
ಬೆಳಗಾವಿ : ರಾಜ್ಯದಲ್ಲಿ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಸಂಪೂರ್ಣವಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು ಗ್ರಾಮೀಣ ಪ್ರದೇಶದ ಜನರ ಸ್ಥಿತಿ ಹೇಳತಿರದು ಆತಂಕದ ಸ್ಥಿತಿಯಲ್ಲಿ ಕಾಲ ಕಳೆಯುವಂತಾಗಿದೆ ಇನ್ನೂ ಕಾಡಂಚಿನ ಜನಗಳ ಸ್ಥಿತಿ ಸ್ವಲ್ಪ ಹುಷಾರಿಲ್ಲ ಅಂದರು ಆಸ್ಪತ್ರೆಗೆ ಹೋಗಲು ಸರಿಯಾದ ರಸ್ತೆ ವ್ಯವಸ್ಥೆ ಗಳಿಲ್ಲ ನದಿಗಳನ್ನು ಹಳ್ಳಗಳನ್ನ ದಾಟಿ ಆಸ್ಪತ್ರೆಗೆ ಕಿಲೋಮೀಟರ್ ಗಳಷ್ಟು ನಡೆದು ಆಸ್ಪತ್ರೆಗೆ ಹೋಗುವ ಸ್ಥಿತಿ.!
ಭಾರಿ ಮಳೆಯಿಂದ ಜ್ವರದಿಂದ ನೆರಳುತ್ತಿದ್ದ ಮಹಿಳೆಯನ್ನು 5 ಕಿ.ಮೀ ಎತ್ತಿಕೊಂಡು ಹೋಗಿ ಜೀವವನ್ನು ಗ್ರಾಮಸ್ಥರು ಉಳಿಸಿದ ಘಟನೆ . ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ನಡೆದಿದೆ. ದಟ್ಟವಾದ ಕಾಡಂಚಿನಲ್ಲಿ ಇರುವ ಅಂಗಾವ್ ಗ್ರಾಮದ 36 ವರ್ಷದ ಮಹಿಳೆ ಹರ್ಷದಾ ಎಂಬುವವರು ತೀವ್ರ ಜ್ವರದಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದರು. ಮಹಿಳೆಯನ್ನು ಉಳಿಸಲು ಗ್ರಾಮಸ್ಥರು ಮಳೆಯನ್ನೂ ಮಳೆಯನ್ನು ಲಕ್ಕಿಸದೆ ಪ್ರಾಣ ಉಳಿಸಿದ್ದಾರೆ.!
ಅಸ್ವಸ್ಥಗೊಂಡಿದ್ದ ಹರ್ಷದಾ ತೀರ್ವ ಜ್ವರದಿಂದ ನೆರಳುತ್ತಿದ್ದರು ಅವರನ್ನು ಆಸ್ಪತ್ರೆಗೆ ದಾಖಲಿಸಲು ಸಮಯಗಳು ಕೂಡ ತುಂಬಾ ಕಮ್ಮಿ ಇತ್ತು . ಸುತ್ತಲೂ ಕಾಡು ಬಾರಿ ಮಳೆ ಬೇರೆ ಅಂಗಾವ್ ಗ್ರಾಮಕ್ಕೆ ರಸ್ತೆಯ ವ್ಯವಸ್ಥೆಯೂ ಇಲ್ಲ, ಸೇತುವೆಯೂ ಇಲ್ಲ, ಈ ಗ್ರಾಮದಲ್ಲಿ ಮೊಬೈಲ್ ನೆಟ್ವರ್ಕ್ ಕೂಡ ಸಿಗುವುದಿಲ್ಲ.
ಆದರೆ ಇಂತಹ ಸ್ಥಿತಿಯಲ್ಲಿ ಹರ್ಷದಾ ಅವರ ಪ್ರಾಣ ಉಳಿಸಲು ಗ್ರಾಮಸ್ಥರು ಕಟ್ಟಿಗೆಯಲ್ಲಿ ಸ್ಟ್ರೇಚರ್ ಮಾದರಿ ತಯಾರಿಸಿ ಮಹಿಳೆಯನ್ನು ಹೊತ್ತುಕೊಂಡು, ರಣ ಮಳೆಯಲ್ಲೇ ಐದು ಕಿಲೋಮೀಟರ್ ದೂರು ಸಾಗುತ್ತಾರೆ.!
