
ನವದೆಹಲಿ – 2024 ರ ಲೋಕಸಭಾ ಚುನಾವಣೆಯಲ್ಲಿ ಅಬ್ ಕಿ ಬಾರ್ ಚಾರ್ ಸೌ ಪಾರ್ ಎಂದು ಚುನಾವಣಾ ಪ್ರಚಾರ ನಡೆಸಿದ್ದ ಬಿಜೆಪಿ ಕನಿಷ್ಠ ಬಹುಮತವನ್ನೂ ಪಡೆಯದೆ ಕೇವಲ 240 ಸ್ಥಾನ ಗಳಿಸಿ ನೀರಸ ಪ್ರದರ್ಶನವನ್ನು ತೋರಿತ್ತು…!
ಆದರೆ ಮಿತ್ರ ಪಕ್ಷಗಳ ಸಹಕಾರದೊಂದಿಗೆ ಎನ್ಡಿಎ ನೇತೃತ್ವದ ಸರ್ಕಾರವನ್ನು ಬಿಜೆಪಿ ರಚಿಸಿತು, ನರೇಂದ್ರ ಮೋದಿ ಮೂರನೇ ಅವಧಿಗೆ ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು…!!
ಇದರ ಬೆನ್ನಲ್ಲೇ ಆರೆಸ್ಸೆಸ್ ನಾಯಕರು ಬಿಜೆಪಿ ವಿರುದ್ಧ ಕಿಡಿಕಾರುತ್ತಿದ್ದಾರೆ…!
ಇತ್ತೀಚೆಗಷ್ಟೇ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು, ನಿಜವಾದ ಕಾರ್ಯಕರ್ತರು ಎಂದೂ ಅಹಂಕಾರಿ ಆಗಿರುವುದಿಲ್ಲ, ಚುನಾವಣಾ ಪ್ರಚಾರದ ವೇಳೆ ಶಿಸ್ತು ಕಾಪಾಡಲಿಲ್ಲ, ಚುನಾವಣೆಯನ್ನು ನಾವು ಸ್ಪರ್ಧೆ ರೀತಿಯಲ್ಲಿ ನೋಡಬೇಕೇ ವಿನಃ ಯುದ್ಧದ ರೀತಿಯಲ್ಲಲ್ಲ ಎಂದು ಬಿಜೆಪಿಯ ಕಿವಿ ಹಿಂಡಿದ್ದರು…!!
ಇದೀಗ ಮತ್ತೋರ್ವ ಆರೆಸ್ಸೆಸ್ ನಾಯಕ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ…!
ಲೋಕಸಭಾ ಚುನಾವಣೆ ಫಲಿತಾಂಶ ವಿಚಾರವಾಗಿ ಮಾತನಾಡಿದ ಆರ್ಎಸ್ಎಸ್ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಇಂದ್ರೇಶ್ ಕುಮಾರ್ ಬಿಜೆಪಿಯನ್ನು ಗುರಿಯಾಗಿಸಿಕೊಂಡು ಬಿಜೆಪಿ ದುರಹಂಕಾರಿಯಾಗಿದೆ ಎಂದು ಹೇಳಿದ್ದು, ಬಿಜೆಪಿ ದುರಹಂಕಾರಿಯಾದ್ದರಿಂದಲೇ ಅವರನ್ನು ಭಗವಾನ್ ರಾಮ ಅವರನ್ನು 240 ಸ್ಥಾನಕ್ಕೆ ನಿಲ್ಲಿಸಿದರು ಎಂದು ವ್ಯಂಗ್ಯವಾಡಿದ್ದಾರೆ…!!
ಜೈಪುರ ಸಮೀಪದ ಕನೋಟಾದಲ್ಲಿ ಆಯೋಜಿಸಿದ್ದ ರಾಮರಥ ಅಯೋಧ್ಯೆ ಯಾತ್ರೆ ದರ್ಶನ ಪೂಜೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಇಂದ್ರೇಶ್ ಕುಮಾರ್ ಬಿಜೆಪಿಗೆ ತಿವಿದಿದ್ದಾರೆ…!
