
ಸನಾತನ ಹಿಂದೂ ಧರ್ಮದ ಸಂಪ್ರದಾಯದ ಪ್ರಕಾರ ಆಕಾಶ ಭೂಮಿ ಅಗ್ನಿ , ಗಾಳಿ ಶಕ್ತಿಗಳನ್ನು ಪಂಚಭೂತಗಳು ಎಂದು ಕರೆಯಲಾಗುತ್ತದೆ. ಇವುಗಳಲ್ಲಿ ಸೂರ್ಯನೂ ಕೂಡ ಒಬ್ಬ. ಸೂರ್ಯನು ಅದಿತಿಯ ಮಗನಾದ ಕಾರಣ ಆತನನ್ನು ಆದಿತ್ಯ ಎಂದೂ ಕರೆಯುತ್ತಾರೆ. ಸೂರ್ಯನು ಭೂಮಿಯ ಮೇಲಿನ ಜೀವಗಳ ಆತ್ಮದಂತೆ ಎಂದು ಹೇಳಲಾಗಿದೆ. ಆದಿತ್ಯ ಹೃದಯ ಸ್ತೋತ್ರವು ಸಾರ್ವಕಾಲಿಕ ಅತ್ಯಂತ ಶಕ್ತಿಶಾಲಿ ಸ್ತೋತ್ರಗಳಲ್ಲಿ ಒಂದಾಗಿದೆ. ಇದು ಸೂರ್ಯ ದೇವನಿಗೆ ಸಮರ್ಪಿತವಾಗಿದೆ ಮತ್ತು ಜ್ಯೋತಿಷ್ಯದ ಪ್ರಕಾರ ಸೂರ್ಯ ಬಲ ಇಲ್ಲದ ರಾಶಿಯವರಿಗೆ ಈ ಸ್ತೋತ್ರ ಹೆಚ್ಚು ಪರಿಣಾಮಕಾರಿ.
ಸನಾತನ ಧರ್ಮದಲ್ಲಿ ಸೂರ್ಯ ಪ್ರತ್ಯಕ್ಷ ದೇವತೆ. ವೇದ ಗರ್ಭವೆನಿಸಿದ ಗಾಯತ್ರೀ ಮಂತ್ರದ ಪ್ರತಿಪಾದ್ಯ ದೇವತೆಯೂ ಹೌದು. ಸೂರ್ಯನನ್ನು ಅನುಸರಿಸಿಯೇ ಕರ್ಮಗಳು ನಡೆಯುವುದರಿಂದ ಎಲ್ಲದಕ್ಕೂ ಸೂರ್ಯನು ಪ್ರತ್ಯಕ್ಷ ಸಾಕ್ಷಿ ಎಂಬ ನಂಬಿಕೆ ಇದೆ. ಆದುದರಿಂದ ಸೂರ್ಯನನ್ನು ಭಾರತೀಯ ಶಾಸ್ತ್ರಗಳು ವಿಶ್ವದ ಕಣ್ಣು (ಜಗದೇಕ ಚಕ್ಷುಃ) ಎಂದು ಕರೆದಿವೆ. ಸೂರ್ಯನಿಗೆ ಮತ್ತೊಂದು ಪದ ಆದಿತ್ಯ. ಸಕಲ ಜೀವರಾಶಿಗಳಿಗೂ ಸೂರ್ಯನ ಅಗತ್ಯತೆ ಇರುವುದರಿಂದ ಭಾರತೀಯ ಸಂಸ್ಕೃತಿಯಲ್ಲಿ ಆದಿತ್ಯನಿಗೆ ಪೂಜನೀಯ ಸ್ಥಾನವಿದ್ದು, ಆತನನ್ನು ಪ್ರಾರ್ಥಿಸಲು ಇರುವ ಸ್ತೋತ್ರವೇ ಈ ಆದಿತ್ಯ ಹೃದಯ ಸ್ತೋತ್ರ.
