
ಭೋಪಾಲ್ (ಮಧ್ಯಪ್ರದೇಶ) – ರಾಜಕೀಯ ಪರ – ವಿರೋಧಗಳು ಕೆಲವೊಮ್ಮೆ ಕುಟುಂಬದವರ ಮಧ್ಯೆ, ಸ್ನೇಹಿತರ ಮಧ್ಯೆಯೂ ಸಹ ಬಂದು ಬಿಡುತ್ತೆ…!
ಆದರೆ ಯಾವುದೂ ಅತಿರೇಕಕ್ಕೆ ಹೋಗದ ಹಾಗೆ ನೋಡಿಕೊಳ್ಳುವುದು ಜಾಣತನ…!!
ಆದರೆ ಮಧ್ಯಪ್ರದೇಶದ ಭೋಪಾಲ್ ನಲ್ಲಿ ಒಂದು ಘಟನೆ ನಡೆದಿದೆ, ಗಂಡ – ಹೆಂಡತಿಯ ಸಂಬಂಧದ ಮಧ್ಯೆ ರಾಜಕೀಯ ಬಂದು ಡೈವೋರ್ಸ್ ಗೆ ಕಾರಣವಾಗಿದೆ…!
ಹೆಂಡತಿ ಬಿಜೆಪಿಗೆ ವೋಟ್ ಹಾಕಿದಳು ಎಂಬ ಕ್ಷುಲ್ಲಕ ಕಾರಣಕ್ಕೆ ಗಂಡ ಆಕೆಗೆ ತ್ರಿವಳಿ ತಲಾಖ್ ನೀಡಿದ್ದಾನಂತೆ…!!
ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯ 26 ವರ್ಷದ ಮಹಿಳೆಯೊಬ್ಬರು ಬಿಜೆಪಿಗೆ ಬೆಂಬಲಿಸಿದ್ದಕ್ಕೆ ಆಕೆಯ ಪತಿ ತ್ರಿವಳಿ ತಲಾಖ್ ನೀಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ…!
ಭಾನುವಾರ ನೀಡಿದ ದೂರಿನಲ್ಲಿ, ಮಹಿಳೆ ತನ್ನ ಎಂಟು ವರ್ಷಗಳ ದಾಂಪತ್ಯ ಆರಂಭದಲ್ಲಿ ಚೆನ್ನಾಗಿಯೇ ಇತ್ತು, ಕಾಲಾನಂತರದಲ್ಲಿ ಆಕೆಯ ಪತಿ, ಅತ್ತೆ ಮತ್ತು ನಾದನಿಯರು ಅವಳನ್ನು ಅನೇಕ ವಿಚಾರಗಳಿಗೆ ನಿಂದಿಸಲು ಮತ್ತು ಹೊಡೆಯಲು ಪ್ರಾರಂಭಿಸಿದರು ಎಂದು ದೂರಿದ್ದಾರೆ, ಇದಲ್ಲದೆ, ಸುಮಾರು ಒಂದೂವರೆ ವರ್ಷಗಳ ಹಿಂದೆ ತನ್ನನ್ನು ಮನೆಯಿಂದ ಹೊರಹಾಕಲಾಯಿತು, ಅಂದಿನಿಂದ ಬಾಡಿಗೆ ಕೋಣೆಯಲ್ಲಿ ತನ್ನ ಪತಿಯೊಂದಿಗೆ ವಾಸಿಸುತ್ತಿದ್ದೇನೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ…!!
ಬಿಜೆಪಿಗೆ ಬೆಂಬಲಿಸಿದ್ದಕ್ಕೆ ತಲಾಖ್…!
ಮಹಿಳೆಯ ದೂರಿನ ಪ್ರಕಾರ, ಬಿಜೆಪಿ ಪಕ್ಷಕ್ಕೆ ಆಕೆಯ ಬೆಂಬಲ ಮತ್ತು ಅದರ ಪರವಾಗಿ ಆಕೆ ಮತ ಚಲಾಯಿಸಿದ್ದು ಆಕೆಯ ಪತಿಯನ್ನು ಕೆರಳಿಸುವಂತೆ ಮಾಡಿದೆ…!
ಇದು ಆಕೆಗೆ ಅವಳ ಪತಿ ತ್ರಿವಳಿ ತಲಾಖ್ ನೀಡಲು ಕಾರಣವಾಯಿತು ಹೇಳಿದ್ದಾಳೆ…!!
ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ಆಕೆಯ ಪತಿ, ಅತ್ತೆ ಮತ್ತು ನಾಲ್ವರು ನಾದನಿಯರ ವಿರುದ್ಧ ಭಾರತೀಯ ದಂಡ ಸಂಹಿತೆಯಡಿ ವರದಕ್ಷಿಣೆ ನಿಷೇಧ ಕಾಯ್ದೆ, ಮುಸ್ಲಿಂ ಮಹಿಳೆಯರ (ವಿವಾಹ ಹಕ್ಕುಗಳ ರಕ್ಷಣೆ) ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ…!
ಆದರೆ ಪತ್ನಿಯ ಆರೋಪವನ್ನು ಪತಿ ನಿರಾಕರಿಸಿದ್ದಾನೆ…!
ಆಕೆ ವಿವಾಹೇತರ ಸಂಬಂಧಗಳನ್ನು ಹೊಂದಿದ್ದಾಳೆಂದು ಆರೋಪಿಸಿದ್ದಾನೆ…!!
ತಮ್ಮ ಮಗುವಿನ ಸಲುವಾಗಿ ಹಲವಾರು ಅವಕಾಶಗಳನ್ನು ನೀಡಿದರು ಆಕೆ ಸರಿ ದಾರಿಗೆ ಬಂದಿಲ್ಲ…!
ನಮ್ಮ ಪ್ರಕರಣದಲ್ಲಿ ಯಾವುದೇ ಪಕ್ಷ, ಚುನಾವಣೆ, ಮತದ ವಿಚಾರ ಇಲ್ಲ ಎಂದು ಹೇಳಿದ್ದಾರೆ…!!