ನಂತರ ಆಂಬುಲೆನ್ಸ್ ಬರಲು ರಸ್ತೆ ಇರುವ ಜಾಗದಲ್ಲಿ ಹೋಗಿ ನಿಂತರು ಅದಾದ ನಂತರ ಅರಣ್ಯ ಇಲಾಖೆ ಚೆಕ್ಪೋಶ್ ನಿಂದ 1 ಕಿಲೋ ಮೀಟರ್ ಮತ್ತೆ ಗ್ರಾಮಸ್ಥರು ನಡೆದು ಹೋಗಿ ಮೊಬೈಲ್ ನೆಟ್ವರ್ಕ್ ಸಿಗುವ ಜಾಗದಲ್ಲಿ 108 ಅಂಬುಲೆನ್ಸ್ ಗೆ ಕರೆ ಮಾಡಿ ತಿಳಿಸುತ್ತಾರೆ ನಂತರ ಆಂಬುಲೆನ್ಸ್ ಸ್ಥಳಕ್ಕೆ ಆಗಮಿಸಿ,
ಅಸ್ವಸ್ಥಗೊಂಡಿದ್ದ ಹರ್ಷದಾಗೆ ಪ್ರಥಮ ಚಿಕಿತ್ಸೆ ನೀಡುತ್ತಾರೆ ನಂತರ ಬೆಳಗಾವಿಯ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ.!
ಕಾಡಂಚಿನ ಜನಗಳ ಈ ಸ್ಥಿತಿ ಕೇಳುವವರು ಯಾರು ಇಲ್ಲ ಪ್ರತಿ ದಿನ ಅಪಾಯದಲ್ಲಿ ಜೀವ ಕಳೆಯುವಂತಾಗಿದೆ ಇವರ ಜೀವನ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಇವರ ಬಗ್ಗೆ ಯಾವುದೇ ಗಮನಹರಿಸುತ್ತಿಲ್ಲ ಸರಿಯಾಗಿ ಮೂಲಭೂತ ಸೌಕರ್ಯಗಳಿಲ್ಲದೆ ಈ ಗ್ರಾಮಸ್ಥರು ದಿನ ಕಳೆಯುತ್ತಿದ್ದಾರೆ ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ನಮ್ಮ ಕಷ್ಟಕ್ಕೆ ಸ್ಪಂದಿಸಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.!
ನಿರಂತರವಾಗಿ ಸುರಿಯುತ್ತಿರುವ ಮಳೆಗೆ ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಅವಾಂತರ ಸೃಷ್ಟಿಯಾಗಿದ್ದು ಇನ್ನು ಗ್ರಾಮೀಣ ಹಾಗೂ ಕಾಡಂಚಿನ ಗ್ರಾಮಗಳ ಸ್ಥಿತಿ ತುಂಬಾ ಗಂಭೀರವಾಗಿದೆ ಸರಕಾರ ಇವರ ಸಮಸ್ಯೆಗಳನ್ನು ಆಲಿಸಬೇಕು ಇವರ ಕಷ್ಟಗಳಿಗೆ ಸ್ಪಂದಿಸಬೇಕು ರಸ್ತೆ ಸೇತುವೆ ಹಾಗೂ ಮೊಬೈಲ್ ನೆಟ್ವರ್ಕ್ ಅಂತಹ ಮೂಲಭೂತ ಸೌಕರ್ಯಗಳು ತುಂಬಾ ಅವಶ್ಯವಾಗಿ ಬೇಕಾಗಿದೆ ಸರಕಾರ ಈ ವ್ಯವಸ್ಥೆಗಳನ್ನು ಇಂತಹ ಗ್ರಾಮಗಳಿಗೆ ಕಲ್ಪಿಸಬೇಕು. ..ಇದು ನಿತ್ಯ ಧ್ವನಿಯ ಕಳಕಳಿಯ ಮನವಿ
..