿ ಹಾಗೂ ಮೊಬೈಲ್ ನಂಬರಿಗೆ ದೃಢೀಕರಣ ಸಂದೇಶವನ್ನು ಇಲಾಖೆ ರವಾನಿಸುತ್ತದೆ.

ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿದ ನಂತರ ಅರ್ಜಿ ನಮೂನೆ ಪ್ರಿಂಟ್ ಔಟ್ ಅನ್ನು ತೆಗೆದುಕೊಳ್ಳಬೇಕಾಗುತ್ತದೆ.

ಸಲ್ಲಿಸಿದ ಮಾಹಿತಿಗಳು ತಪ್ಪಾಗಿದ್ದಲ್ಲಿ ನೀವು ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ ಹಾಗಾಗಿ ಮಾಹಿತಿಯನ್ನು ಗಮನಿಸಿ ಸಲ್ಲಿಸಿ.

Leave a Comment

Your email address will not be published. Required fields are marked *

Scroll to Top