ಋಗ್ವೇದದಲ್ಲಿ ಸೂರ್ಯನು ಜಗತ್ತಿನ ಆತ್ಮನೆಂದು ಹೇಳಲಾಗಿದೆ, ಆದ್ದರಿಂದ ಆತನಿಗೆ ಸಂಬಂಧಿಸಿದ ಆದಿತ್ಯ ಹೃದಯ ಮಂತ್ರವನ್ನು ಮಂತ್ರಗಳ ರಾಜ ಎಂದು ಕರೆಯಲಾಗಿದೆ. ಶ್ರೀರಾಮ ರಾವಣನ ವಿರುದ್ಧ ಯುದ್ಧ ಮಾಡುತ್ತಿದ್ದ ಸಂದರ್ಭದಲ್ಲಿ ಅಗಸ್ತ್ಯರಿಂದ ರಾಮನಿಗೆ ಆದಿತ್ಯ ಹೃದಯ ಮಂತ್ರೋಪದೇಶವಾಗುತ್ತದೆ. ರಾಮ ನೆಲದಲ್ಲಿ, ರಾವಣನು ರಥದಲ್ಲಿ ಯುದ್ಧ ಮಾಡುವುದನ್ನು ನೋಡಿದ ಇಂದ್ರ ರಾಮನಿಗೆ ರಥವನ್ನು ನೀಡುತ್ತಾನೆ. ಆ ರಥದ ಧ್ವಜವನ್ನು ರಾವಣ ಕತ್ತರಿಸುತ್ತಾನೆ. ರಾಮನ ಬಾಣ ಪ್ರಯೋಗಕ್ಕೆ ಹೆದರಿ ರಾವಣನ ಸಾರಥಿ ರಥವನ್ನು ಪಕ್ಕಕ್ಕೆ ಒಯ್ಯುತ್ತಾನೆ. ಆದರೆ, ರಾವಣನಿಗೆ ಏನೂ ಆಗಲಿಲ್ಲ. ಅದನ್ನು ನೋಡಿ ಅಗಸ್ತ್ಯರು ಬರುತ್ತಾರೆ. ಈ ಸಂದರ್ಭ ಶ್ರೀರಾಮನಿಗೆ ಆದಿತ್ಯ ಹೃದಯದ ಉಪದೇಶವಾಗುತ್ತದೆ.
ರಾಮನಿಂದ ಆದಿತ್ಯ ಹೃದಯ ಪಠಣೆ
ಮೊದಲ ಹಂತದ ಯುದ್ಧದಲ್ಲಿ ರಾವಣನನ್ನು ಸೋಲಿಸುವ ಶ್ರೀ ರಾಮನ ಪ್ರಯತ್ನ ವಿಫಲವಾಗುತ್ತದೆ. ತನ್ನ ಶತ್ರುವಾದ ರಾವಣನನ್ನು ಸೋಲಿಸುವ ಪ್ರಯತ್ನ ವ್ಯರ್ಥವಾಯಿತಲ್ಲ ಎಂಬ ಕೊರಗು ಶ್ರೀ ರಾಮನನ್ನು ಕಾಡುತ್ತದೆ. ಒಂದು ಹಂತದಲ್ಲಿ ಶ್ರೀ ರಾಮನಿಗೆ ಉಳಿದಿದ್ದು ನಿರಾಶೆ ಮತ್ತು ಆಯಾಸ ಮಾತ್ರ. ಈ ಸಮಯದಲ್ಲಿ ನೊಂದ ರಾಮನು ದೀರ್ಘ ತಪ್ಪಸ್ಸು ಮಾಡುತ್ತಾನೆ. ಇದನ್ನು ಕಂಡ ಅಗಸ್ತ್ಯರು, ರಾಮನನ್ನು ಉತೇಜಿಸುತ್ತಾರೆ. ನಂತರ ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸುತ್ತಾ ಸೂರ್ಯನಿಗೆ ತನ್ನ ಪ್ರಾರ್ಥನೆ ಸಲ್ಲಿಸುವಂತೆ ಅಗಸ್ತ್ಯ ಮಹಾ ಋಷಿಗಳು ಹೇಳಿಕೊಡುತ್ತಾರೆ. ರಾಮನು ಅಗಸ್ತ್ಯ ಮಹಾ ಋಷಿಗಳು ಹೇಳಿದ್ದಂತೆಯೇ ಶ್ರೀ ರಾಮನು ಮಾಡುತ್ತಾನೆ. ಇದನ್ನು ಮಾಡುತ್ತಿದ್ದಂತೆ ರಾಮನು ಅತ್ಯಂತ ಶಕ್ತಿದಾಯದ ಮತ್ತು ನಿರ್ಣಾಯಕ ಹೋರಾಟಕ್ಕೆ ಸಿದ್ಧನಾಗುತ್ತಾನೆ. ಆದಿತ್ಯ ಹೃದಯ ಸ್ತೋತ್ರ ಪಠಣದಿಂದ ನೀವು ಅಂದುಕೊಂಡ ಕೆಲಸ ಕಾರ್ಯ ಪೂರ್ಣಗೊಳಿಸಿಕೊಳ್ಳಬಹುದು. ಅದಕ್ಕಾಗಿಯೇ ಶ್ರೀ ರಾಮನೂ ಕೂಡ ಯುದ್ಧಕ್ಕೆ ಮುನ್ನ ಸ್ತೋತ್ರವನ್ನು ಪಠಿಸುತ್ತಾನೆ.
ಭಾನುವಾರವೇ ಏಕೆ ಪಠಿಸಬೇಕು.?
ಹಿಂದೂ ಧರ್ಮದಲ್ಲಿ ಒಂದೊಂದು ದಿನ ಒಂದೊಂದು ದೇವರಿಗೆ ಮೀಸಲಿದೆ. ಹೇಗೆ ಶನಿವಾರ ಶನಿ ದೇವನನ್ನು, ಮಂಗಳವಾರ ಹನುಮಂತನನ್ನು ಪೂಜಿಸುತ್ತೇವೋ ಅದೇ ರೀತಿ ಭಾನುವಾರ ಸೂರ್ಯನನ್ನು ಪೂಜಿಸಲಾಗುವುದು.
ಭಾನುವಾರ ಸೂರ್ಯನಿಗೆ ಆರ್ಘ್ಯ ಸಲ್ಲಿಸಿ ಆದಿತ್ಯ ಹೃದಯ ಸ್ತೋತ್ರ ಪಠಿಸಿದರೆ ಒಳ್ಳೆಯದು. ಈ ಸ್ತೋತ್ರ ಪಠಿಸುವವರು ಆ ದಿನ ಉಪ್ಪು, ಗೋಧಿ, ಮದ್ಯ-ಮಾಂಸದ ಆಹಾರಗಳನ್ನು ದೂರವಿಡಬೇಕು.
ಈ ಸೂತ್ರ ಹೇಳುವ ಮುಖಾಂತರ ಸೂರ್ಯನಿಂದ ಆಶೀರ್ವಾದ ಬೇಡಲಾಗುವುದು.
ಸೂರ್ಯ ದೇವನ ಆಶೀರ್ವಾದವಿದ್ದರೆ ಜೀವನದಲ್ಲಿ ಕಷ್ಟಗಳನ್ನು ಸುಲಭವಾಗಿ ಎದುರಿಸುವ ಶಕ್ತಿ ಸಿಗುವುದು.
