
ಕೆಲವು ದಿನಗಳ ಹಿಂದೆ ಅಷ್ಟೇ ಜಾಮೀನಿನ ಮೇಲೆ ಹೊರಗಡೆ ಬಂದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ , ಮುಖ್ಯಮಂತ್ರಿ ಸ್ಥಾನದಿಂದ ಯೋಗಿಯನ್ನು ಕೆಳಗಿಳಿಸುತ್ತಾರೆ ಇಂದು ಹೇಳಿಕೆ ಕೊಟ್ಟಿದ್ದರು, ಅದಕ್ಕೆ ಬಿಜೆಪಿಯವರು ಕೂಡ ಪ್ರತಿ ಉತ್ತರವನ್ನು ನೀಡಿದ್ದರು,
ಪತ್ರಕರ್ತರೊಬ್ಬರು ಬರೆದಿರುವ ಪುಸ್ತಕ ಒಂದು ಬಾರಿ ಸುದ್ದಿ ಮಾಡುತ್ತಿದೆ , ಹಿರಿಯ ಪತ್ರಕರ್ತ ಶ್ಯಾಮಲಾಲ್ ಯಾದವ್ ಅವರು ಅಟ್ ದಿ ಹಾರ್ಟ್ ಆಫ್ ಪವರ್: ದಿ ಚೀಫ್ ಮಿನಿಸ್ಟರ್ಸ್ ಆಫ್ ಉತ್ತರ ಪ್ರದೇಶದ ಪುಸ್ತಕದಲ್ಲಿ ಅನೇಕ ವಿಚಾರಗಳನ್ನು ಉಲ್ಲೇಖಿಸಿದ್ದಾರೆ. ಅದರಲ್ಲಿ ಅಚ್ಚರಿಯುಂಟು ಮಾಡುವ ವಿಚಾರವ ಎಂದರೆ 2022 ರ ವಿಧಾನಸಭಾ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್ ಅವರನ್ನು ತೆಗೆದುಹಾಕಲು ತಯಾರಿ ನಡೆಸಲಾಗುತ್ತಿತ್ತು ಎಂಬುವುದು.
ಅವರು ತಮ್ಮ ಪುಸ್ತಕದಲ್ಲಿ ಈ ಬಗ್ಗೆ ಬರೆಯುತ್ತಾ, ‘ಉತ್ತರ ಪ್ರದೇಶದಲ್ಲಿ 2022 ರ ವಿಧಾನಸಭಾ ಚುನಾವಣೆಗೆ ಕೇವಲ 9 ತಿಂಗಳುಗಳು ಉಳಿದಿವೆ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ನಾಯಕರ ನಡುವೆ ಲಕ್ನೋದಿಂದ ದೆಹಲಿಯವರೆಗೆ ಹಲವು ಸಭೆಗಳು ನಡೆದಿವೆ. ಒಂದು ಕಾಲದಲ್ಲಿ ಯೋಗಿ ಆದಿತ್ಯನಾಥ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದು ನಿರ್ಧಾರವಾಗಿತ್ತು. ಯೋಗಿ ಆದಿತ್ಯನಾಥ್ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಮಾಡುವ ಮೊದಲು, ಪ್ರಸ್ತುತ ಸರ್ಕಾರದಲ್ಲಿ ಯೋಗಿ ಅವರನ್ನು ಸಿಎಂ ಸ್ಥಾನದಿಂದ ತೆಗೆದುಹಾಕಿದರೆ ಪಕ್ಷಕ್ಕೆ ನಷ್ಟವಾಗಬಹುದು ಎಂದು ಬಿಜೆಪಿ ಹೈಕಮಾಂಡ್ ಅರಿತುಕೊಂಡಿದೆ ಎಂದಿದ್ದಾರೆ.
ಯೋಗಿ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವ ಪ್ರಯತ್ನದ ಹಿಂದಿನ ಕಾರಣವನ್ನು ಶ್ಯಾಮಲಾಲ್ ಯಾದವ್ ತಮ್ಮ ಪುಸ್ತಕದಲ್ಲಿ ನೀಡಿಲ್ಲ. ಆದರೆ ಸಿಎಂ ಯೋಗಿ ಅವರ ಮೇಲೆ ಬರೆದಿರುವ 16 ಪುಟಗಳಲ್ಲಿ ಯೋಗಿ ಸರ್ಕಾರದ ವಿರುದ್ಧ ನಡೆಯುತ್ತಿರುವ ಕೆಲವು ವಿಷಯಗಳನ್ನು ನಮೂದಿಸಿದ್ದಾರೆ.
ಆ ವೇಳೆ ಕೇಶವ್ ಪ್ರಸಾದ್ ಮೌರ್ಯ ಜತೆ ಸಿಎಂ ಯೋಗಿ ಟೆನ್ಷನ್ ಕೂಡ ಹೆಚ್ಚಿತ್ತು. ಆದಾಗ್ಯೂ, ಸಂಘದ ಮುಖಂಡರ ಮಧ್ಯಪ್ರವೇಶದ ನಂತರ, ಜೂನ್ 22, 2021 ರಂದು, ಯೋಗಿ ಆದಿತ್ಯನಾಥ್ ಅವರು ಕೇಶವ್ ಪ್ರಸಾದ್ ಮೌರ್ಯ ಅವರನ್ನು ಭೇಟಿ ಮಾಡಲು ಇದ್ದಕ್ಕಿದ್ದಂತೆ ಬಂದರು. ಉಭಯ ನಾಯಕರ ನಡುವಿನ ಅಂತರವನ್ನು ಕಡಿಮೆ ಮಾಡುವ ಪ್ರಯತ್ನ ನಡೆಯುತ್ತಿದೆ ಎಂಬ ದೃಷ್ಟಿಕೋನದಿಂದ ಈ ಸಭೆಯನ್ನು ನೋಡಲಾಗಿದೆ ಎನ್ನಲಾಗಿದೆ.
ವಾಸ್ತವವಾಗಿ, 2016 ರಲ್ಲಿ, ಕೇಶವ ಪ್ರಸಾದ್ ಪಕ್ಷದ ರಾಜ್ಯಾಧ್ಯಕ್ಷರಾದರು ಮತ್ತು 2017 ರಲ್ಲಿ, ಬಿಜೆಪಿ ಬಂಪರ್ ಗೆಲುವು ಸಾಧಿಸಿತು. ಈ ದೊಡ್ಡ ಗೆಲುವಿನೊಂದಿಗೆ ಕೇಶವ್ ಪ್ರಸಾದ್ ಮೌರ್ಯ ಅವರು ಸಿಎಂ ಸ್ಥಾನದ ರೇಸ್ನಲ್ಲಿ ಮುಂದಿದ್ದರು. ಆದರೆ ಯೋಗಿ ಆದಿತ್ಯನಾಥ್ ಅವರನ್ನು ಸಿಎಂ ಮಾಡಿದ್ದರಿಂದ ಉಭಯ ನಾಯಕರ ನಡುವೆ ಭಿನ್ನಾಭಿಪ್ರಾಯ ಶುರುವಾಗಿದೆ.
ಆದರೆ ಈ ಪುಸ್ತಕ ಈಗ ಬಾರಿ ಚರ್ಚೆಗೆ ಕಾರಣವಾಗುತ್ತಿದೆ ಉತ್ತರ ಪ್ರದೇಶದಲ್ಲಿ ಬಿಜೆಪಿ ಕಳೆದ ಬಾರಿ ಎಷ್ಟು ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಲು ಸಾಧ್ಯವಾಗಲಿಲ್ಲ ಎನ್ನುವಂತದ್ದು ಎಲ್ಲರಿಗೂ ತಿಳಿದಿದೆ ಹಿನ್ನಡೆಯ ಕಾರಣವನ್ನು ಹುಡುಕುತ್ತಿರುವ ಬಿಜೆಪಿಗೆ, ಈಗ ಈ ಪುಸ್ತಕದ ವಿಷಯವೂ ಕೂಡ ಒಂದು ರೀತಿಯ ಗೊಂದಲ ಮೂಡಿಸುತ್ತಿದೆ.