
ತಮಿಳುನಾಡಿನಲ್ಲಿ ಹಿಂದುತ್ವದ ಮಹಾನಾಯಕಿಯಾಗಿದ್ದ ಜಯಲಲಿತಾ ಅವರ ನಿಧನದ ಅನಂತರ ಉಂಟಾದ ಶೂನ್ಯವನ್ನು ಬಿಜೆಪಿಯ ಹಿಂದುತ್ವ ತುಂಬುತ್ತಿದೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಹೇಳಿದ್ದಾರೆ…!
ಸುದ್ದಿಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಈ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ತಮಿಳುನಾಡಿನಲ್ಲಿ ಎರಡಂಕಿ ಸ್ಥಾನಗಳನ್ನು ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು…!!
ರಾಜ್ಯದಲ್ಲಿ 3ನೇ ದೊಡ್ಡ ಪಕ್ಷವಾಗಿ ಗುರುತಿಸಿಕೊಳ್ಳಲಿದೆ ಎಂದಿದ್ದಾರೆ. ಜಯಲಲಿತಾ ಬದುಕಿದ್ದರೆ ಅವರು ತಮಿಳುನಾಡಿನಲ್ಲೇ ಅತಿದೊಡ್ಡ ಹಿಂದುತ್ವ ನಾಯಕಿಯಾಗಿರುತ್ತಿದ್ದರು…!
ಎಲ್ಲ ಹಿಂದೂ ಮತಗಳು ಅವರಿಗೆ ಸಿಗುತ್ತಿದ್ದವು, ರಾಮಮಂದಿರವನ್ನು ಮೊದಲು ಬೆಂಬಲಿಸಿದ್ದು ಜಯಲಲಿತಾ, ಅವರು ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಿದ್ದರು, ಹಲವು ದೇವಸ್ಥಾನಗಳಿಗೆ ಆನೆಗಳನ್ನು ದಾನ ಕೊಟ್ಟಿದ್ದರು ಎಂದಿದ್ದಾರೆ…!!