ಆದಿತ್ಯ ಹೃದಯ ಸ್ತೋತ್ರವನ್ನು ಪಠಿಸುವುದರಿಂದಾಗುವ ಪ್ರಯೋಜನಗಳು
ನಮಗೆ ಏನಾದರೂ ಪ್ರಯೋಜನವಾಗುವವರೆಗೆ ನಾವು ಎಂದಿಗೂ ಯಾವುದರ ಬಗ್ಗೆಯೂ ಆಸಕ್ತಿ ವಹಿಸುವುದಿಲ್ಲ. ಆದಿತ್ಯ ಹೃದಯ ಸ್ತೋತ್ರವು ಅಸಂಖ್ಯಾತ ವಿಶ್ವಾಸಗಳು ಮತ್ತು ಪ್ರಯೋಜನಗಳನ್ನು ಹೊಂದಿದೆ. ಅಂತಹ ಪ್ರಯೋಜನಗಳು ಇಲ್ಲಿವೆ.
ಆದಿತ್ಯ ಹೃದಯಸ್ತೋತ್ರ ಪಠಣದಿಂದ ಪ್ರಯೋಜನ
ಅಗಸ್ತ್ಯ ಋಷಿಗಳು ಸ್ತೋತ್ರದ ಮಹಿಮೆಯನ್ನು ವರ್ಣಿಸುತ್ತಾ “ಆದಿತ್ಯ ಹೃದಯಂ ಪುಣ್ಯಂ ಸರ್ವ ಶತ್ರು ವಿನಾಶನಮ…’ ಅಂದರೆ, ದಿನನಿತ್ಯ ಈ ಸ್ತೋತ್ರವನ್ನು ಪಠಿಸುವುದರಿಂದ ಅವರ ಶತ್ರುಗಳು ವಿನಾಶ ಹೊಂದುತ್ತಾರೆ. ಚಿಂತೆ, ಶೋಕಾದಿ ಮಾನಸಿಕ ಹಾಗೂ ದೈಹಿಕ ರೋಗಗಳು ನಾಶವಾಗಿ, ಪಾಪಗಳು ಕಳೆದು, ಅಕ್ಷಯ ಫಲಪ್ರಾಪ್ತಿಯಾಗುತ್ತದೆ. ಅಲ್ಲದೇ ಮಂಗಳ ಕಾರ್ಯಗಳಲ್ಲಿ ಶುಭ ಉಂಟಾಗುತ್ತದೆ ಎಂದು ಹೇಳಿದ್ದಾರೆ. ವಿಶೇಷವಾಗಿ ಕಣ್ಣಿನ ಸಮಸ್ಯೆ ಇರುವವರು, ತಂದೆಯ ಜತೆ ವೈಮನಸ್ಸು ಇರುವವರು ಈ ಸ್ತೋತ್ರವನ್ನು ನಿತ್ಯವೂ ಪಠಿಸುವುದರಿಂದ ಸಮಸ್ಯೆಗಳು ನಾಶವಾಗುತ್ತವೆ ಎಂದು ಉಲ್ಲೇಖಿಸಲಾಗಿದೆ. ಸ್ತೋತ್ರದಲ್ಲಿ ಮುನಿಗಳು “ಏಷಃ’ಎನ್ನುವ ಪದ ಬಳಕೆ ಮಾಡಿರುವುದರಿಂದ ಉಷಕಾಲದಲ್ಲಿ ಸ್ತೋತ್ರಪಠಣ ತುಂಬಾ ಪರಿಣಾಮಕಾರಿ ಎಂದು ಹೇಳಲಾಗಿದೆ
ಆದಿತ್ಯ ಹೃದಯ ಸ್ತೋತ್ರಮ್
ತತೋ ಯುದ್ಧ ಪರಿಶ್ರಾಂತಂ ಸಮರೇ ಚಿಂತಯಾ ಸ್ಥಿತಮ್ |
ರಾವಣಂ ಚಾಗ್ರತೋ ದೃಷ್ಟ್ವಾ ಯುದ್ಧಾಯ ಸಮುಪಸ್ಥಿತಮ್ || 1 ||