ಯಾರ ಹೆಸರನ್ನೂ ಹೇಳದೆ ಬಿಜೆಪಿ ವಿರುದ್ಧ ಕಿಡಿಕಾರಿದ ಆರ್ಎಸ್ಎಸ್ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಇಂದ್ರೇಶ್ ಕುಮಾರ್, ಚುನಾವಣಾ ಫಲಿತಾಂಶಗಳು ಬಿಜೆಪಿಯವರ ಮನೋಭಾವವನ್ನು ಬಿಂಬಿಸುತ್ತವೆ, ಅವರು ಅಹಂಕಾರಿಯಾಗಿಬಿಟ್ಟಿದ್ದರು, ಬಿಜೆಪಿ ಪಕ್ಷ ಮೊದಲು ಭಕ್ತಿ ತೋರಿ ನಂತರ ದುರಹಂಕಾರಿಯಾಯಿತು, ಇದಕ್ಕಾಗಿಯೇ ಭಗವಂತ ರಾಮ ಅವರನ್ನು 240 ರಲ್ಲಿ ನಿಲ್ಲಿಸಿದರು, ಆದರೆ ಅವರನ್ನು ದೊಡ್ಡ ಪಕ್ಷವನ್ನಾಗಿ ಮಾಡಿದರು, ಒಂದೆಡೆ ಶ್ರೀರಾಮನಲ್ಲಿ ನಂಬಿಕೆಯಿಲ್ಲದ ‘ಇಂಡಿಯಾ ಮೈತ್ರಿಕೂಟ’ದವರನ್ನು 234ಕ್ಕೆ ನಿಲ್ಲಿಸಲಾಯಿತು ಎಂದು ಅವರು ಹೇಳಿದರು…!!
ಮುಂದುವರಿದು ಮಾತನಾಡಿದ ಆರ್ಎಸ್ಎಸ್ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಇಂದ್ರೇಶ್ ಕುಮಾರ್, ಪ್ರಜಾಪ್ರಭುತ್ವದಲ್ಲಿ ರಾಮರಾಜ್ಯದ ಸಂವಿಧಾನವನ್ನು ನೋಡಿ, ಅವರು ರಾಮನನ್ನು ಪೂಜಿಸಿದರು, ಆದರೆ ಕ್ರಮೇಣ ಅಹಂಕಾರಕ್ಕೆ ಬಂದರು, ಅತಿ ದೊಡ್ಡ ಪಕ್ಷವಾಯಿತು, ಆದರೆ ಸಿಗಬೇಕಾಗಿದ್ದ ಮತಗಳು ಅಹಂಕಾರದಿಂದ ಶ್ರೀರಾಮನಿಂದ ನಿಲ್ಲಿಸಲ್ಪಟ್ಟವು, ರಾಮನನ್ನು ವಿರೋಧಿಸಿದವರಿಗೆ ಅಧಿಕಾರ ಸಿಗುವುದಿಲ್ಲ ಎಂದೂ ಹೇಳಿದರು, ಎಲ್ಲರೂ ಒಟ್ಟಾಗಿ ಎರಡನೇ ಸ್ಥಾನದಲ್ಲಿ ಉಳಿದರು ಎಂದರು…!
ದೇವರ ನ್ಯಾಯ ಸತ್ಯ ಮತ್ತು ಆನಂದದಾಯಕವಾಗಿದೆ, ಆತನನ್ನು ಪೂಜಿಸುವವರು ವಿನಮ್ರರಾಗಿರಬೇಕು ಮತ್ತು ಆತನನ್ನು ವಿರೋಧಿಸುವವರೊಂದಿಗೆ ದೇವರೇ ವ್ಯವಹರಿಸುತ್ತಾನೆ ಎಂದ ಆರ್ಎಸ್ಎಸ್ ರಾಷ್ಟ್ರೀಯ ಕಾರ್ಯಕಾರಿ ಸದಸ್ಯ ಇಂದ್ರೇಶ್ ಕುಮಾರ್, ಭಗವಾನ್ ರಾಮನು ತಾರತಮ್ಯ ಮಾಡುವುದಿಲ್ಲ ಅಥವಾ ಶಿಕ್ಷಿಸುವುದಿಲ್ಲ, ರಾಮನು ಯಾರನ್ನೂ ದುಃಖಿಸುವುದಿಲ್ಲ, ರಾಮ ಎಲ್ಲರಿಗೂ ನ್ಯಾಯ ಕೊಡುತ್ತಾನೆ, ಕೊಡುತ್ತಾನೆ ಮತ್ತು ಕೊಡುತ್ತಲೇ ಇರುತ್ತಾನೆ ಎಂದರು…!!