ದೈವತೈಶ್ಚ ಸಮಾಗಮ್ಯ ದ್ರಷ್ಟುಮಭ್ಯಾಗತೋ ರಣಮ್ |
ಉಪಗಮ್ಯಾ ಬ್ರವೀದ್ರಾಮಮ್ ಅಗಸ್ತ್ಯೋ ಭಗವಾನ್ ಋಷಿಃ || 2 ||
ರಾಮ ರಾಮ ಮಹಾಬಾಹೋ ಶೃಣು ಗುಹ್ಯಂ ಸನಾತನಮ್ |
ಯೇನ ಸರ್ವಾನರೀನ್ ವತ್ಸ ಸಮರೇ ವಿಜಯಿಷ್ಯಸಿ || 3 ||
ಆದಿತ್ಯ ಹೃದಯಂ ಪುಣ್ಯಂ ಸರ್ವಶತ್ರು ವಿನಾಶನಮ್ |
ಜಯಾವಹಂ ಜಪೇನ್ನಿತ್ಯಮ್ ಅಕ್ಷಯ್ಯಂ ಪರಮಂ ಶಿವಮ್ || 4 ||
ಸರ್ವಮಂಗಳ ಮಾಂಗಳ್ಯಂ ಸರ್ವ ಪಾಪ ಪ್ರಣಾಶನಮ್ |
ಚಿಂತಾಶೋಕ ಪ್ರಶಮನಮ್ ಆಯುರ್ವರ್ಧನ ಮುತ್ತಮಮ್ || 5 ||
ರಶ್ಮಿಮಂತಂ ಸಮುದ್ಯಂತಂ ದೇವಾಸುರ ನಮಸ್ಕೃತಮ್ |
ಪೂಜಯಸ್ವ ವಿವಸ್ವಂತಂ ಭಾಸ್ಕರಂ ಭುವನೇಶ್ವರಮ್ || 6 ||
ಸರ್ವದೇವಾತ್ಮಕೋ ಹ್ಯೇಷ ತೇಜಸ್ವೀ ರಶ್ಮಿಭಾವನಃ |
ಏಷ ದೇವಾಸುರ ಗಣಾನ್ ಲೋಕಾನ್ ಪಾತಿ ಗಭಸ್ತಿಭಿಃ || 7 ||
ಏಷ ಬ್ರಹ್ಮಾ ಚ ವಿಷ್ಣುಶ್ಚ ಶಿವಃ ಸ್ಕಂದಃ ಪ್ರಜಾಪತಿಃ |
ಮಹೇಂದ್ರೋ ಧನದಃ ಕಾಲೋ ಯಮಃ ಸೋಮೋ ಹ್ಯಪಾಂ ಪತಿಃ || 8 ||
ಪಿತರೋ ವಸವಃ ಸಾಧ್ಯಾ ಹ್ಯಶ್ವಿನೌ ಮರುತೋ ಮನುಃ |
ವಾಯುರ್ವಹ್ನಿಃ ಪ್ರಜಾಪ್ರಾಣಃ ಋತುಕರ್ತಾ ಪ್ರಭಾಕರಃ || 9 ||
ಆದಿತ್ಯಃ ಸವಿತಾ ಸೂರ್ಯಃ ಖಗಃ ಪೂಷಾ ಗಭಸ್ತಿಮಾನ್ |
ಸುವರ್ಣಸದೃಶೋ ಭಾನುಃ ಹಿರಣ್ಯರೇತಾ ದಿವಾಕರಃ || 10 ||
ಹರಿದಶ್ವಃ ಸಹಸ್ರಾರ್ಚಿಃ ಸಪ್ತಸಪ್ತಿ-ರ್ಮರೀಚಿಮಾನ್ |
ತಿಮಿರೋನ್ಮಥನಃ ಶಂಭುಃ ತ್ವಷ್ಟಾ ಮಾರ್ತಾಂಡಕೋsಅಂಶುಮಾನ್ || 11 ||
ಹಿರಣ್ಯಗರ್ಭಃ ಶಿಶಿರಃ ತಪನೋ ಭಾಸ್ಕರೋ ರವಿಃ |
ಅಗ್ನಿಗರ್ಭೋஉದಿತೇಃ ಪುತ್ರಃ ಶಂಖಃ ಶಿಶಿರನಾಶನಃ || 12 ||
ವ್ಯೋಮನಾಥ ಸ್ತಮೋಭೇದೀ ಋಗ್ಯಜುಃಸಾಮ-ಪಾರಗಃ |
ಘನಾವೃಷ್ಟಿ ರಪಾಂ ಮಿತ್ರೋ ವಿಂಧ್ಯವೀಥೀ ಪ್ಲವಂಗಮಃ || 13 ||
ಆತಪೀ ಮಂಡಲೀ ಮೃತ್ಯುಃ ಪಿಂಗಳಃ ಸರ್ವತಾಪನಃ
ಕವಿರ್ವಿಶ್ವೋ ಮಹಾತೇಜಾ ರಕ್ತಃ ಸರ್ವಭವೋದ್ಭವಃ || 14 ||
ನಕ್ಷತ್ರ ಗ್ರಹ ತಾರಾಣಾಮ್ ಅಧಿIST ಜನನವಿಶ್ವಭಾವನಃ |
ತೇಜಸಾಮಪಿ ತೇಜಸ್ವೀ ದ್ವಾದಶಾತ್ಮನ್-ನಮೋsಸ್ತು ತೇ || 15 ||
ನಮಃ ಪೂರ್ವಾಯ ಗಿರಯೇ ಪಶ್ಚಿಮಾಯಾದ್ರಯೇ ನಮಃ |
ಜ್ಯೋತಿರ್ಗಣಾನಾಂ ಪತಯೇ ದಿನಾಧಿಪತಯೇ ನಮಃ || 16 ||
ಜಯಾಯ ಜಯಭದ್ರಾಯ ಹರ್ಯಶ್ವಾಯ ನಮೋ ನಮಃ |
ನಮೋ ನಮಃ ಸಹಸ್ರಾಂಶೋ ಆದಿತ್ಯಾಯ ನಮೋ ನಮಃ || 17 ||
ನಮ ಉಗ್ರಾಯ ವೀರಾಯ ಸಾರಂಗಾಯ ನಮೋ ನಮಃ |
ನಮಃ ಪದ್ಮಪ್ರಬೋಧಾಯ ಮಾರ್ತಾಂಡಾಯ ನಮೋ ನಮಃ || 18 ||
ಬ್ರಹ್ಮೇಶಾನಾಚ್ಯುತೇಶಾಯ ಸೂರ್ಯಾಯಾದಿತ್ಯ-ವರ್ಚಸೇ |
ಭಾಸ್ವತೇ ಸರ್ವಭಕ್ಷಾಯ ರೌದ್ರಾಯ ವಪುಷೇ ನಮಃ || 19 ||
ತಮೋಘ್ನಾಯ ಹಿಮಘ್ನಾಯ ಶತ್ರುಘ್ನಾಯಾ ಮಿತಾತ್ಮನೇ |
ಕೃತಘ್ನಘ್ನಾಯ ದೇವಾಯ ಜ್ಯೋತಿಷಾಂ ಪತಯೇ ನಮಃ || 20 ||
ತಪ್ತ ಚಾಮೀಕರಾಭಾಯ ವಹ್ನಯೇ ವಿಶ್ವಕರ್ಮಣೇ |
ನಮಸ್ತಮೋಭಿ ನಿಘ್ನಾಯ ರುಚಯೇ ಲೋಕಸಾಕ್ಷಿಣೇ || 21 ||
ನಾಶಯತ್ಯೇಷ ವೈ ಭೂತಂ ತದೇವ ಸೃಜತಿ ಪ್ರಭುಃ |
ಪಾಯತ್ಯೇಷ ತಪತ್ಯೇಷ ವರ್ಷತ್ಯೇಷ ಗಭಸ್ತಿಭಿಃ || 22 ||
ಏಷ ಸುಪ್ತೇಷು ಜಾಗರ್ತಿ ಭೂತೇಷು ಪರಿನಿಷ್ಠಿತಃ |
ಏಷ ಏವಾಗ್ನಿಹೋತ್ರಂ ಚ ಫಲಂ ಚೈವಾಗ್ನಿ ಹೋತ್ರಿಣಾಮ್ || 23 ||
ವೇದಾಶ್ಚ ಕ್ರತವಶ್ಚೈವ ಕ್ರತೂನಾಂ ಫಲಮೇವ ಚ |
ಯಾನಿ ಕೃತ್ಯಾನಿ ಲೋಕೇಷು ಸರ್ವ ಏಷ ರವಿಃ ಪ್ರಭುಃ || 24 ||
ಫಲಶ್ರುತಿ :-
ಏನ ಮಾಪತ್ಸು ಕೃಚ್ಛ್ರೇಷು ಕಾಂತಾರೇಷು ಭಯೇಷು ಚ |
ಕೀರ್ತಯನ್ ಪುರುಷಃ ಕಶ್ಚಿನ್-ನಾವಶೀದತಿ ರಾಘವ || 25 ||
ಪೂಜಯಸ್ವೈನ ಮೇಕಾಗ್ರೋ ದೇವದೇವಂ ಜಗತ್ಪತಿಮ್ |
ಏತತ್ ತ್ರಿಗುಣಿತಂ ಜಪ್ತ್ವಾ ಯುದ್ಧೇಷು ವಿಜಯಿಷ್ಯಸಿ || 26 ||
ಅಸ್ಮಿನ್ ಕ್ಷಣೇ ಮಹಾಬಾಹೋ ರಾವಣಂ ತ್ವಂ ವಧಿಷ್ಯಸಿ |
ಏವಮುಕ್ತ್ವಾ ತದಾಗಸ್ತ್ಯೋ ಜಗಾಮ ಚ ಯಥಾಗತಮ್ || 27 ||
ಏತಚ್ಛ್ರುತ್ವಾ ಮಹಾತೇಜಾಃ ನಷ್ಟಶೋಕೋsಭವತ್-ತದಾ |
ಧಾರಯಾಮಾಸ ಸುಪ್ರೀತೋ ರಾಘವಃ ಪ್ರಯತಾತ್ಮವಾನ್ || 28 ||
ಆದಿತ್ಯಂ ಪ್ರೇಕ್ಷ್ಯ ಜಪ್ತ್ವಾ ತು ಪರಂ ಹರ್ಷಮವಾಪ್ತವಾನ್ |
ತ್ರಿರಾಚಮ್ಯ ಶುಚಿರ್ಭೂತ್ವಾ ಧನುರಾದಾಯ ವೀರ್ಯವಾನ್ || 29 ||
ರಾವಣಂ ಪ್ರೇಕ್ಷ್ಯ ಹೃಷ್ಟಾತ್ಮಾ ಯುದ್ಧಾಯ ಸಮುಪಾಗಮತ್ |
ಸರ್ವಯತ್ನೇನ ಮಹತಾ ವಧೇ ತಸ್ಯ ಧೃತೋsಭವತ್ || 30 ||
ಅಥರವಿರವದನ್-ನಿರೀಕ್ಷ್ಯ ರಾಮಂ ಮುದಿತಮನಾಃ ಪರಮಂ ಪ್ರಹೃಷ್ಯಮಾಣಃ |
ನಿಶಿಚರಪತಿ ಸಂಕ್ಷಯಂ ವಿದಿತ್ವಾ ಸುರಗಣ ಮಧ್ಯಗತೋ ವಚಸ್ತ್ವರೇತಿ || 31 || || ಇತಿ ಆದಿತ್ಯ ಹೃದಯ ಸ್ತೋತ್ರಮ್ ಸಂಪೂರ್ಣಂ ||